Advertisement

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

12:32 AM Aug 14, 2022 | Team Udayavani |

ಉಡುಪಿ: ಉದ್ಯಾವರದ ಉದ್ಯಮಿ ವೀರೇಂದ್ರ ಹೆಗ್ಡೆ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಕದ್ದು ಬೆದರಿಸಿ, ಹಣ ಸುಲಿಗೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಆರೋಪಿ ಬೈಲೂರಿನ ನಿವಾಸಿ ಪಾಂಡುರಂಗ ಕಿಣಿ ವಿರುದ್ಧ ಮಂಗಳೂರಿನ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

Advertisement

ಕೆಲವು ವರ್ಷಗಳ ಹಿಂದೆ ಆರೋಪಿ ಹಣದ ಸಹಾಯ ಕೇಳಿಕೊಂಡು ಬಂದಿದ್ದು, ಅನಂತರದ ದಿನಗಳಲ್ಲಿ ವೀರೇಂದ್ರ ಹೆಗ್ಡೆ ಅವರೊಂದಿಗೆ ಮಿತೃತ್ವ ಬೆಳೆಸಿಕೊಂಡಿದ್ದ. ಇತರ ಮೂವರು ಆರೋಪಿಗಳಾದ ಹರಿಪ್ರಸಾದ್‌, ಇಮಿ¤ಯಾಜ್‌, ಸತ್ಯನಾಥ್‌ ಪೈ ಅವರನ್ನು ಸೇರಿಸಿಕೊಂಡು ಬೆದರಿಸಿ, ಹಣ ಲಪಟಾಯಿಸಲು ಯೋಜನೆ ರೂಪಿಸಿದ್ದು, ಉದ್ಯಮಿಯ ಜವಳಿ ಕಟ್ಟಡದ ಬಗ್ಗೆ ವಿವಿಧ ಸರಕಾರಿ ಇಲಾಖೆ ಗಳಿಗೆ ಸುಳ್ಳು ಅರ್ಜಿಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಅರ್ಜಿಗಳನ್ನು ಹಿಂಪಡೆಯಲು 2 ಕೋ. ರೂ. ನೀಡುವಂತೆ ಬ್ಲ್ಯಾಕ್‌ವೆುàಲ್‌ ಮಾಡಿದ್ದಾರೆ. ಅಲ್ಲದೆ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ವೀರೇಂದ್ರ ಹೆಗ್ಡೆ ದೂರಿನಲ್ಲಿ ಆರೋಪಿಸಿದ್ದಾರೆ.

5 ಕೋ. ರೂ.ಗೆ ಬೇಡಿಕೆ
ಬೆಂಗಳೂರಿನಲ್ಲಿ ಹರಿಪ್ರಸಾದ್‌ ಎಂಬವನನ್ನು ಶಾಮೀಲಾಗಿಸಿಕೊಂಡು ಬೆಂಗಳೂರಿಗೆ ಕರೆಸಿಕೊಂಡ ಆರೋಪಿ ಗಳು ಪಿಸ್ತೂಲ್‌ ತೋರಿಸಿ, ಬೆದರಿಸಿದ್ದು, 5 ಕೋ. ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಲ್ಲದಿದ್ದಲ್ಲಿ ಉದ್ಯಾವರದ ಕಟ್ಟಡವನ್ನು ವಿವಿಧ ಇಲಾಖೆಗಳ ಮೂಲಕ ನೆಲಸಮಗೊಳಿಸುವುದಾಗಿ ಬೆದರಿಕೆ ಯೊಡ್ಡಿದ್ದಾರೆ ಎಂದು ವೀರೇಂದ್ರ ಹೆಗ್ಡೆ ಕೇಸು ದಾಖಲಿಸಿದ್ದಾರೆ. ವಿವಿಧ ಇಲಾಖೆಗೆ ನೀಡಿದ ಸುಳ್ಳು ದೂರಿನ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ಮಾನನಷ್ಟದ ಖಾಸಗಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next