Advertisement

ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಆಟೋರಿಕ್ಷಾ: ಓರ್ವ ಸಾವು

11:57 PM Aug 02, 2022 | Team Udayavani |

ಕುಂಬಳೆ: ಮೊಗ್ರಾಲ್‌ ಪುತ್ತೂರಿನಲ್ಲಿ ಆಟೋರಿಕ್ಷಾವೊಂದು ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

Advertisement

ಗದಗ ಸಿತ್ತಾರಹಳ್ಳಿ ನಿವಾಸಿ ಎಲ್ಲಪ್ಪ ಅವರ ಪುತ್ರ ಪ್ರಕೃತಚೂರಿಯಲ್ಲಿ ವಾಸವಾಗಿರುವ ಮೋನಪ್ಪ (31)ಮೃತರು.
ಅವರು ಕೂಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿರುವಾಗ ಮೊಗ್ರಾಲ್‌ ಪುತ್ತೂರು ಕಂಬಾರು ರಸ್ತೆಯ ಎಡಚೇರಿ ಎಂಬಲ್ಲಿ ಆಟೋರಿಕ್ಷಾ ಪಲ್ಟಿಯಾಗಿ ತೋಡಿಗೆ ಬಿದ್ದಿದೆ.

ಆಟೋರಿಕ್ಷಾದೊಳಗೆ ಸಿಲುಕಿ ದವರನ್ನು ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು.

ಆಟೋ ಚಾಲಕ ಬೆಳ್ಳೂರಿನ ಸುಬೈರ್‌ (33) ಮತ್ತು ಹೊನ್ನಪ್ಪ ಗಂಭೀರ ಗಾಯಗೊಂಡಿದ್ದಾರೆ. ಮೋನಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾದರು. ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next