Advertisement

ಕರಾವಳಿ ಅಪರಾಧ ಸುದ್ದಿಗಳು

03:09 PM Apr 29, 2019 | keerthan |

ಮಲ್ಪೆ: ಹೊಡೆದು ವ್ಯಕ್ತಿಯ ಕೊಲೆ
ಉಡುಪಿ,: ಮಲ್ಪೆ ಕೊಳದಲ್ಲಿ ಆಂಧ್ರಪ್ರದೇಶ ಮೂಲದ ಗುರುವೇಲು ಎಂಬಾತನನ್ನು ರವಿವಾರ ಅಪರಿಚಿತರು ಹೊಡೆದು ಕೊಲೆ ಮಾಡಿ ದ್ದಾರೆ.
ಅಮಿತ್‌ (27) ಎಂಬವರು ಎ. 27ರಂದು ಮಲ್ಪೆ ಕೊಳದ ಹನುಮಾನ್‌ ವಿಠೊಬಾ ಭಜನ ಮಂದಿರದ ಎದುರು ಸಮುದ್ರದ ದಡದ ಕಲ್ಲುಗಳ ಮೇಲೆ ಮಲಗಿದ್ದರು. ರಾತ್ರಿ 12.30ರ ಹೊತ್ತಿಗೆ ಅಪರಿಚಿತ ವ್ಯಕ್ತಿಯೊಬ್ಬ ಮರದ ದೊಣ್ಣೆಯಿಂದ ಅಮಿತ್‌ ಅವರ ತಲೆ ಹಾಗೂ ಕೈಗಳಿಗೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಮಿತ್‌ ಅವರನ್ನು ಕೊಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪರಿಚಿತ ವ್ಯಕ್ತಿಯು ಅಮಿತ್‌ ಕೊಲೆಗೈಯುವ ಉದ್ದೇಶದಿಂದ ಹಲ್ಲೆ ನಡೆಸಿರುವುದಾಗಿ ಪ್ರಕರಣ ದಾಖಲಾಗಿದೆ.
ಇದೇ ಹಿನ್ನೆಲೆಯಲ್ಲಿ ವಿಠೊಬಾ ಭಜನ ಮಂದಿರದ ಬಳಿಯಲ್ಲಿ ನಿಂತಿದ್ದ ಆಂಧ್ರಪ್ರದೇಶ ಮೂಲದ ಗುರುವೇಲು ಮೇಲೆಯೂ ಕೆಲವರು ಹಲ್ಲೆ ನಡೆಸದ್ದಾರೆ. ಹಲ್ಲೆಯ ಕಾರಣದಿಂದ ಆತ ಸಾವನ್ನಪ್ಪಿದ್ದಾನೆ ಎಂದು ಮಲ್ಪೆ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ.  ಪ್ರಕರಣವು ತೀವ್ರ ಕುತೂಹಲ ಮೂಡಿಸಿದ್ದು, ಹಲ್ಲೆಕೋರರು ಮತ್ತು ಕೊಲೆಗಡುಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
*
ಕಡಬ: ವಿವಾಹಿತ ನಾಪತ್ತೆ
ಕಡಬ,: ಮನೆಯಿಂದ ತೆರಳಿದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕು ಕುಟ್ರಾಪ್ಪಾಡಿ ಗ್ರಾಮದ ಅಡಾಡಿ ನಿವಾಸಿ ಮಿರ್ಷಾದ್‌ (38) ಅವರು ಎ. 22ರಂದು ಮನೆಯಿಂದ ಹೋದವರು ವಾಪಸಾಗಿಲ್ಲ ಎನ್ನಲಾಗಿದೆ. ಅವರ ಪತ್ನಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಪೂರ ಶರೀರ ಹಾಗೂ ಗೋಧಿ ಮೈಬಣ್ಣ ಹೊಂದಿರುವ ಮಿರ್ಷಾದ್‌ ಗಡ್ಡ ಬಿಟ್ಟಿದ್ದು, ಪತ್ತೆಯಾದಲ್ಲಿ ಕಡಬ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
*
ಜಾಗ ವ್ಯವಹಾರದಲ್ಲಿ ವಂಚನೆ: ಪ್ರಕರಣ ದಾಖಲು
ಕಾಪು: ಜಾಗದ ವ್ಯವಹಾರದಲ್ಲಿ ವಂಚಿಸಿ, ಬೆದರಿಕೆಯೊಡ್ಡಿದ ಬಗ್ಗೆ ಉಡುಪಿಯ 2ನೇ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಸೂಚನೆಯಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಟಪಾಡಿ ಏಣಗುಡ್ಡೆಯ ಸುಂದರ ಆಚಾರ್ಯರು ಆರೋಪಿಗಳಾದ ಜಾಗ ಖರೀದಿಸಲು ಸಾವುನ್‌ ಕ್ಯಾಸ್ತಲಿನೋ ಯಾನೆ ಝೇವಿಯರ್‌ ಕ್ಯಾಸ್ತಲಿನೋ (81), ಇಗ್ನೇಷಿಯಸ್‌ ಕ್ಯಾಸ್ತಲಿನೋ (75), ರೀಟಾ ಕ್ಯಾಸ್ತಲಿನೋ (65), ಗೋಡ್ವಿನ್‌ ಡೇಸಾ, ಡಯಾನಾ ಮೆಂಡೋನ್ಸಾ (51), ಅನಿಲ್‌ ಡೇಸಾ (49), ಬ್ರಿಜಿತ್‌ ಕ್ಯಾಸ್ತಲಿನೋ ಅವರೊಂದಿಗೆ 5 ಲ. ರೂ.ಗೆ ಮಾತು ಕತೆ ನಡೆ ಸಿದ್ದರು. ಈ ಬಗ್ಗೆ 2,70.000 ರೂ. ಮುಂಗಡವನ್ನೂ ನೀಡಿದ್ದರು. ಆದರೆ ಆರೋಪಿಗಳು ಜಾಗ ನೋಂದಣಿ ಮಾಡಿ ಕೊಡದೆ ವಂಚಿಸಿದ್ದಾರೆ ಮತ್ತು ಇನ್ನೊಮ್ಮೆ ಜಾಗ ನೋಂದಣಿ ಮಾಡಿಕೊಡುವಂತೆ ಕೇಳಿ ಕೊಂಡರೆ ಜೀವ ಸಹಿತ ಬಿಡುವುದಿಲ್ಲ. ನಿನ್ನ ಹಣವನ್ನೂ ವಾಪಸ್‌ ನೀಡುವುದಿಲ್ಲ ಎಂದು ಬೆದರಿಕೆ ಒಡ್ಡಿರುವುದಾಗಿ ಬೆದರಿಕೆ ಒಡ್ಡಿದ್ದಾರೆದು ಪ್ರಕರಣ ದಾಖಲಾಗಿದೆ.
*
ಫ್ಲ್ಯಾಟ್‌ನಿಂದ ಬಿದ್ದು ಸಾವು
ಮಂಗಳೂರು: ನಗರದ ಕೊಡಿಯಾಲ್‌ಗ‌ುತ್ತು ಸಮೀಪದ ಫ್ಲ್ಯಾಟೊಂದರ ನಿವಾಸಿ ರಾಜೇಶ್‌ ಶೆಣೈ (38) ಅವರು ರವಿವಾರ ಸಂಜೆ 2ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಅವರ ಕುಟುಂಬ ಕೊಡಿಯಾಲ್‌ಗ‌ುತ್ತಿನ ಫ್ಲ್ಯಾಟ್‌ನ ಎರಡನೇ ಮಹಡಿಯಲ್ಲಿ ವಾಸಿಸುತ್ತಿತ್ತು. ರಾಜೇಶ್‌ ಹಲವು ಸಮಯದಿಂದ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದು, ರವಿವಾರ ಸಂಜೆ ಫ್ಲ್ಯಾಟ್‌ನ ಹೊರಗಿರುವ ಓಪನ್‌ ಗ್ಯಾಲರಿಗೆ ಬಂದಾಗ ಏಕಾಏಕಿ ಸ್ಮೃತಿ ತಪ್ಪಿ ಕೆಳಗೆ ಬಿದ್ದಿದ್ದರು. ಸ್ಥಳೀಯರು ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಅಷ್ಟರಲ್ಲಿ ಸಾವನ್ನಪ್ಪಿದ್ದರು.  ಘಟನೆ ನಡೆದಾಗ ರಾಜೇಶ್‌ ಅವರ ತಾಯಿ ಮಾತ್ರ ಮನೆಯಲ್ಲಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳು ಹೊರಗಡೆ ಹೋಗಿದ್ದರು. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next