Advertisement

ಕ್ರಿಡಿಟ್‌ ಕಾರ್ಡ್‌ ಸಾಲ: ಗೊತ್ತಿರಬೇಕಾದ 4 ಸತ್ಯಗಳು

06:00 AM Jul 16, 2018 | Team Udayavani |

ಒಂದು ಸರ್ವೆ ಆಗಿದೆ. ಅದು ನಾವು ನೀವು ಬಳಸುವ ಡೆಬಿಟ್‌, ಕ್ರೆಡಿಟ್‌ ಕಾರ್ಡಿನ ಬಗ್ಗೆ. ಸರ್ವೆ ಹೇಳುವ ಪ್ರಕಾರ,  ಮೂರು ಲಕ್ಷ ಆದಾಯ ಪಡೆಯುವ, 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿ  ಸರಾಸರಿ ಎಂದರೂ 3-4 ಕ್ರೆಡಿಟ್‌ ಕಾರ್ಡ್‌ ಇಟ್ಟು ಕೊಂಡಿರುತ್ತಾನೆ. 35ರಿಂದ 40ವರ್ಷದ ಒಳಗಿನವರು 3 ಕ್ರೆಡಿಟ್‌ ಕಾರ್ಡು, 40 ದಾಟಿದವರು ಎರಡು, 50 ದಾಟಿದ್ದರೆ ಒಂದು ಕ್ರೆಡಿಟ್‌ ಕಾರ್ಡ್‌ ಇರುತ್ತದೆ.  ಒಟ್ಟಾರೆ ಇದರ ಮರ್ಮ, ದುಡಿಯುವ ವರ್ಗ ಹೆಚ್ಚು ಸಾಲ ಮಾಡುತ್ತಿದೆ ಅನ್ನೋದು. ಸಂತೋಷ. ಆದರೆ ಕಟ್ಟುತ್ತಿರುವ ಬಡ್ಡಿಯ ಪ್ರಮಾಣ  ಶೇ. 18ರಿಂದ 36ರಷ್ಟು ಮಾತ್ರ ಅನ್ನೋದು  ಸತ್ಯದ ಇನ್ನೊಂದು ಮುಖ. ಆದ್ದರಿಂದ ಸಾಲ ಮಾಡುವ ಮುನ್ನ ಅದಕ್ಕೆ ತೆರಬೇಕಾಗುವ ಬಡ್ಡಿ ಎಷ್ಟೆಂದು ನೋಡಿಕೊಳ್ಳಿ. 

Advertisement

1. ಬ್ಯಾಂಕ್‌ಗಳು ಹಬ್ಬಗಳ ಸಂದರ್ಭದಲ್ಲಿ ಹೆಚ್ಚೆಚ್ಚು ಕ್ಯಾಶ್‌ ಬ್ಯಾಕ್‌ ಆಫ‌ರ್‌ಗಳನ್ನು ಕೊಡುತ್ತವೆ. ಇವುಗಳನ್ನು ಸರಿಯಾಗಿ ಬಳಸಿಕೊಳ್ಳಿ. ಕೆಲವು ಕಂಪೆನಿಗಳು ಕ್ರೆಡಿಟ್‌ ಕಾರ್ಡ್‌ಗಳಿಗೆ, ನೀವು ಬಳಸಿದ ಮೊತ್ತದ ಮೇಲೆ ಶೇ.2, 3ರಷ್ಟು ಕ್ಯಾಷ್‌ ಬ್ಯಾಕ್‌ ಆಫ‌ರ್‌ಗಳನ್ನು ಕೊಡುತ್ತವೆ. ಇದನ್ನು ಕೂಡಿಟ್ಟು ಕೊಂಡರೆ ಮುಂದೆ ಒಳ್ಳೆಯ ಕ್ಯಾಶ್‌ ಬ್ಯಾಕ್‌ ಸಿಗುತ್ತದೆ. ಇದರ ಜೊತೆಗೆ ಕೆಲ ಬ್ಯಾಂಕ್‌ಗಳು ತನ್ನ ಸದಸ್ಯರಿಗೆ ವಾರ್ಷಿಕವಾಗಿ ಫೀ ತೆಗೆದು ಕೊಳ್ಳದೇ ಉಚಿತ ಕಾರ್ಡುಕೊಡುವ ಪರಿಪಾಠ ಇಟ್ಟುಕೊಂಡಿವೆ. ಇಂಥವನ್ನು ಹೆಚ್ಚಾಗಿ ಬಳಸಿ.

2.  ಹಾಗಾದರೆ ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಬಾರದೆ ಅನ್ನೋ ಪ್ರಶ್ನೆ ಏಳುತ್ತದೆ.  ಬಳಸಬೇಕು. ಅದೂ ಬುದ್ಧಿವಂತಿಕೆಯಿಂದ ಬಳಸಬೇಕು. ಬ್ಯಾಂಕ್‌ಗಳು ಯಾವುದೇ ಕಾರಣಕ್ಕೂ ಎರಡಕ್ಕಿಂತ ಹೆಚ್ಚು ಕ್ರೆಡಿಟ್‌ ಕಾರ್ಡ್‌ ಇಟ್ಟು ಕೊಳ್ಳಬೇಡಿ. ಪ್ರತಿ ತಿಂಗಳ ನಿಮ್ಮ ಆದಾಯದಲ್ಲಿ ಸೋರಿ ಹೋಗುವ ಬಡ್ಡಿಯನ್ನು ತಡೆಯುವಲ್ಲಿ ಮುಂದಾಗಿ. ಅಂದರೆ ಗಡುವಿನ ಒಳಗೆ ಬಡ್ಡಿ ಪಾವತಿ ಮಾಡಿ. ಆ ಮೂಲಕ ಕ್ರೆಡಿಟ್‌ ಕಾರ್ಡ್‌ ಬಳಸಿ ಮಾಡಿರುವ ಸಾಲಕ್ಕೆ, ಬಡ್ಡಿಯ ರೂಪದಲ್ಲಿ ದಂಡ ಕಟ್ಟುವುದನ್ನು ಸಂಪೂರ್ಣವಾಗಿ ತಡೆಯಿರಿ. ಕಾರು, ಮನೆ, ಇತರೆ ವಸ್ತುಗಳನ್ನು ಕೊಳ್ಳಬೇಕಾದರೆ ಕ್ರೆಡಿಟ್‌ ಕಾರ್ಡ್‌ ಬಳಕೆ ಬೇಡ. ಬದಲಾಗಿ ಬ್ಯಾಂಕ್‌ ಸಾಲ ಪಡೆಯುವುದು ಲೇಸು. ಕಾರಣ. ಕ್ರೆಡಿಟ್‌ ಕಾರ್ಡಿಗೆ ಹಾಕುವ ದಂಡದಲ್ಲಿ ಎರಡು, ಮೂರು ತಿಂಗಳು ಬಡ್ಡಿ ಕಟ್ಟಬಹುದು. 

3. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮನೆಸಾಲಕ್ಕೆ ಶೇ.10.5ರಷ್ಟು, ಕಾರು ಸಾಲಕ್ಕೆ ಶೇ. 11.5, ವೈಯುಕ್ತಿಕ ಸಾಲ ಶೇ.14ರಷ್ಟು ಇರುವಾಗ ಕ್ರೆಡಿಟ್‌ ಕಾರ್ಡಿನ ಬಳಕೆ ಏಕೆ ? ಜೀವನ ಪರ್ಯಂತ ಕ್ರೆಡಿಟ್‌ ಕಾರ್ಡು ನಂಬಿಕೊಂಡು, ಬಡ್ಡಿ ಕಟ್ಟಿಕೊಂಡು ಬದುಕುವುದು ಕ್ಷೇಮವಲ್ಲ. 

4. ಕ್ರೆಡಿಟ್‌ ಕಾರ್ಡ್‌ ಬಳಸುವುದು ಅನಿವಾರ್ಯವಾದಲ್ಲಿ ಸಾಲಮಾಡಿದ ನಂತರ ಬಡ್ಡಿಯ ಗಣಿತ ಯಾವಾಗ ಪ್ರಾರಂಭವಾಗುತ್ತದೆ ಎನ್ನುವ ಮಾಹಿತಿ ಇರಲಿ. ಉದಾಹರಣೆಗೆ- ನೀವು 16ನೇ ತಾರೀಖು ಕ್ರೆಡಿಟ್‌ ಕಾರ್ಡಿನಲ್ಲಿ ವಸ್ತುಗಳನ್ನು ಪಡೆಯುತ್ತೀರಿ. ನಿಮ್ಮ ಬಡ್ಡಿ ಅವಧಿ 16ನೇ ತಾರೀಖೀನಿಂದ ಶುರುವಾಗುತ್ತದೆಯೋ ಅಥವಾ ಕೆಲ ಬ್ಯಾಂಕಿನ ನಿಯಮದಂತೆ ಈ ತಿಂಗಳ 10ರಿಂದ ಮುಂದಿನ ತಿಂಗಳ 10ನೇ ತಾರೀಖೀಗೆ ಮುಗಿಯುತ್ತದೆಯೋ ತಿಳಿದುಕೊಳ್ಳಿ ಯಾಕೆಂದರೆ, ಒಂದು ಪಕ್ಷ ನೀವು 9ನೇ ತಾರೀಖು ಕಾರ್ಡಿನ ಸಾಲ ಮಾಡಿದರೆ, ಒಂದೇ ದಿನಕ್ಕೆ ಒಂದು ತಿಂಗಳ ಬಡ್ಡಿ ಹೆಚ್ಚುವ ಸಾಧ್ಯತೆಯೂ ಇರುತ್ತದೆ. 

Advertisement

ಗುರು

Advertisement

Udayavani is now on Telegram. Click here to join our channel and stay updated with the latest news.

Next