Advertisement

ಮಗುವಿನ ಅಶ್ಲೀಲ ವೀಡಿಯೋ ರವಾನೆ: ಕೇಸು ದಾಖಲು

12:15 AM Jul 28, 2022 | Team Udayavani |

ಸುರತ್ಕಲ್‌: ಮಗುವಿನ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಕಳುಹಿಸಿರುವುದು ಹಾಗೂ ಅದರ ಬಗ್ಗೆ ಕಮೆಂಟ್‌ ಮಾಡಿರುವ ಬಗ್ಗೆ ಸುರತ್ಕಲ್‌ ಠಾಣೆಯಲ್ಲಿ ಚಿತ್ತರಂಜನ್‌ ಶೆಟ್ಟಿ ವಿರುದ್ಧ ಕೇಸು ದಾಖಲಾಗಿದೆ.

Advertisement

ಕೇಂದ್ರದ ಅಪರಾಧ ನಿಯಂತ್ರಣದ ಸೈಬರ್‌ ಟಿಪ್‌ ಪೋರ್ಟಲ್‌ ಮೂಲಕ ಕಳುಹಿಸಿರುವ ಅರ್ಜಿಯ ಪ್ರಕಾರ ಪ್ರಕರಣ ದಾಖಲಾಗಿದೆ. ಚಿತ್ತರಂಜನ್‌ ಶೆಟ್ಟಿ ಅಶ್ಲೀಲತೆಯ ವೀಡಿಯೋವನ್ನು ಕಳುಹಿಸಿರುವ ಮಾಹಿತಿ ಪೋರ್ಟಲ್‌ನಲ್ಲಿ ದಾಖಲಾಗಿದೆ.

ಇದೊಂದು ಅತ್ಯಾಧುನಿಕ ಪೋರ್ಟಲ್‌ ಆಗಿದ್ದು ಇದರಲ್ಲಿ ಲೈಂಗಿಕ ದೌರ್ಜನ್ಯ ವೀಡಿಯೋ ರವಾನೆ ಆದಲ್ಲಿ ಮಾಹಿತಿಗಳು ದಾಖಲಾಗುತ್ತದೆ. ಸಾಕ್ಷಿಗಳ ಆಧಾರದ ಮೇಲೆ ಆರೋಪಿ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next