Advertisement

Box office: ಕರೀನಾ,ಕೃತಿ, ಟಬು ‘Crew’ಗೆ ಭರ್ಜರಿ ರೆಸ್ಪಾನ್ಸ್: ಮೊದಲ ದಿನ ಗಳಿಸಿದ್ಷೆಷ್ಟು?

02:53 PM Mar 30, 2024 | Team Udayavani |

ಮುಂಬಯಿ: ಬಾಲಿವುಡ್‌ ನಲ್ಲಿ ಈ ವಾರ ತೆರೆಕಂಡಿರುವ ʼಕ್ರ್ಯೂʼ  ಸಿನಿಮಾಕ್ಕೆ ಮೊದಲ ದಿನವೇ ಭರ್ಜರಿ ಆರಂಭ ಸಿಕ್ಕಿದೆ.

Advertisement

ಕರೀನಾ, ಕೃತಿ, ಟಬು ಅಭಿನಯದ ʼಕ್ರ್ಯೂʼ ಸಿನಿಮಾದ ಟ್ರೇಲರ್‌ ರಿಲೀಸ್‌ ಬಳಿಕ ಸಿನಿಮಾದ ಬಗ್ಗೆ ಹೈಪ್‌ ಕ್ರಿಯೇಟ್‌ ಆಗಿತ್ತು. ಅದರಂತೆ  ಸಿನಿಮಾ ಮೊದಲ ದಿನವೇ ಬಾಕ್ಸ್‌ ಆಫೀಸ್‌ ನಲ್ಲಿ ಉತ್ತಮ ಗಳಿಕೆ ಕಾಣುವ ಮೂಲಕ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಟಬು, ಕರೀನಾ ಕಪೂರ್ ಮತ್ತು ಕೃತಿ ಸನನ್ ʼಕ್ರ್ಯೂʼ  ಮೊದಲ ದಿನ 10.28 ಕೋಟಿ ರೂಪಾಯಿಯ  ಕಮಾಯಿ ಮಾಡಿದೆ. ವಿಶ್ವಾದ್ಯಂತ ರೂ 20.07 ಕೋಟಿ ರೂ.ಗಳಿಸಿದೆ ಎನ್ನಲಾಗಿದೆ. ಆ ಮೂಲಕ ಬಾಲಿವುಡ್‌ ನಲ್ಲಿ ಈ ವರ್ಷ ಬಂದ ʼಫೈಟರ್‌ʼ ಹಾಗೂ ʼಸೈತಾನ್‌ʼ ಸಿನಿಮಾದ ಬಳಿಕ ಅತೀ ಹೆಚ್ಚು ಗಳಿಕೆ ಕಂಡ ಮೂರನೇ ಸಿನಿಮಾವಾಗಿ ʼಕ್ರ್ಯೂʼ ಹೊರಹೊಮ್ಮಿದೆ.

‘ಗಾಡ್ಜಿಲ್ಲಾ ಎಕ್ಸ್ ಕಾಂಗ್‌ʼ ಮತ್ತು ಕಾಂಗ್’ಪೃಥ್ವಿರಾಜ್ ಸುಕುಮಾರನ್ ಅವರ ‘ಆಡುಜೀವಿತಂʼ ಸಿನಿಮಾದೊಂದಿಗೆ ಪೈಪೋಟಿಯಾಗಿ ʼಕ್ರ್ಯೂʼ ತೆರೆಕಂಡರೂ ಪ್ರೇಕ್ಷಕರ ಪಾಸಿಟಿವ್‌ ರೆಸ್ಪಾನ್ಸ್‌ ನಿಂದಾಗಿ ಸಿನಿಮಾ ಮೊದಲ ದಿನವೇ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ.

‘ಕ್ರ್ಯೂʼಚಿತ್ರವನ್ನು ರಾಜೇಶ್ ಕೃಷ್ಣನ್ ನಿರ್ದೇಶಿಸಿದ್ದು, ದಿಲ್ಜಿತ್ ದೋಸಾಂಜ್, ಶಾಶ್ವತ ಚಟರ್ಜಿ ಮತ್ತು ರಾಜೇಶ್ ಶರ್ಮಾ ನಟಿಸಿದ್ದಾರೆ. ಕಪಿಲ್ ಶರ್ಮಾ ಅವರೊಂದಿಗೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next