Advertisement
ಕಳೆದ 3 ದಿನಗಳ ಹಿಂದೆ ಕುಣಿಗಲ್ ತಾಲೂಕಿನ ಹೇರೂರು ಸಮೀಪದ ಕುಳ್ಳಿ ನಂಜಯ್ಯನಪಾಳ್ಯದ ಬಳಿ ಅತಿಥಿ ಶಿಕ್ಷಕ ಕೆ.ಜಿ.ಮರಿಯಪ್ಪ ಎಂಬವರನ್ನು ಮಾರಕಾಸ್ತ್ರ ಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣ ನಡೆದ ಮೂರೇ ದಿನದಲ್ಲಿ ಪೊಲೀಸರು ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Related Articles
Advertisement
ಕೊಲೆ ಜಾಡು: ಹೇಮಲತಾ ಪ್ರೇಮ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿಗಳು ಸಿಕ್ಕಿ ಬಿದ್ದರು. ಕೊಲೆ ನಡೆದ ರಾತ್ರಿಯೇ ಶಾಂತಕುಮಾರ ಹಾಗೂ ಹೇಮಂತ್ ವಾಸವಿದ್ದ ಬೆಂಗಳೂರು ಮನೆಯನ್ನು ಶೋಧ ನಡೆಸಿ ಅವರ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಗಳು ಹೇಮಲತಾ, ಹೆಂಡತಿ ಶೋಭಾ ಸೇರಿದಂತೆ 8 ಮಂದಿಯನ್ನು ಜೈಲಿಗಟ್ಟಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ಪ್ರಿಯಕರ :
ಮಗಳು ಹೇಮಲತಾ ಅದೇ ಗ್ರಾಮದ ಶಾಂತಕುಮಾರ್ ಎಂಬವನನ್ನು ಪ್ರೀತಿಸುತ್ತಿದ್ದು ಮದುವೆಗೆ ತೀರ್ಮಾನ ಮಾಡಿದ್ದರು. ಕಳೆದ 6 ತಿಂಗಳ ಹಿಂದೆಯೇ ತಂದೆ ಮರಿಯಪ್ಪನಿಗೆ ಈ ವಿಚಾರ ತಿಳಿದು ಶಾಂತಕುಮಾರನನ್ನು ಹಿಡಿದು ಥಳಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಮರಿಯಪ್ಪನ ಮೇಲೆ ದ್ವೇಷ ಹೆಚ್ಚಾಗಿತ್ತು. ಶಾಂತಕುಮಾರ್ ಹಾಲಿ ಬೆಂಗಳೂರಿನಲ್ಲಿ ವಾಸವಾಗಿದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಚರ್ಚಿಸಿ ಕೊಲೆಗೆ ಸಂಚು ರೂಪಿಸಿದ್ದರು. ಇದಕ್ಕೆ ಮಗಳು ಹೇಮಲತಾ, ಪತ್ನಿ ಶೋಭಾ ಸಾಥ್ ನೀಡಿದ್ದರು. ಸುಪಾರಿ ನೀಡಿದ ಪತ್ನಿ, ಮಗಳು ಮರಿಯಪ್ಪನ ಚಲನ-ವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.
ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿದ್ದ ಆರೋಪಿಗಳು :
ಅಮಾವಾಸ್ಯೆ ದಿನ ಪೂಜೆ ಮುಗಿಸಿಕೊಂಡು ಊರಿಗೆ ಬರುತ್ತಿದ್ದ ಮರಿಯಪ್ಪನನ್ನು ಶಾಂತಕುಮಾರ್ ಮತ್ತು ಸ್ನೇಹಿತರು ಕುಳ್ಳಿ ನಂಜಯ್ಯನಪಾಳ್ಯ ಸಮೀಪ ಹೊಂಚು ಹಾಕಿ ಕಾದಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮರಿಯಪ್ಪನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿದ್ದಾರೆ. ಗಾಬರಿಯಿಂದ ಬೈಕ್ ಬೀಳಿಸಿ ರಸ್ತೆಪಕ್ಕದ ಜಮೀನಿಗೆ ಓಡಿ ಹೋದ ಮರಿಯಪ್ಪನನ್ನು ಅಟ್ಟಿಸಿಕೊಂಡು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
5 ಲಕ್ಷಕ್ಕೆ ಸುಪಾರಿ; 50 ಸಾವಿರ ಮುಂಗಡ ಪಾವತಿ :
ಮರಿಯಪ್ಪ ಕೊಲೆಗೆ 5 ಲಕ್ಷ ರೂ., ಸುಪಾರಿ ಮಾತನಾಡಿದ್ದು, ಈ ಪೈಕಿ ಮುಂಗಡವಾಗಿ 50 ಸಾವಿರ ರೂ,ಗಳನ್ನು ಹಂತಕರಿಗೆ ನೀಡಿದ್ದರು ಎನ್ನಲಾಗಿದೆ. ಉಳಿದ ಹಣವನ್ನು ಪತಿ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ಎಟಿಎಂ ಮೂಲಕ ತೆಗೆದುಕೊಡಲಾಗುವುದೆಂದು ಮರಿಯಪ್ಪ ಪತ್ನಿ ತಿಳಿಸಿದ್ದರು ಎನ್ನಲಾಗಿದೆ.