Advertisement

Pakistan ಜತೆ ಕ್ರಿಕೆಟ್‌ ಸರಿಯಲ್ಲ : ಖಾದರ್‌ ಅಭಿಮತ

10:46 PM Jun 08, 2024 | Team Udayavani |

ಮಂಗಳೂರು: ಪಾಕಿಸ್ಥಾನದೊಂದಿಗೆ ಹೊರ ದೇಶ ಗಳಲ್ಲೂ ಭಾರತ ಕ್ರಿಕೆಟ್‌ ಪಂದ್ಯವಾಡುವುದು ಸರಿಯಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದ್ದಾರೆ.

Advertisement

ಜೂ. 9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಪಂದ್ಯಾವಳಿಯ ಭಾರತ-ಪಾಕ್‌ ಕಾದಾಟದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಪಾಕಿಸ್ಥಾನದವರು ಕ್ರಿಕೆಟ್‌ ಆಟವಾ ಡಲು ಬಂದ ವೇಳೆ ನಮ್ಮಲ್ಲಿ ಪಿಚ್‌ ಅಗೆದಿದ್ದಾರೆ.

ಎಲ್ಲಿಯವರೆಗೆ ಅವರು ನಮಗೆ ತೊಂದರೆ ಕೊಡುತ್ತಾರೋ ಅಲ್ಲಿಯವರೆಗೆ ಅವರೊಂದಿಗೆ ಆಟವಾಡಬಾರದು ಎಂದರು.

ಎರಡೂ ದೇಶಗಳ ನಡುವೆ ಸಂಚಾರ ಮಾಡುವುದನ್ನೂ ನಿಲ್ಲಿಸಲಾಗಿದೆ. ಅಲ್ಲದೆ ಅವರು ನಮ್ಮಲ್ಲಿಗೆ ಬಂದು ಆಡುವುದನ್ನೂ ನಿಲ್ಲಿಸಲಾಗಿದೆ. ಇಷ್ಟಾದ ಮೇಲೆ ಪಾಕಿಸ್ಥಾನದ ಆಟಗಾರರನ್ನು ದುಬಾೖ, ನ್ಯೂಯಾರ್ಕ್‌ಗೆ ಕರೆದೊಯ್ದು ಅಲ್ಲಿ ಅವ ರೊಂದಿಗೆ ಭಾರತದ ಆಟಗಾರರು ಆಡುವುದು ಯಾಕೆ? ಅವರೊಂದಿಗೆ ಆಡದಿದ್ದರೆ ಏನಾಗುತ್ತದೆ ಎಂದು ಪ್ರಶ್ನಿಸಿದರು.

ನಾನೂ ಕ್ರಿಕೆಟ್‌ ಅಭಿಮಾನಿ, ಆಟಗಾರನೂ ಹೌದು. ಏನೇ ನಾಳೆ ನಡೆಯುವ ಪಾಕ್‌ ಜತೆಗಿನ ಪಂದ್ಯದಲ್ಲಿ ಭಾರತದ ತಂಡ ಗೆಲುವು ಸಾಧಿಸುವುದು ಮಾತ್ರವಲ್ಲ, ಇಡೀ ದೇಶಕ್ಕೆ ಗೌರವದ ಗೆಲುವನ್ನು ತರಬೇಕು ಎಂದು ಹಾರೈಸುವುದಾಗಿಯೂ ತಿಳಿಸಿದರು.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next