Advertisement

ಕ್ರೆಡಿಟ್‌ ಸ್ಕೋರ್‌

08:16 PM Jan 19, 2020 | Team Udayavani |

ಗ್ರಾಹಕರು ಬ್ಯಾಂಕುಗಳಲ್ಲಿ ಸಾಲ ಪಡೆಯುವಾಗ, ಮುಖ್ಯವಾಗಿ ಸಾಲ ಬಯಸುವ ವ್ಯಕ್ತಿಯ ಸಾಲ ಮರುಪಾವತಿಸುವ ಸಾಮರ್ಥ್ಯ, ಒದಗಿಸಬಹುದಾದ ಬದ್ಧತೆ(ಸೆಕ್ಯುರಿಟಿ), ಮೂರನೆಯವರ ಜಾಮೀನು ಹಾಗೂ ಸಾಲದ ಉದ್ದೇಶ ಇವುಗಳ ವಿವರಣೆ ಕೇಳುತ್ತಾರೆ. ಜೊತೆಗೆ ಸಾಲ ಬಯಸುವ ವ್ಯಕ್ತಿ ಈ ಹಿಂದೆ ಸಾಲ ಪಡೆದು ಮರುಪಾವತಿಸಿರುವ ಚರಿತ್ರೆಯನ್ನು ತಿಳಿದುಕೊಳ್ಳುತ್ತಾರೆ.

Advertisement

ಕೆಲವೊಮ್ಮೆ ಸಾಲ ಬಯಸುವ ವ್ಯಕ್ತಿ ಬೇರೆಯವರ ಸಾಲಕ್ಕೆ ಜಾಮೀನು ಹಾಕಿರಬಹುದು. ಒಟ್ಟಿನಲ್ಲಿ, ವ್ಯಕ್ತಿಯ ನಿಜವಾದ ಸಾಲ ಮರುಪಾವತಿಸುವ, ಕೆಲವೊಮ್ಮೆ ಸಾಲ ಬಯಸುವ ವ್ಯಕ್ತಿಗೆ ಇರುವ ಸಾಲ ಮರುಪಾವತಿಸುವ ಸಾಮರ್ಥ್ಯವನ್ನು ಸಾಲ ನೀಡುವ ಮುನ್ನ ಸ್ಥೂಲವಾಗಿ ಪರಿಶೀಲಿಸುತ್ತಾರೆ.

ಕೆಲವೊಮ್ಮೆ ಸಾಲ ಬಯಸುವ ವ್ಯಕ್ತಿ, ಬೇರೆ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದು ಸುಸ್ತಿದಾರನಾಗಿ, ಮತ್ತೂಂದು ಬ್ಯಾಂಕಿಗೆ ಸಾಲದ ಅರ್ಜಿ ಸಲ್ಲಿಸಿರುವ ಉದಾಹರಣೆಗಳೂ ಉಂಟು. ಇದೇ ವೇಳೆ ಅರ್ಜಿದಾರರು ಬೇರೆ ಬ್ಯಾಂಕಿನಲ್ಲಿ ಬೇರೆಯವರ ಸಾಲಕ್ಕೆ ಜಾಮೀನು ಹಾಕಿ ಅಂಥ ಸಾಲ ಸುಸ್ತಿ ಆಗಿರಲೂಬಹುದು. ಇಂಥ ಸಂದರ್ಭದಲ್ಲಿ ಕ್ರೆಡಿಟ್‌ ಸ್ಕೋರ್‌ ಸಂಸ್ಥೆಗಳು ಬ್ಯಾಂಕುಗಳಿಗೆ ವ್ಯಕ್ತಿಯ ಸಂಪೂರ್ಣ ಸಾಲ- ಜಾಮೀನು ವಿವರಣೆ ನೀಡುತ್ತದೆ.

ಏನಿದು ಕ್ರೆಡಿಟ್‌ ಸ್ಕೋರ್‌
ಮುಖ್ಯವಾಗಿ ಭಾರತದಲ್ಲಿ ಕ್ರೆಡಿಟ್‌ ಇನ್‌ಫಾರ್ಮೇಷನ್‌ ಬ್ಯೂರೋ ಆಫ್ ಇಂಡಿಯಾ(ಇಐಆಐಔ), ಈಕ್ವಿಫ್ಯಾಕ್ಸ್‌, ಎಕ್ಸ್‌ಪೀರಿಯಾನ್‌ ಸಂಸ್ಥೆಗಳು ಎಲ್ಲಾ ಬ್ಯಾಂಕುಗಳು ಹಾಗೂ ಆರ್ಥಿಕ ಸಂಸ್ಥೆಗಳಿಂದ ಮಾಹಿತಿ ಪಡೆದು, ಬ್ಯಾಂಕುಗಳಿಗೆ ತಿಳಿಸುತ್ತವೆ. ಇವರು 300- 900ರವರೆಗೆ ಕ್ರೆಡಿಟ್‌ ಸ್ಕೋರ್‌ ಅಂಕಗಳನ್ನು ವ್ಯಕ್ತಿಯ ಕುರಿತಾಗಿ ಒದಗಿಸುತ್ತಾರೆ. ಕನಿಷ್ಠ 750 ಸ್ಕೋರ್‌ ಇರಬೇಕಾಗುತ್ತದೆ. ಈ ವರದಿಯಲ್ಲಿ ವ್ಯಕ್ತಿಯು ಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದಾನೆ, ಸಾಲದ ಮೊತ್ತ, ಸಾಲ ಸರಿಯಾಗಿ ಮರುಪಾವತಿ ಆಗುತ್ತಿದೆಯೇ, ಸಾಲ ಮನ್ನಾ ಆಗಿದೆಯೇ, ಸಾಲದ ಅರ್ಜಿ ತಿರಸ್ಕೃತವಾಗಿದೆಯೇ, ಚೆಕ್‌ ಬೌನ್ಸ್‌ ಉದಾಹರಣೆ ಸೇರಿದಂತೆ ಎಲ್ಲಾ ಮಾಹಿತಿಯನ್ನೂ ಬ್ಯಾಂಕುಗಳಿಗೆ ನೀಡುತ್ತವೆ.

ಉತ್ತಮ ಕ್ರೆಡಿಟ್‌ ಸ್ಕೋರ್‌ಗಾಗಿ, ಸಾಲಗಾರ ಸಮಯಕ್ಕೆ ಸರಿಯಾಗಿ ಪಡೆದ ಸಾಲ ಹಿಂತಿರುಗಿಸಬೇಕು. ತಾನು ಕೊಟ್ಟ ಚೆಕ್‌ ಬೌನ್ಸ್‌ ಆಗದಂತೆ ನೋಡಿಕೊಳ್ಳಬೇಕು. ಜೊತೆಗೆ ಜಾಮೀನು ಹಾಕಿದ್ದಲ್ಲಿ ಅಂಥ ಸಾಲ ಕೂಡಾ ಸುಸ್ತಿಯಾಗದಂತೆ ನೋಡಿಕೊಳ್ಳಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next