Advertisement
2 ವರ್ಷದಿಂದ ಅಂ.ರಾ ಪಂದ್ಯ ಆಡಿಲ್ಲ2016ರ ಸೆಪ್ಟೆಂಬರ್‌ನಿಂದ, ಅಂದರೆ ಸುಮಾರು 2 ವರ್ಷದಿಂದ ಬ್ರಾವೊ ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡಿಲ್ಲ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯೊಂದಿಗೆ ವೇತನ ಮತ್ತು ಆಡಳಿತಾತ್ಮಕ ಸಮಸ್ಯೆಗಳ ಕಾರಣದ ತಿಕ್ಕಾಟದಿಂದಾಗಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೇ ದೂರವಾಗಿದ್ದರು. ಈ ವೇಳೆ ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಬಹುದು.
ಬ್ರಾವೊ ಮೂರೂ ಮಾದರಿಗಳಲ್ಲಿ ಒಟ್ಟಾರೆ 2004-2016ರ ಅವಧಿಯಲ್ಲಿ 270 ಅಂತಾರಾಷ್ಟ್ರೀಯ ಪಂದ್ಯ ಆಡಿ¨ªಾರೆ. 40 ಟೆಸ್ಟ್, 164 ಏಕದಿನ ಮತ್ತು 66 ಟಿ20 ಪಂದ್ಯವನ್ನು ಒಳಗೊಂಡಿದೆ. ಇದರಲ್ಲಿ 2012 ಮತ್ತು 2016ರ ವಿಶ್ವಕಪ್ ಟಿ20ಯ ಎರಡು ಗೆಲುವುಗಳೂ ಸೇರಿವೆ. 2013ರಲ್ಲಿ ಕೊನೆ ಏಕದಿನ
2013ರಲ್ಲಿ ಡರೆನ್ ಸಮಿ ಅವರಿಂದ ವಿಂಡೀಸ್ ತಂಡದ ನಾಯಕತ್ವ ವಹಿಸಿಕೊಂಡ ಬ್ರಾವೊ, 2014ರಲ್ಲಿ ಭಾರತ ಪ್ರವಾಸದಲ್ಲಿದ್ದ ವೇಳೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯೊಂದಿಗೆ ವೇತನ ಪಾವತಿ ಸಂಬಂಧ ಉಂಟಾದ ವಿವಾದದ ಕಾರಣ ಟೂರ್ನಿಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ತವರಿಗೆ ಮರಳುವ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಸಂದರ್ಭದಲ್ಲಿ ಧರ್ಮಶಾಲಾದಲ್ಲಿ ಆಡಿದ ಏಕದಿನ ಪಂದ್ಯವೇ ಕೊನೆಯ ಬಾರಿಗೆ ಬ್ರಾವೊ ವಿಂಡೀಸ್ ತಂಡದಲ್ಲಿ ಕಾಣಿಸಿಕೊಂಡಿದ್ದು.
Related Articles
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರೂ, ವೃತ್ತಿಪರ ಕ್ರಿಕೆಟ್‌ನಿಂದ ಬ್ರಾವೋ ಸಂಪೂರ್ಣ ದೂರವಾಗಿಲ್ಲ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿ¨ªಾರೆ. ಬಿಗ್ ಬಾಶ್, ಕೆರಿಬಿಯನ್ ಲೀಗ್ ಸೇರಿದಂತೆ ಟಿ20 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಆಡಲಿ¨ªಾರೆ. ನನ್ನ ವೃತ್ತಿಪರ ಕ್ರಿಕೆಟ…ಅನ್ನು ಮುಂದುವರಿಸಲಿದ್ದೇನೆ ಮತ್ತು ನೈಜ ಚಾಂಪಿಯನ್ ಆಗಿ ಮನರಂಜನೆ ನೀಡಲಿದ್ದೇನೆ’ ಎಂದು ಬ್ರಾವೊ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
Advertisement
ಟೆಸ್ಟ್, ಒನ್ ಡೇ, ಟಿ20 ಸಾಧನೆ40 ಟೆಸ್ಟ್ ಪಂದ್ಯ ಆಡಿರುವ ಬ್ರಾವೊ, 71 ಇನಿಂಗ್ಸ್‌ಗಳಿಂದ 31.43ರ ಸರಾಸರಿಯಲ್ಲಿ 2,200 ರನ್ ಗಳಿಸಿ¨ªಾರೆ. ಇದರಲ್ಲಿ ಮೂರು ಶತಕ ಮತ್ತು 13 ಅರ್ಧ ಶತಕಗಳಿವೆ. 39.84ರ ಸರಾಸರಿಯಲ್ಲಿ 86 ವಿಕೆಟ್‌ಳನ್ನು ಪಡೆದಿ¨ªಾರೆ. ಎರಡು ಬಾರಿ ಐದು ವಿಕೆಟ್ ಸಾಧನೆ ಮಾಡಿ¨ªಾರೆ. 2004ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದ್ದ ಬ್ರಾವೊ 2010ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. 164 ಏಕದಿನ ಪಂದ್ಯಗಳಲ್ಲಿ 25.37ರ ಸರಾಸರಿಯಲ್ಲಿ 2968 ರನ್ ಗಳಿಸಿ¨ªಾರೆ. ಇದರಲ್ಲಿ ಎರಡು ಶತಕ ಮತ್ತು 10 ಅರ್ಧಶತಕಗಳಿವೆ. ಬೌಲಿಂಗ್ ವಿಭಾಗದಲ್ಲಿ 29.52ರ ಸರಾಸರಿಯಲ್ಲಿ 199 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಕೊಂಡಿದ್ದಾರೆ. 66 ಟಿ20 ಪಂದ್ಯಗಳಲ್ಲಿ 59 ಇನಿಂಗ್ಸ್ ಗಳಿಂದ 116.53 ಸ್ಟ್ರೇಕ್ ರೇಟ್‌ನಲ್ಲಿ 1,142 ರನ್ ಗಳಿಸಿ¨ªಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳಿವೆ. 8.46ರ ಎಕಾನಮಿಯಲ್ಲಿ 1470 ರನ್ ನೀಡಿ 52 ವಿಕೆಟ್ ಪಡೆದುಕೊಂಡಿ¨ªಾರೆ. 2016ರಲ್ಲಿ ಪಾಕಿಸ್ತಾನದ ವಿರುದ್ಧ ಕೊನೆಯ ಟಿ20 ಪಂದ್ಯ ಆಡಿದ್ದರು. ಡಿಜೆ ಆಗಿಯೂ ಬ್ರಾವೊ ಜನಪ್ರಿಯ
ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಭಾಗವಹಿಸಿದ್ದು, 2008 ರಿಂದ ಸತತವಾಗಿ ಚೆನ್ನೈ ತಂಡದ ಪರ ಆಡಿದ್ದರು. ಇದೂವರೆಗೂ ಐಪಿಎಲ್‌ನಲ್ಲಿ 122 ಪಂದ್ಯಗಳನ್ನಾಡಿರುವ ಬ್ರಾವೊ 1,379 ರನ್ 136 ವಿಕೆಟ್ ಪಡೆದಿ¨ªಾರೆ. ಗಾಯಕನೂ ಆಗಿರುವ ಬ್ರಾವೊ ತಮ್ಮದೇ ಶೈಲಿಯಲ್ಲಿ ಡಿಜೆ ಮೂಲಕ ಯುವಕರ ಮನಗೆದ್ದಿದ್ದರು. ಶ್ರೇಷ್ಠ ಬೌಲಿಂಗ್
ಟೆಸ್ಟ್: 55/6
ಏಕದಿನ: 43/6
ಟಿ20: 22/4 ಗರಿಷ್ಠ ಮೊತ್ತ
ಟೆಸ್ಟ್: 113
ಏಕದಿನ: 112
ಟಿ20: 66 ಧನಂಜಯ ಆರ್.ಮಧು