Advertisement

2022ರ ಏಷ್ಯಾಡ್‌:ಮತ್ತೆ ಕ್ರಿಕೆಟ್ ಗೆ ಸ್ಥಾನ

03:42 AM Mar 04, 2019 | Team Udayavani |

ಬ್ಯಾಂಕಾಕ್‌: ಏಷ್ಯನ್‌ ಒಲಿಂಪಿಕ್‌ ಮಂಡಳಿ 2022ರಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಿಕೆಟಿಗೆ ಅವಕಾಶ ನೀಡುವ ನಿರ್ಧಾರ ಕೈಗೊಂಡಿದೆ. ಭಾನುವಾರ ನಡೆದ ಏಷ್ಯಾದ ಒಲಿಂಪಿಕ್‌ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

Advertisement

2010ರಲ್ಲಿ ಕ್ರಿಕೆಟನ್ನು ಏಷ್ಯನ್‌ ಗೇಮ್ಸ್ ನಲ್ಲಿ ಮೊದಲ ಸಲ ಪರಿಚಯಿಸಲಾಗಿತ್ತು. ಇಲ್ಲಿ ಟಿ20 ಮಾದರಿಯ ಕ್ರಿಕೆಟ್‌ ಆಡಲಾಗಿತ್ತು. ಉದ್ಘಾಟನಾ ಕೂಟದ ಪುರುಷರ ವಿಭಾಗದಲ್ಲಿ ಬಾಂಗ್ಲಾದೇಶ ಹಾಗೂ ವನಿತಾ ವಿಭಾಗದಲ್ಲಿ ಪಾಕಿಸ್ತಾನ ಚಿನ್ನದ ಪದಕ ಜಯಿಸಿತ್ತು. 2014ರಲ್ಲಿ ಶ್ರೀಲಂಕಾ ಪುರುಷರ ತಂಡ ಹಾಗೂ ಪಾಕಿಸ್ತಾನ ಮಹಿಳಾ ತಂಡ ಚಿನ್ನ ತನ್ನದಾಗಿಸಿಕೊಂಡಿತ್ತು. ಆದರೆ 2018ರ ಏಷ್ಯನ್‌ ಗೇಮ್ಸ್‌ನಿಂದ ಕ್ರಿಕೆಟನ್ನು ದೂರ ಇಡಲಾಯಿತು. 2022ರ ಏಷ್ಯನ್‌ ಗೇಮ್ಸ್ ಗೆ ಆಸ್ಟ್ರೇಲಿಯ ಸೇರಿದಂತೆ ಮಧ್ಯ ಹಾಗೂ ಪೆಸಿಫಿಕ್ ದ್ವೀಪ ರಾಷ್ಟ್ರಗಳನ್ನು ಆಹ್ವಾನಿಸಿರುವುದು ಸಾಮಾನ್ಯ ಸಭೆಯಲ್ಲಿ ಕೈಗೊಂಡ ಮತ್ತೂಂದು ಮಹತ್ತರ ನಿರ್ಧಾರವಾಗಿದೆ.

ಭಾರತ ಪಾಲ್ಗೊಂಡೀತೇ?: ಕ್ರಿಕೆಟ್‌ನ “ಪವರ್‌ ಹೌಸ್‌’ ಎಂದೇ ಗುರುತಿಸಲ್ಪಡುವ ಭಾರತ, ಬಿಡುವಿಲ್ಲದ ವೇಳಾಪಟ್ಟಿಯ ಕಾರಣ ಹೇಳಿ 2010 ಮತ್ತು 2014ರ ಏಷ್ಯಾಡ್‌ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಮುಂದಿನ ಏಷ್ಯಾಡ್‌ ಗೆ ಇನ್ನೂ 3 ವರ್ಷವಿರುವುದರಿಂದ ಭಾರತ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಕಷ್ಟು ಸಮಯಾವಕಾಶವಿದೆ. “2022ರ ಏಷ್ಯನ್‌ ಗೇಮ್ಸ್‌ಗೆ ಇನ್ನೂ ಬಹಳಷ್ಟು ಸಮಯವಿದೆ. ಹೀಗಾಗಿ ಸಭೆಯಲ್ಲಿಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಬಿಸಿಸಿಐ ಹೇಳಿದೆ. ಕಾಮನ್ವೆಲ್ತ್‌ ಗೇಮ್ಸ್‌ನಲ್ಲೂ ಒಂದು ಬಾರಿ ಕ್ರಿಕೆಟ್‌ ಆಡಲಾಗಿತ್ತು. ಅದು 1998ರಷ್ಟು ಹಿಂದೆ . ಇಲ್ಲಿ ಭಾರತ ಭಾಗವಹಿಸಿತ್ತಾದರೂ ಪದಕ ಜಯಿಸಿರಲಿಲ್ಲ. ದಕ್ಷಿಣ ಆಫ್ರಿಕಾ ಚಿನ್ನ, ಆಸ್ಟ್ರೇಲಿಯ ಬೆಳ್ಳಿ ಪದಕ ಗೆದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next