Advertisement
ರವಿವಾರ ಬೆಳಗ್ಗೆ 11 ಗಂಟೆಯ ವೇಳೆಗೆ ಸುಧೀರ್ ಸೋನು ಅವರ ಮನೆಗೆ ಆಗಮಿಸಿದ ಮುಸ್ಲಿಂ ಯುವಕರಿಬ್ಬರು ನಿಮ್ಮ ಬಳಿ ಮಾತನಾಡಲಿಕ್ಕಿದೆ. ನಿಮ್ಮನ್ನು ಆಸಿಫ್ ಅವರು ಕಾರಿನಲ್ಲಿ ಕಾಯುತ್ತಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ಅನುಮಾನಗೊಂಡ ಸುಧೀರ್ ಮನೆಯಿಂದ ಹೊರಗೆ ಬರಲು ನಿರಾಕರಿಸಿದ್ದರು. ಅಪರಿಚಿತ ಯುವಕರ ಚಲನವಲನಗಳಿಂದ ಅನುಮಾನಗೊಂಡ ಸುಧೀರ್ ಅವರ ಪತ್ನಿ ಕೂಡ ಪತಿಯನ್ನು ಮನೆಯಿಂದ ಹೊರಗೆ ಹೋಗದಂತೆ ತಡೆದಿದ್ದರು. ಅಪರಿಚಿತರ ಬಳಿ ಆಯುಧಗಳು ಇರುವುದನ್ನು ಗಮನಿಸಿದ್ದು, ಈ ಬಗ್ಗೆ ಸುಧೀರ್ ಅವರು ಸಂಘಟನೆಯ ಪ್ರಮುಖರಲ್ಲಿ ಚರ್ಚಿಸಿ ಕಾಪು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ಕಾರ್ಯಪ್ರವೃತ್ತರಾಗಿ ಕಾರಿನಲ್ಲಿ ಬಂದಿದ್ದ ಆಸಿಫ್ ನನ್ನು ಪೊಲೀಸ್ ಠಾಣೆಗೆ ಕರೆಯಿಸಿ ಕಾಪು ವೃತ್ತ ನಿರೀಕ್ಷಕ ಪೂವಯ್ಯ, ಕಾಪು ಮತ್ತು ಶಿರ್ವ ಠಾಣಾಧಿಕಾರಿಗಳ ಸಮ್ಮುಖದಲ್ಲಿ ಸುದೀರ್ಘ ವಿಚಾರಣೆ ನಡೆಸಿ, ಮುಚ್ಚಳಿಕೆ ಬರೆಯಿಸಿ ಪ್ರಕರಣವನ್ನು ಶಿರ್ವ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಸಾಲ ಕೇಳಲು ಹೋಗಿದ್ದ !
ಆಸಿಫ್ ಅವರು ಸಾಲ ಕೇಳುವ ಸಲುವಾಗಿ ಸುಧೀರ್ ಅವರ ಮನೆ ಹತ್ತಿರ ಹೋಗಿರುವುದಾಗಿ ತಿಳಿಸಿದ್ದು, ಇದರಲ್ಲಿ ಬೇರೆ ಯಾವುದೇ ಉದ್ದೇಶಗಳಿಲ್ಲವೆಂದು ವಿಚಾರಣೆ ವೇಳೆ ತಿಳಿಸಿರುವುದಾಗಿ ಕಾಪು ಪೊಲೀಸ್ ಠಾಣಾಧಿಕಾರಿ ಶ್ರೀಶೈಲ ಮುರಗೋಡ ತಿಳಿಸಿದ್ದಾರೆ.