Advertisement

ನವಿರೇಳಿಸುವ ವೀಡಿಯೋ ವೈರಲ್‌

01:10 AM Apr 09, 2021 | Team Udayavani |

 ನಾರ್ವೆ :  ನಾರ್ವೆಯ ಸಮುದ್ರ ವ್ಯಾಪ್ತಿಯಲ್ಲಿ ತಾಂತ್ರಿಕ ತೊಂದರೆಗೀಡಾದ  “ಎಮ್ಸ್‌ಲಿಫ್ಟ್ ಹೆಂಡ್ರಿಕಾ’ (Eemslift Hendrika) ಸರಕು ಸಾಗಣೆಯ ಹಡಗಿನಲ್ಲಿದ್ದ 12 ಮಂದಿ ಸಿಬಂದಿಯನ್ನು ರಕ್ಷಿಸಲಾಗಿದೆ.

Advertisement

ಎರಡು ಹಂತಗಳಲ್ಲಿ ನಾರ್ವೆಯ ರಕ್ಷಣ ಸಿಬಂದಿ ಕಾರ್ಯಾಚರಣೆ ನಡೆಸಿದ್ದಾರೆ.ಮೊದಲ ಹಂತದಲ್ಲಿ ಹಡಗಿನ ಡೆಕ್‌ ಮೇಲೆ ಇದ್ದ ಎಂಟು ಮಂದಿಯನ್ನು ಒಬ್ಬೊಬ್ಬರನ್ನಾಗಿ ಸುರಕ್ಷಿತವಾಗಿ ಹೆಲಿಕಾಪ್ಟರ್‌ನ ಒಳಕ್ಕೆ ತಂದಿದ್ದಾರೆ. ಭಾರೀ ಗಾತ್ರದ ಅಲೆಗಳಿಗೆ ಸಿಕ್ಕಿದ್ದ ಹಡಗು ಏಳುತ್ತಾ, ಬೀಳುತ್ತಾ ಸಾಗುತ್ತಿತ್ತು. ಇದರಿಂದ ಭಯಗೊಂಡ ನಾಲ್ವರು ಸಮುದ್ರಕ್ಕೆ ಜಿಗಿದಿದ್ದರು. ನಾರ್ವೆಯ ರಕ್ಷಣ ಪಡೆಗಳು ಚಿತ್ರೀಕರಿಸಿದ ವೀಡಿಯೋ ದೃಶ್ಯಗಳ ಪ್ರಕಾರ ಒಬ್ಟಾತ ಸಮುದ್ರಕ್ಕೆ ಧುಮುಕುವುದು ಕಂಡುಬಂದಿದೆ. ಅವರನ್ನೂ ಪಡೆಗಳು ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿ ಪಾರು ಮಾಡಿವೆ. ಈ ರೋಮಾಂಚನಕಾರಿ ವೀಡಿಯೋ ಈಗ ವೈರಲ್‌ ಆಗಿದೆ. ನಾರ್ವೆಯ ಬಂದರು ನಗರ ಆ್ಯಲ್ಯುಸಂದ್‌ ನಗರದಿಂದ 130 ಕಿ.ಮೀ. ವಾಯವ್ಯ ದಿಕ್ಕಿನಲ್ಲಿ ಈ ಕಾರ್ಯಾಚರಣೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next