Advertisement

Cricket: ಕೀನ್ಯಾ ತಂಡಕ್ಕೆ ಕನ್ನಡಿಗ ದೊಡ್ಡ ಗಣೇಶ್‌ ಕೋಚ್‌

10:30 PM Aug 14, 2024 | Team Udayavani |

ನೈರೋಬಿ: ಭಾರತ ತಂಡದ ಮಾಜಿ ಕ್ರಿಕೆಟಿಗ, ಕರ್ನಾಟಕದ ದೊಡ್ಡ ನರಸಯ್ಯ ಗಣೇಶ್‌ ಕೀನ್ಯಾ ಪುರುಷರ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ನೇಮಿಸಲ್ಪಟ್ಟಿದ್ದಾರೆ. 2026ರ ಟಿ20 ವಿಶ್ವಕಪ್‌ಗಾಗಿ “ಆಫ್ರಿಕಾ ಕ್ವಾಲಿಫೈಯರ್‌’ನಲ್ಲಿ ಆಡಲಿರುವ ಕೀನ್ಯಾಕ್ಕೆ ಗಣೇಶ್‌ ತರಬೇತಿ ನೀಡಲಿದ್ದಾರೆ.

Advertisement

ಬಲಗೈ ಮಧ್ಯಮ ವೇಗಿಯಾಗಿದ್ದ ದೊಡ್ಡ ಗಣೇಶ್‌ 1997ರಲ್ಲಿ ಭಾರತದ ಪರ 4 ಟೆಸ್ಟ್‌ ಹಾಗೂ ಒಂದು ಏಕದಿನ ಪಂದ್ಯ ಆಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 365 ವಿಕೆಟ್‌ ಹಾಗೂ 2,023 ರನ್‌ ಗಳಿಸಿದ ಸಾಧನೆ ಇವರದು. 1996-2011ರ ಅವಧಿಯಲ್ಲಿ 5 ಏಕದಿನ ವಿಶ್ವಕಪ್‌ಗಳಲ್ಲಿ ಆಡಿದ ಕೀನ್ಯಾ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿಲ್ಲದ ತಂಡ. 2003ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲುಪಿದ ಹೆಗ್ಗಳಿಕೆ ಕೀನ್ಯಾ ತಂಡದ್ದಾಗಿತ್ತು. ಆಗ ಭಾರತದವರೇ ಆದ ಸಂದೀಪ್‌ ಪಾಟೀಲ್‌ ಕೀನ್ಯಾ ತಂಡದ ಕೋಚ್‌ ಆಗಿದ್ದರು.

ಈವರೆಗೆ ಕೀನ್ಯಾ ಏಕೈಕ ಟಿ20 ವಿಶ್ವಕಪ್‌ನಲ್ಲಿ ಆಡಿತ್ತು. ಅದು 2007ರ ಪ್ರಪ್ರಥಮ ವಿಶ್ವಕಪ್‌ ಆಗಿತ್ತು. ಅನಂತರ ಕೀನ್ಯಾ ಕ್ರಿಕೆಟ್‌ ತಳ ಕಾಣುತ್ತ ಹೋಯಿತು. ಇಲ್ಲಿಂದ ಈ ಆಫ್ರಿಕನ್‌ ತಂಡವನ್ನು ಮೇಲೆತ್ತುವ ಮಹತ್ವದ ಜವಾಬ್ದಾರಿ 51 ವರ್ಷದ ಡಿ. ಗಣೇಶ್‌ ಮೇಲಿದೆ. ಇವರಿಗೆ ಕೀನ್ಯಾದ ಮಾಜಿ ಆಟಗಾರರಾದ ಲಮೆಕ್‌ ಒನ್ಯಾಂಗೊ ಮತ್ತು ಜೋಸೆಫ್ ಅಂಗಾರ ಸಹಾಯಕರಾಗಿದ್ದಾರೆ.
“ಕೀನ್ಯಾ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ಹೆಸರಿಸಲ್ಪಟ್ಟದ್ದು ಖುಷಿಯ ಸಂಗತಿ’ ಎಂಬುದಾಗಿ ಡಿ. ಗಣೇಶ್‌ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next