Advertisement

Ambati Rayudu: ಆಂಧ್ರ ಪ್ರದೇಶ ರಾಜಕೀಯಕ್ಕೆ ಎಂಟ್ರಿಕೊಟ್ಟ ಕ್ರಿಕೆಟಿಗ ಅಂಬಟಿ ರಾಯುಡು

03:07 PM Jun 30, 2023 | Team Udayavani |

ಹೈದರಾಬಾದ್: ಕೆಲ ದಿನಗಳ ಹಿಂದೆಯಷ್ಟೇ ಐಪಿಎಲ್ ಕ್ರಿಕೆಟ್ ಗೂ ರಾಜೀನಾಮೆ ನೀಡಿದ್ದ ಮಾಜಿ ಭಾರತೀಯ ಕ್ರಿಕೆಟಿಗ ಅಂಬಟಿ ರಾಯುಡು ಆಂಧ್ರಪ್ರದೇಶ ರಾಜಕೀಯದಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

Advertisement

ಕಡೆಯದಾಗಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿರುವ ಅಂಬಟಿ ರಾಯುಡು ಬಳಿಕ ತಳ ಮಟ್ಟದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಅವರು ತಮ್ಮ ಊರು ಗುಂಟೂರು ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ.

“ಜನಸೇವೆಗಾಗಿ ನಾನು ಶೀಘ್ರದಲ್ಲೇ ಆಂಧ್ರಪ್ರದೇಶದಲ್ಲಿ ರಾಜಕೀಯಕ್ಕೆ ಬರುತ್ತೇನೆ. ಅದಕ್ಕೂ ಮುನ್ನ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಜನರ ನಾಡಿಮಿಡಿತ ಅರಿಯಲು ಹಾಗೂ ಅವರ ಸಮಸ್ಯೆಗಳನ್ನು ಅರಿಯಲು ನಿರ್ಧರಿಸಿದ್ದೇನೆ ಎಂದು ರಾಯುಡು ಬುಧವಾರ ಜಿಲ್ಲೆಯ ವಟ್ಟಿಚೆರುಕೂರು ಬ್ಲಾಕ್‌ನ ಮುಟ್ಲೂರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ:ರಿಲೀಸ್ ಅಖಾಡಕ್ಕೆ ಜಗ್ಗೇಶ್ ಸಿನಿಮಾ; ವಿಭಿನ್ನ ಪೋಸ್ಟರ್ ಗಳಲ್ಲಿ ತೋತಾಪುರಿ – 2 ಮಿಂಚು

ಗುಂಟೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಜನರ ಅಗತ್ಯತೆಗಳನ್ನು ತಿಳಿದು ಕೊಳ್ಳಲು ಮತ್ತು ಅವುಗಳನ್ನು ಪೂರೈಸಲು ಏನು ಮಾಡಬಹುದು ಎಂಬುದನ್ನು ತಿಳಿಯಲು ನಾನು ಪ್ರವಾಸ ಮಾಡುತ್ತಿದ್ದೇನೆ ಎಂದು ಹೇಳಿದರು.

Advertisement

“ರಾಜಕೀಯದಲ್ಲಿ ಹೇಗೆ ಹೋಗಬೇಕು ಮತ್ತು ನಾನು ಯಾವ ವೇದಿಕೆಯನ್ನು ಆರಿಸಿಕೊಳ್ಳುತ್ತೇನೆ ಎಂಬುದರ ಕುರಿತು ನಾನು ಕಾಂಕ್ರೀಟ್ ಕ್ರಿಯಾ ಯೋಜನೆಯೊಂದಿಗೆ ಹೊರಬರುತ್ತೇನೆ” ಎಂದು ಅವರು ಹೇಳಿದ್ದರು.

ರಾಯುಡು ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಗುಂಟೂರು ಅಥವಾ ಮಚಲಿಪಟ್ಟಣಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಯೋಚಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ.

ರಾಯುಡು ಇದುವರೆಗೂ ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಕೆಲ ದಿನಗಳ ಹಿಂದೆ ಅವರು ಸಿಎಂ ಜಗನ್ ಕುರಿತಂತೆ ಆಡಿದ ಮಾತುಗಳು ಅವರು ವೈಎಸ್ ಆರ್ ಪಾರ್ಟಿಗೆ ಸೇರುತ್ತಾರೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next