Advertisement

ಬ್ರಾಡ್‌ಮನ್‌ ಕ್ಯಾಪ್‌ಗೆ 340 ಸಾವಿರ ಡಾಲರ್ ‌!

12:21 PM Dec 23, 2020 | Mithun PG |

ಮೆಲ್ಬರ್ನ್: ಕ್ರಿಕೆಟ್‌ ದಂತಕತೆ, ಆಸ್ಟ್ರೇಲಿಯದ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌ ತಮ್ಮ ಮೊದಲ ಟೆಸ್ಟ್‌ ಪಂದ್ಯದಲ್ಲಿ ಧರಿಸಿದ ಬ್ಯಾಗ್ಗಿ ಗ್ರೀನ್‌ಕ್ಯಾಪ್‌ ಹರಾಜುಗೊಂಡಿದ್ದು, ಇದು 340,000 ಡಾಲರ್‌ಗಳ (450,000ಆಸ್ಟ್ರೇಲಿಯನ್‌ ಡಾಲರ್‌) ಭಾರೀ ಮೊತ್ತಕ್ಕೆ ಮಾರಾಟಗೊಂಡಿದೆ.

Advertisement

ಆಸ್ಟ್ರೇಲಿಯದ ಖ್ಯಾತ ಉದ್ಯಮಿ ಪೀಟರ್‌ ಫ್ರೀಡ್ ಮನ್‌ ಅವರು ಇದನ್ನು ಹರಾಜಿನಲ್ಲಿ ಖರೀದಿಸಿದರು. ಬ್ರಾಡ್‌ಮನ್‌ ಅವರ ಈ ಕ್ಯಾಪ್‌ ನೊಂದಿಗೆ ಆಸ್ಟ್ರೇಲಿಯವನ್ನು ಸುತ್ತಾಡುವುದು ಅವರ ಮುಂದಿನ ಯೋಜನೆಯಾಗಿದೆ.

“ಸರ್‌ ಡಾನ್‌ ಬ್ರಾಡ್‌ಮನ್‌ ಆಸ್ಟ್ರೇಲಿಯದ ಲೆಜೆಂಡ್‌. ಕೇವಲ ಕ್ರಿಕೆಟ್‌ ಲೋಕದ ಮಹೋನ್ನತ ಸಾಧಕನಷ್ಟೇ ಅಲ್ಲ, ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆ್ಯತ್ಲೀಟ್‌. ಅವರ ಈ ಕ್ಯಾಪ್‌ನೊಂದಿಗೆ ದೇಶವನ್ನು ಸುತ್ತುವುದರ ಜತೆಗೆ ಕ್ರೀಡಾಭಿಮಾನಿಗಳು ಮತ್ತು ಕ್ರಿಕೆಟ್‌ ಸಮುದಾಯದೊಂದಿಗೆ ಅನುಭವ ಹಂಚಿಕೊಳ್ಳುವುದು ನನ್ನ ಯೋಜನೆಗಳಲ್ಲೊಂದು’ ಎಂಬುದಾಗಿ ಫ್ರೀಡ್‌ ಮನ್‌ ಬಣ್ಣಿಸಿದರು.

ಇದನ್ನೂ ಓದಿ: ಕೋವಿಡ್ ರೂಪಾಂತರ; ಎಚ್ಚರಿಕೆಯಿಂದ ಇರುವಂತೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ

ಎರಡನೇ ಅತ್ಯಧಿಕ ಮೊತ್ತ

Advertisement

ಇದು ಕ್ರಿಕೆಟ್‌ ಸ್ಮರಣಿಕೆಯೊಂದಕ್ಕೆ ಹರಾಜಿನಲ್ಲಿ ಲಭಿಸಿದ ಎರಡನೇ ಅತೀ ದೊಡ್ಡ ಮೊತ್ತ. ಇದಕ್ಕೂ ಮೊದಲು ಇದೇ ವರ್ಷಾರಂಭದಲ್ಲಿ ಶೇನ್‌ ವಾರ್ನ್ ಅವರ ಟೆಸ್ಟ್‌ ಕ್ಯಾಪ್‌ ಒಂದು 760,000 ಡಾಲರ್‌ (1,007,500 ಆಸ್ಟ್ರೇಲಿಯನ್‌ ಡಾಲರ್‌) ಮೊತ್ತಕ್ಕೆ ಮಾರಾಟವಾದದ್ದು ದಾಖಲೆ. ಬ್ರಾಡ್‌ಮನ್‌ 1928ರಲ್ಲಿ ಟೆಸ್ಟ್‌ ಪದಾರ್ಪಣೆ ಮಾಡುವಾಗ ಈ ಕ್ಯಾಪ್‌ ಧರಿಸಿದ್ದರು. ಮುಂದಿನ 20 ವರ್ಷಗಳ ಕಾಲ ಕ್ರಿಕೆಟ್‌ ಜಗತ್ತನ್ನು ಅಕ್ಷರಶಃ ಆಳಿದ ಬ್ರಾಡ್‌ಮನ್‌, 52 ಟೆಸ್ಟ್‌ ಗಳಲ್ಲಿ 99.94ರ ಸರಾಸರಿಯಲ್ಲಿ ರನ್‌ ಪೇರಿಸಿದ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ: ಪೊಂಗಲ್ ಸಂಭ್ರಮ: ಕೋವಿಡ್ ಮಾರ್ಗಸೂಚಿಯಂತೆ ಜಲ್ಲಿಕಟ್ಟು ಆಚರಣೆಗೆ ಅನುಮತಿ: ತಮಿಳುನಾಡು

Advertisement

Udayavani is now on Telegram. Click here to join our channel and stay updated with the latest news.

Next