ನೆಲ್ಯಾಡಿ: ನೆಲ್ಯಾಡಿ ಸಮೀಪ ಜೀಪ್ ಪಲ್ಟಿಯಾಗಿ ಬಾಲಕ ಮೃತಪಟ್ಟ ದಾರುಣ ಘಟನೆ ಮಂಗಳವಾರ ತಡ ರಾತ್ರಿ ಸಂಭವಿಸಿದೆ.
Advertisement
ನೆಲ್ಯಾಡಿ ಅತ್ರಿಜಾಲು ನಿವಾಸಿ, ನೆಲ್ಯಾಡಿ ಗ್ರಾ.ಪಂ. ಮಾಜಿ ಸದಸ್ಯ ಸುಂದರ ಗೌಡ ಅವರ ಪುತ್ರ,ಪಡುಬೆಟ್ಟು ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸುಶ್ಮಿತ್(13) ಮೃತ ಬಾಲಕ. ಜೀಪು ಚಾಲಕ ಸತೀಶ್ಚಂದ್ರ, ಮೃತ ಬಾಲಕನ ತಂದೆ ಸುಂದರ ಗೌಡ ಹಾಗೂ ತಾಯಿ ಸಹಿತ 9ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿ ಸಲಾಗಿದೆ. ಇವರೆಲ್ಲರೂ 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ದೇವಸ್ಥಾನದಲ್ಲಿ ಪ್ರದರ್ಶನವಾಗಿದ್ದ ಯಕ್ಷಗಾನವನ್ನು ವೀಕ್ಷಿಸಿ ಊರಿಗೆ ಹಿಂದಿರುಗುತ್ತಿದ್ದಾಗ ಅಪ ಘಾತ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ ಮಠ ಎಂಬಲ್ಲಿ ಶನಿವಾರ ಬೈಕ್ ಮತ್ತು ಕೈನೆಟಿಕ್ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಕೈನೆಟಿಕ್ ಸವಾರ, ಮೂಲತಃ ಕಡವಿನಬಾಗಿಲು ಎಲೈಟ್ ಇಸ್ಮಾಯಿಲ್ ಅವರ ಪುತ್ರ ಹನೀಫ್ (45) ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ತಡರಾತ್ರಿ ಕೊನೆಯುಸಿರೆಳೆದರು. ಉಪ್ಪಿನಂಗಡಿಯ ಬೆಸ್ಟ್ ಬೇಕರಿ ಮಾಲಕರಾಗಿದ್ದ ಹನೀಫ್ ಅವರು ಈ ಹಿಂದೆ ಸೌದಿ ಅರೇಬಿಯಾದಲ್ಲಿದ್ದರು. ನಾಲ್ಕು ವರ್ಷಗಳ ಹಿಂದೆ ಊರಿಗೆ ಬಂದು ಬೇಕರಿ ಆರಂಭಿ ಸಿದ್ದರು. ಶನಿವಾರ ಮಧ್ಯಾಹ್ನ ಬೇಕರಿಯಿಂದ ಮನೆಗೆ ಹೋಗುವಾಗ ಅಪಘಾತ ಸಂಭವಿಸಿತ್ತು. ಮೃತರು ಪತ್ನಿ ಹಾಗೂ ಪುತ್ರ ನನ್ನು ಅಗಲಿದ್ದಾರೆ.
Related Articles
ಕಡಬ: ರಸ್ತೆಗಡ್ಡ ಬಂದ ನಾಯಿಯನ್ನು ರಕ್ಷಿಸಲೆಂದು ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿದ ರೆನಾಲ್ಟ… ಡಸ್ಟರ್ ಕಾರೊಂದು ಅರಣ್ಯ ಇಲಾಖೆಯ ವಸತಿ ಗೃಹದ ಕಟ್ಟಡಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಘಟನೆ ಕೊಂಬಾರು ಗ್ರಾಮದ ಕೆಂಜಾಲದಲ್ಲಿ ಬುಧವಾರ ಸಂಭವಿಸಿದೆ.
Advertisement
ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕಾರಿಗೆ ಕೆಂಜಾಳ ಸಮೀಪ ನಾಯಿ ಅಡ್ಡ ಬಂದಿದೆ ಎನ್ನಲಾಗಿದೆ. ಕಾರಿನಲ್ಲಿದ್ದ ಬೆಂಗಳೂರು ಮೂಲದ ಕುಟುಂಬವೊಂದರ ಸದ ಸ್ಯರು ಪವಾಡಸದೃಶ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ವಸತಿಗೃಹದ ಗೋಡೆಗೆ ಹಾನಿಯಾಗಿದೆ.
ಯುವಕನ ಕೊಲೆಮಂಗಳೂರು: ಸ್ಟೇಟ್‌ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆ ಹಿಂಭಾಗದ ಪಾರ್ಕ್‌ನಲ್ಲಿ ಬಲ್ಲಾಳ್ ಬಾಗ್ ನಿವಾಸಿ ಶರತ್ (35)ನನ್ನು ಹೊಡೆದು ಕೊಲೆ ಮಾಡಲಾಗಿದೆ. ಕೊಂದ ಬಳಿಕ ದೇಹದ ಮೇಲೆ ಸಿಮೆಂಟ್ ಚಪ್ಪಡಿ ಕಲ್ಲನ್ನು ಇಡಲಾಗಿತ್ತು.ಹೆಂಚಿನಿಂದ ತೀವ್ರ ಹಲ್ಲೆ ಮಾಡಿರುವ ಹಿನ್ನೆಲೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನ ಮೇಲೆ ಮೇಲೆ ಚಪ್ಪಡಿ ಕಲ್ಲನ್ನು ಇಟ್ಟಿದ್ದ ಪರಿಣಾಮ ಏಳಲಾಗದೆ ಸ್ಥಳದಲ್ಲೇ ಕೊನೆಯುಸಿರೆಳೆದಿರಬಹುದು ಎಂದು ಶಂಕಿಸಲಾಗಿದೆ. ಈತ ಮನೆಯಲ್ಲಿ ಒಬ್ಬಂಟಿಯಾಗಿದ್ದ. ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು, ಕೊಲೆ ಯಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ. ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 20 ವರ್ಷ ಜೈಲು
ಮಂಗಳೂರು: ಕಾಲೇಜಿನಿಂದ ಮರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆ ಸಗಿದ್ದ ಇಬ್ಬರಿಗೆ ಮಂಗಳೂರಿನ ಎರಡನೇ ಜಿಲ್ಲಾ ಹೆಚ್ಚುವರಿ ಮತ್ತು ಪೋಕೊÕ ವಿಶೇಷ ನ್ಯಾಯಾಲಯ 20 ವರ್ಷ ಕಠಿನ ಸಜೆ ಮತ್ತು 20 ಸಾ.ರೂ. ದಂಡ ವಿಧಿಸಿದೆ. ಬೆಳ್ತಂಗಡಿ ಕೊಯ್ಯೂರು ಕೊಪ್ಪದಬೈಲು ಮನೆ ನಿವಾಸಿ ಸಚಿನ್ ಕುಮಾರ್(22) ಮತ್ತು ಲಾೖಲ ಪಟ್ಲಾಡಿಯ ಕೆ.ಟಿ. ಮ್ಯಾಥ್ಯೂ ಯಾನೆ ಮನು(24) ಶಿಕ್ಷೆಗೊಳಗಾದವರು.
ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚು ವರಿ 6 ತಿಂಗಳು ಶಿಕ್ಷೆ ಅನುಭವಿಸಬೇಕು. ದಂಡದಲ್ಲಿ 18 ಸಾ. ರೂ.ಅನ್ನು ಸಂತ್ರಸ್ತೆಗೆ ನೀಡಬೇಕು ಎಂದು ಆದೇಶಿಸಿದೆ.2015ರ ಮಾ.7ರಂದು ಘಟನೆ ನಡೆ ದಿತ್ತು.ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ಅವರು ಐಪಿಸಿ ಸೆಕ್ಷನ್ 376 (ಡಿ) ಪ್ರಕಾರ ಶಿಕ್ಷೆ ವಿಧಿಸಿದ್ದು, ಸರಕಾರಿ ಅಭಿಯೋಜಕರಾಗಿ ಸಿ. ವೆಂಕಟ ರಮಣಸ್ವಾಮಿ ವಾದಿಸಿದ್ದರು. ಅಡಿಕೆ ಕಳವು: ಸೆರೆ
ಬಜಪೆ:ಕತ್ತಲ್‌ಸಾರ್‌ನ ಎರಡು ಮನೆಗಳಿಂದ ಅಡಿಕೆ ಕಳವು ಮಾಡಿದ ಆರೋಪಿ ಪಡುಪೆರಾರ ಗ್ರಾಮ ಕತ್ತಲ್ ಸಾರ್ ಮೊಡಂಕ ಹಿತ್ತು ಮನೆಯ ಮಹೇಂದ್ರ ಯಾನೆ ಮಯ್ಯು (31) ಎಂಬಾತನನ್ನು ಬಜಪೆ ಪೊಲೀಸರು ಬಂಧಿಸಿ, ಕದ್ದ ಸೊತ್ತು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ವಂಚನೆ: ಸೆರೆ
ಮಂಗಳೂರು: ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗ ಕೊಡಿಸು ವುದಾಗಿ ನಂಬಿಸಿ ಲಕ್ಷಾಂತರ ರೂ.ವಂಚಿಸಿದ್ದ ಪಡುಪೆರಾರ ನಿವಾಸಿ ರಾಮ್‌ಪ್ರಸಾದ್ ರಾವ್ (33)ನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಪ್ಪನಾಡು: ದ್ವಿಚಕ್ರ ವಾಹನಕ್ಕೆ ಕಾರು
ಢಿಕ್ಕಿ ಹೊಡೆದು ಪತ್ರಿಕಾ ವಿತರಕ ಗಂಭೀರ
ಮೂಲ್ಕಿ: ಬಪ್ಪನಾಡು ದೇವಸ್ಥಾನದ ಎದುರು ಉಡುಪಿ ಕಡೆಯಿಂದ ಬರುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲ್ಕಿಯ ಉದಯವಾಣಿ ಪತ್ರಿಕಾ ವಿತರಕ ಜಗನ್ನಾಥ ದೇವಾಡಿಗ (48) ಅವರು ಬೆಳಗ್ಗೆ 4.30ರ ಸುಮಾರಿಗೆ ತಮ್ಮ ಎಂ-80 ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟಲು ನಿಂತಿದ್ದಾಗ ಉಡುಪಿ ಕಡೆ ಯಿಂದ ವೇಗವಾಗಿ ಬಂದ ಬೊಲೇರೊ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಅವರು ದೂರಕ್ಕೆ ಎಸೆಯಲ್ಪಟ್ಟಿದ್ದರು. ಗಾಯಾಳುವನ್ನು ಸ್ಥಳೀಯರು ಮುಕ್ಕದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.