Advertisement

ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ: ಶಿವಮೊಗ್ಗದಲ್ಲಿ ಇಬ್ಬರ ಬಂಧನ

12:11 PM Nov 07, 2020 | keerthan |

ಶಿವಮೊಗ್ಗ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಇಬ್ಬರನ್ನು ಬಂಧಿಸಿ 40 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.

Advertisement

ಶಿವಮೊಗ್ಗ ನಗರದ ಮಲವಗೊಪ್ಪ ಬಸ್ ಸ್ಟಾಪ್ ನಲ್ಲಿ ಆರೋಪಿಗಳು ಐಪಿಎಲ್‍ ಕ್ರಿಕೆಟ್‍ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ದಾಳಿ ನಡೆಸಿದ್ದಾರೆ.

ಆರೋಪಿಗಳನ್ನು ಮಹ್ಮಮದ್ ಮಸೂದ್ (43ವರ್ಷ), ಶೇಖರ್ (26 ವರ್ಷ) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಉಳಿದಿರುವುದು ಇದೊಂದೆ ಮಾರ್ಗ: ಕೊಹ್ಲಿಗೆ ಗೌತಮ್ ‘ಗಂಭೀರ’ ಸಲಹೆ

ಆರೋಪಿಗಳಿಂದ 40 ಸಾವಿರ ರೂ ನಗದು ಹಾಗೂ 2 ಮೊಬೈಲ್ ಪೋನ್‍ಗಳನ್ನು ವಶ ಪಡಿಸಿಕೊಂಡು  ಆರೋಪಿಗಳನ್ನು ಬಂಧಿಸಿರುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next