Advertisement

ಕ್ರೆಡಿಟ್‌ ಸ್ಕೋರ್‌ ಹಣಕಾಸಿನ ಅಗತ್ಯವನ್ನು ನಿರ್ಣಯಿಸುವ ಕ್ರಮ

09:16 PM Jan 26, 2020 | Sriram |

ಇಂದು ವಸ್ತುಗಳನ್ನು ಖರೀದಿಸುವವನಿಗಿಂತ ಮಾರುವವರ ಬಳಿಯೇ ಹೆಚ್ಚು ಮಾಹಿತಿ ಇರುತ್ತದೆ. ಇದೇ ಸೂತ್ರ ಇದೀಗ ಬ್ಯಾಕಿಂಗ್‌ ಕ್ಷೇತ್ರಕ್ಕೂ ಅನ್ವಯವಾಗುತ್ತಿದೆ. ನಮಗೆ ಸಾಲ ನೀಡುವ ಬ್ಯಾಂಕ್‌ಗಳಿಗೆ ನಮ್ಮ ಆರ್ಥಿಕ ಶಿಸ್ತಿನ ಕುರಿತು ನಮಗಿಂತ ಹೆಚ್ಚಿನ ಮಾಹಿತಿ ಇರುತ್ತದೆ. ಇಂದು ಸಾಲ ನೀಡುವುದು ಮತ್ತು ಅದರ ಪ್ರಮಾಣವನ್ನು ನಿರ್ಧರಿಸುವುದು ಕ್ರೆಡಿಟ್‌ ಸ್ಕೋರ್‌. ನಮ್ಮ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗದೆ ಇದ್ದರೆ ನಾವು ಸಾಲ ಪಡೆಯಲು ಅರ್ಹರಲ್ಲ.

Advertisement

ಯಾಕೆ ಮುಖ್ಯ
ಕೆಲವೊಮ್ಮೆ ಮೊದಲ ಬಾರಿ ಸಾ ಪಡೆಯುವ ಭರದಲ್ಲಿ ಬ್ಯಾಂಕ್‌ನೊಂದಿಗೆ ವಿಧದ ಒಪ್ಪಂದ ಮಾಡಿಕೊಳ್ಳುತ್ತೇವೆ. ಆ ಬಗ್ಗೆ ಸ್ಟಷ್ಟವಾದ ಮಾಹಿತಿಯೂ ಇರುವುದಿಲ್ಲ. ಈಗ ಕೆಲವು ವಸ್ತುಗಳ ಖರೀದಿಗೆ ಹಣಕಾಸು ಬಡ್ಡಿ ರಹಿತವಾಗಿ ದೊರಕುತ್ತಿದ್ದು, 10 ನಿಮಿಷಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಯುತ್ತದೆ. ನಮ್ಮ ಭವಿಷ್ಯದ ಹಣಕಾಸಿಗಾಗಿ ಕ್ರೆಡಿಟ್‌ ಸ್ಕೋರ್‌ ಅನ್ನು ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಇಲ್ಲಿ ಕ್ರೆಡಿಟ್‌ ಸ್ಕೋರ್‌ ಮೇಲೆ ಎಚ್ಚರಿಕೆ ವಹಿಸಬಹುದಾದ ಕೆಲವು ಮಾಹಿತಿಯನ್ನು ನೀಡಲಾಗಿದೆ.

ಏನಿದು ಕ್ರೆಡಿಟ್‌ ಸ್ಕೋರ್‌
ಮುಖ್ಯವಾಗಿ ಭಾರತದಲ್ಲಿ ಕ್ರೆಡಿಟ್‌ ಇನಾ#ರ್ಮೇಶ‌ನ್‌ ಬ್ಯೂರೋ ಆಫ್ ಇಂಡಿಯಾ (CIBIL), ಈಕ್ವಿಫ್ಯಾಕ್ಸ್ , ಎಕ್ಸಿ$³àರಿಯಾನ್‌ ಸಂಸ್ಥೆಗಳು, ಎಲ್ಲ ಬ್ಯಾಂಕು ಹಾಗೂ ಆರ್ಥಿಕ ಸಂಸ್ಥೆಗಳಿಂದ ಮಾಹಿತಿ ಪಡೆದು ಗ್ರಾಹಕರ ಸಿಬಿಲ್‌ ಸ್ಕೋರ್‌ ಅಥವ ಕ್ರೆಡಿಟ್‌ ಸ್ಕೋರ್‌ ಅನ್ನು ಬ್ಯಾಂಕುಗಳಿಗೆ ತಿಳಿಸುತ್ತವೆ. ಇವರು 300- 900ರ ವರೆಗೆ ಕ್ರೆಡಿಟ್‌ ಸ್ಕೋರ್‌ ಅನ್ನು ಗ್ರಾಹಕರ ಕುರಿತಾಗಿ ಒದಗಿಸುತ್ತಾರೆ. ನಾವು ಯಾವುದೇ ಸಂಸ್ಥೆಯಿಂದ ಸಾಲ ಪಡೆಯಲು ನಮ್ಮ ಸ್ಕೋರ್‌ ಕನಿಷ್ಠ 750 ಇರಲೇಬೇಕು.

ಈ ಮಾಹಿತಿಯಲ್ಲಿ ಗ್ರಾಹಕ ಯಾವ ಬ್ಯಾಂಕಿನಿಂದ ಸಾಲ ಪಡೆದಿ¨ªಾನೆ, ಸಾಲದ ಮೊತ್ತ, ಸಾಲ ಸರಿಯಾಗಿ ಮರುಪಾವತಿ ಆಗುತ್ತಿದೆಯೇ, ಸಾಲಾಮನ್ನಾ ಆಗಿದೆಯೇ, ಸಾಲದ ಅರ್ಜಿ ತಿರಸ್ಕೃತವಾಗಿದೆಯೇ, ಚೆಕ್‌ಬೌ®Õ… ಇತ್ಯಾದಿಗಳನ್ನು ಒಳಗೊಂಡ ಪೂರ್ಣ ವಿವರಗಳನ್ನು ಬ್ಯಾಂಕ್‌ಗಳಿಗೆ ನೀಡುತ್ತವೆ. ಗ್ರಾಹಕರು ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ವೇಳೆ, ಸಾಲ ಮರುಪಾವತಿಸುವ ಸಾಮರ್ಥ್ಯ, ಒದಗಿಸಬಹುದಾದ ಬದ್ಧತೆ (ಸೆಕ್ಯುರಿಟಿ), ಮೂರನೆಯವರ ಜಾಮೀನು ಹಾಗೂ ಸಾಲದ ಉದ್ದೇಶ ಇವುಗಳ ವಿವರಣೆ ಕೇಳುತ್ತಾರೆ. ಜತೆಗೆ ಸಾಲ ಬಯಸುವ ವ್ಯಕ್ತಿ ಈ ಹಿಂದೆ ಸಾಲ ಪಡೆದು ಮರುಪಾವತಿಸಿರುವ ಚರಿತ್ರೆಯನ್ನು ಇದು ಬ್ಯಾಂಕುಗಳಿಗೆ ನೀಡುತ್ತದೆ.

ಜಾಮೀನು ನಿಂತರೂ ಸಮಸ್ಯೆ ಯಾಗಬಹುದು
ಅನಿವಾರ್ಯ ಪರಿಸ್ಥಿತಿಗಳಲ್ಲಿ ಸ್ನೇಹದ ಸಲುವಾಗಿಯೋ ಅಥವಾ ಸಂಬಂಧಕ್ಕೆ ಕಟ್ಟು ಬಿದ್ದು ಕೆಲವೊಮ್ಮೆ ಸಾಲಕ್ಕಾಗಿ ಜಾಮೀನು ನಿಲ್ಲಬೇಕಾಗುತ್ತದೆ. ಇಂತಹ ಸಂದರ್ಭ ಜಾಮೀನಾಗುವ ವ್ಯಕ್ತಿಯ ನಿಜವಾದ ಸಾಲ ಮರುಪಾವತಿಸುವ, ಕೆಲವೊಮ್ಮೆ ಸಾಲ ಪಡೆದ ವ್ಯಕ್ತಿಗೆ ಇರುವ ಸಾಲ ಮರುಪಾವತಿಸುವ ಸಾಮರ್ಥ್ಯವನ್ನು ಸ್ಥೂಲವಾಗಿ ಪರಿಶೀಲಿಸುತ್ತಾರೆ.

Advertisement

ನೀವು ಬೇರೆಯವರ ಮೂಲಕ ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅರ್ಜಿ ಹಾಕಿ, ಅವರಿಗೆ ನೀವು ಜಾಮೀನು ನಿಂತಿದ್ದರೆ ಅದೂ ಇಲ್ಲಿ ಲೆಕ್ಕಕ್ಕೆ ಬರುತ್ತದೆ. ನೀವು ಜಾಮೀನು ನಿಂತಿರುವ ವ್ಯಕ್ತಿ ಸಾಲ ಮರುಪಾವತಿಸದೆ ಇದ್ದರೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಮೇಲೆ ಅದು ಪರಿಣಾಮ ಬೀರುತ್ತದೆ. ಹೀಗಾಗಿ ಕ್ರೆಡಿಟ್‌ ಸ್ಕೋರ್‌ ಸಂಸ್ಥೆಗಳು ಬ್ಯಾಂಕ್‌ಗಳಿಗೆ ಆ ಗ್ರಾಹಕನ ಸಂಪೂರ್ಣ ಸಾಲ ಮತ್ತು ಜಾಮೀನು ವಿವರಣೆಯನ್ನು ನೀಡುತ್ತವೆ.

ಕ್ರೆಡಿಟ್‌ ಸ್ಕೋರ್‌ ಹೆಚ್ಚಿಸುವುದೇಗೆ
ಉತ್ತಮ ಕ್ರೆಡಿಟ್‌ ಸ್ಕೋರ್‌ಗಾಗಿ, ಸಾಲಗಾರ ಸಮಯಕ್ಕೆ ಸರಿಯಾಗಿ ಪಡೆದ ಸಾಲ ಮರುಪಾವತಿಸಬೇಕು.
ಸಮಯಕ್ಕೆ ಸರಿಯಾಗಿ ಬಿಲ್‌ ಪಾವತಿಸಿ.
ತಾನು ಕೊಟ್ಟ ಚೆಕ್‌ ಬೌ®Õ… ಆಗದಂತೆ ನೋಡಿಕೊಳ್ಳಬೇಕು. ಜತೆಗೆ ಜಾಮೀನು ಹಾಕಿದ್ದಲ್ಲಿ ಅಂಥ ಸಾಲ ಕೂಡಾ ಸುಸ್ತಿಯಾಗದಂತೆ ನೋಡಿಕೊಳ್ಳಬೇಕು.
ಒಂದೇ ಬಾರಿ ಎರಡಕ್ಕಿಂತ ಹೆಚ್ಚು ಕಡೆ ಸಾಲ ಪಡೆಯಬಾರದು.
ಅಧಿಕ ಮೊತ್ತದ ಸಾಲ ನೀಡುವ ಕ್ರೆಡಿಟ್‌ ಕಾರ್ಡ್‌ನ್ನು ಬಳಸಿ.
ಒಂದಕ್ಕಿಂತ ಹೆಚ್ಚು ಕಾರ್ಡ್‌ ಇದ್ದರೆ ಎಲ್ಲ ಕಾರ್ಡ್‌ಗಳನ್ನು ಬಳಸುವ ಅಭ್ಯಾಸ ರೂಢಿಸಿಕೊಳ್ಳಿ.
ಹಲವು ವರ್ಷಗಳಿಂದ ಬಳಸುತ್ತಿರುವ ಕಾರ್ಡ್‌ಗಳನ್ನು ಸ್ಥಗಿತಗೊಳಿಸಬೇಡಿ.
6 ತಿಂಗಳಿಗೂ ಹೆಚ್ಚು ಕಾಲ ಬಳಕೆಯಾಗದಿದ್ದಲಿ, ಕಾರ್ಡ್‌ ರದ್ದಾಗುವ ಸಾಧ್ಯತೆ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next