ಮುಂಬೈ: ದೇಶದಾದ್ಯಂತ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಕೊರೊನಾ ಭೀತಿಯಿಂದ ದೊಡ್ಡ ಮಟ್ಟದ ಸಭೆ ಸೇರಿ ಹೋಳಿ ಆಚರಣೆ ಕಡಿಮೆಯಾಗಿದ್ದರೂ ಜನರು ತಮ್ಮ ಕುಟುಂಬಗಳ ಜೊತೆ ರಂಗಿನ ಹಬ್ಬವನ್ನು ಆಚರಿಸುತ್ತಿದ್ದಾರೆ.
ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಶಿಖರ್ ಧವನ್, ದೀಪಕ್ ಚಾಹರ್ ಹೋಳಿ ಹಬ್ಬವನ್ನು ಆಚರಿಸಿ ಸಂಭ್ರಮಪಟ್ಟಿದ್ಧಾರೆ.
ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಹೋಳಿ ಆಚರಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ಧಾರೆ. ಪತ್ನಿ ಗೀತಾ ಬಸ್ರಾ ಮತ್ತು ಮಗಳು ಹಿನಯಾ ಹೀರ್ ಪ್ಲಾಹಾ ಜೊತೆ ಹೋಳಿ ಹಬ್ಬ ಆಚರಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಕೂಡಾ ಪತ್ನಿ ಮತ್ತು ಮಗನೊಂದಿಗೆ ಹೋಳಿ ಆಡಿ ಸೆಲ್ಫಿ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಧವನ್ ಪತ್ನಿ ಆಯಿಶಾ ಮಗ ಝೋರಾವರ್ ಧವನ್ ಜೊತೆ ಹೋಳಿ ಆಡಿದ್ದಾರೆ. ಮುಖದ ತುಂಬೆಲ್ಲಾ ಬಣ್ಣ ಬಳಿದುಕೊಂಡು ಸಂಭ್ರಮಿಸಿದ್ಧಾರೆ.
ಬೌಲರ್ ದೀಪಕ್ ಚಾಹರ್ ಕೂಡಾ ಹೋಳಿ ಆಡಿದ್ದು, ಇನ್ಸ್ಟಾ ಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ದೀಪಕ್ ಚಾಹರ್ ಮತ್ತು ಹರ್ಭಜನ್ ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆನ್ನೈ ತಂಡದ ಪರವಾಗಿ ಆಡಲಿದ್ದಾರೆ.