ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಕ್ರಿಕೆಟ್ ಅಕಾಡೆಮಿ ‘ಕ್ರಿಕಿಂಗ್ಡಮ್’ ಅನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ (ಯುಎಸ್‌ಎ) ಪ್ರಾರಂಭಿಸಲಿದ್ದಾರೆ. ಕ್ರಿಕಿಂಗ್ಡಮ್ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಅಕಾಡೆಮಿಗಳಲ್ಲಿ ಒಂದಾಗಿದೆ.
ಕ್ರಿಕಿಂಗ್ಡಮ್ ಈಗಾಗಲೇ ಭಾರತದಲ್ಲಿ ಸಾಕಷ್ಟು ಪ್ರಸಿದ್ಧವಾಗಿದ್ದು, ಇದೀಗ ಭಾರತದ ನಾಯಕ ಅದನ್ನು ಭಾರತದ ಹೊರಗೆಯೂ ತರುವ ಕೆಲಸ ಮಾಡುತ್ತಿದ್ದಾರೆ.
ಸದ್ಯ ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿರುವ ರೋಹಿತ್ ತನ್ನ ಕ್ರಿಕೆಟ್ ಅಕಾಡೆಮಿ ಕೆಲಸಕ್ಕಾಗಿ ಯುಎಸ್‌ಎಯಲ್ಲಿದ್ದಾರೆ, ಭಾರತ ತಂಡದ ನಾಯಕನಿಗೆ ಯುಎಸ್ ನಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ಉತ್ತಮ ಸ್ವಾಗತ ಸಿಕ್ಕಿತು. ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರು ಎರಡು ಟೆಸ್ಟ್ ಮತ್ತು ಮೊದಲ ಏಕದಿನ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಬಳಿಕ ಎರಡು ಏಕದಿನ ಪಂದ್ಯಗಳಿಗೆ ಅವರು ವಿಶ್ರಾಂತಿ ಪಡೆದಿದ್ದರು. ಸದ್ಯ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ತಂಡದ ನಾಯಕತ್ವ ವಹಿಸಿದ್ದಾರೆ.