Advertisement

ಕ್ರಿಕೆಟ್‌ ಜೆರ್ಸಿ ಪ್ರಾಯೋಜಕತ್ವ ಹಿಂದೆ ಸರಿದ ಸ್ಟಾರ್‌ ನ್ಪೋರ್ಟ್ಸ್

11:26 AM Feb 28, 2017 | Harsha Rao |

ಮುಂಬಯಿ: ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡಲೇಬೇಕೆಂಬ ಸರ್ವೋಚ್ಚ ನ್ಯಾಯಾಲಯದ ಆದೇಶ, ಜತೆಗೆ ಭಾರತ ಟೆಸ್ಟ್‌ ತಂಡದ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಬಿಸಿಸಿಐ ಈಗ ಮತ್ತೂ ಒಂದು ಇಕ್ಕಟ್ಟಿಗೆ ಸಿಲುಕಿದೆ. ಇದುವರೆಗೆ ಬಿಸಿಸಿಐ ಜೆರ್ಸಿ ಪ್ರಾಯೋಜಕತ್ವ ವಹಿಸಿದ್ದ ಸ್ಟಾರ್‌ ನ್ಪೋರ್ಟ್ಸ್, ಒಪ್ಪಂದದ ಅವಧಿ ಮುಗಿದೊಡನೆ ತಾನು ಪ್ರಾಯೋಜಕತ್ವದಿಂದ ಹಿಂದೆ ಸರಿಯುವುದಾಗಿ ತಿಳಿಸಿದೆ. 

Advertisement

ಬಿಸಿಸಿಐನ ನಿಬಂಧನೆಗಳು ಅಸ್ಪಷ್ಟವಾಗಿವೆ, ಅಷ್ಟೇ ಕಷ್ಟದ್ದಾಗಿವೆ. ಆದ್ದರಿಂದ ತಾನು ಹಿಂದೆ ಸರಿ ಯುವುದಾಗಿ ಸ್ಟಾರ್‌ ನ್ಪೋರ್ಟ್ಸ್ ಹೇಳಿಕೊಂಡಿದೆ. 

ಬಿಸಿಸಿಐನೊಂದಿಗೆ ಎಲ್ಲ ಅಂತಾರಾಷ್ಟ್ರೀಯ ಪಂದ್ಯಗಳನ್ನು ನೇರ ಪ್ರಸಾರ ಮಾಡುವ ಒಪ್ಪಂದ ಮಾಡಿ ಕೊಂಡಿರುವ ಸ್ಟಾರ್‌ ನ್ಪೋರ್ಟ್ಸ್, ಜೆರ್ಸಿ ಪ್ರಾಯೋಜಕತ್ವವನ್ನೂ ಹೊಂದಿತ್ತು. ಮಾ. ಒಂದಕ್ಕೆ ಈ ಒಪ್ಪಂದ ಮುಗಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next