Advertisement
ಅಡ್ಯಾರ್ ಕಣ್ಣೂರು ನಿವಾಸಿಗಳಾದ ಮೊಹಮ್ಮದ್ ಸಿನಾನ್, ಮೊಹಮ್ಮದ್ ಸಿಯಾನ್, ಮೊಹಮ್ಮದ್ ರಫೀಜ್ ಪ್ರಕರಣದ ಆರೋಪಿಗಳು.
Related Articles
ಪಾದಚಾರಿ ಸಾವು
ವಿಟ್ಲ: ವಿಟ್ಲ ಅರಮನೆ ರಸ್ತೆಯಲ್ಲಿ ಪಾನಮತ್ತ ವ್ಯಕ್ತಿಯೊಬ್ಬರ ಮೇಲೆ ಲಾರಿ ಹರಿದು ಗಂಭೀರ ಗಾಯಗೊಂಡ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಟ್ಲಪಟ್ನೂರು ಗ್ರಾಮದ ಎತ್ತುಕಲ್ಲು ನಿವಾಸಿ ನಾರಾಯಣ ನಾಯ್ಕ (32) ಮೃತರು.
Advertisement
ಕಾಸರಗೋಡು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಲಾರಿಯ ಅಡಿಗೆ ಈತ ಏಕಾಏಕಿ ಬಿದ್ದಿದ್ದು, ತಲೆಯ ಹಾಗೂ ಎದೆಯ ಭಾಗಗಳಿಗೆ ಗಂಭಿರ ಗಾಯವಾಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಲಾಂ ನಿಂದನೆ ಆರೋಪ: ಕೇಸುವಿಟ್ಲ: ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಹಾಗೂ ಬಜರಂಗ ದಳವು ಇತ್ತೀಚೆಗೆ ವಿಟ್ಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಸ್ಲಾಮ್ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ ಆರೋಪದಲ್ಲಿ ಸಂಘ ಪರಿವಾರದ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂ. 6ರಂದು ವಿಟ್ಲದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ನಡೆದ ಹಿಂದೂ ಜಾಗೃತಿ ಸಭೆಯಲ್ಲಿ ರಾಧಾಕೃಷ್ಣ ಅಡ್ಯಂತಾಯ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಭಾಷಣ ಮಾಡಿರುವ ಬಗ್ಗೆ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಾಗಿದೆ.