Advertisement

ಸಿದ್ದಕಟ್ಟೆ: ಮನೆಗೆ ನುಗ್ಗಿ ಚಿನ್ನಾಭರಣ ಕಳವು

01:09 AM Jun 16, 2022 | Team Udayavani |

ಪುಂಜಾಲಕಟ್ಟೆ: ಬಂಟ್ವಾಳ ತಾ. ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆಯಲ್ಲಿ ಜೂ.11ರಿಂದ ಜೂ.13ರ ಮಧ್ಯೆ ಮನೆಯೊಂದರಲ್ಲಿ ಕಳವು ನಡೆದಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸಿದ್ದಕಟ್ಟೆಯ ಶ್ರೀಮಂಗಳ ಉರ್ಬನ್‌ ಕಾಂಪೌಂಡ್‌ ನಿವಾಸಿ ಚಂದ್ರಶೇಖರ್‌ ಸಾಲ್ಯಾನ್‌ ಮೂಡುಬಿದಿರೆಯಲ್ಲಿ ಕೆಲಸದಲ್ಲಿದ್ದು, ಪತ್ನಿಗೆ ಜ್ವರವಿದ್ದುದರಿಂದ ಪತ್ನಿ, ಮಗಳೊಂದಿಗೆ ಮೂಡುಬಿದಿರೆಯಲ್ಲಿರುವ ಪತ್ನಿಯ ತಾಯಿ ಮನೆಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಲಾಗಿತ್ತು.

ಜೂ.13ರಂದು ಬಂದು ನೋಡಿದಾಗ, ಮನೆಯ ಮುಂಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಿದಾಗ ಡೈನಿಂಗ್‌ ಹಾಲ್‌ನಲ್ಲಿರುವ ಶೋಕೆಸ್‌ ಡ್ರಾವರ್‌ಗಳನ್ನು ಎಳೆದು ಚೆಲ್ಲಾಪಿಲ್ಲಿ ಮಾಡಿದ್ದು ಕಂಡು ಬಂದಿದೆ.

ಕೋಣೆಯಲ್ಲಿದ್ದ ಕಪಾಟನ್ನು ಮುರಿದು ಅದರೊಳಗಿರುವ ಸುಮಾರು 20 ಸಾವಿರ ರೂ. ಬೆಲೆಯ ರ್ಯಾಡೋ ವಾಚ್‌ನ್ನು ಕಳವು ಮಾಡಲಾಗಿದೆ. ಒಟ್ಟು ಅಂದಾಜು ಮೌಲ್ಯ 1,56,000 ರೂ. ಗಳ ಚಿನ್ನಾಭರಣಗಳನ್ನು ಯಾರೋ ಕಳ್ಳರು ಮುಂಬಾಗಿಲನ್ನು ಮುರಿದು ಮನೆಯ ಒಳಪ್ರವೇಶಿಸಿ ಕಳ್ಳತನ ಮಾಡಿರುವುದಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next