Advertisement

Credit card; ಇಷ್ಟದ ನೆಟ್‌ವರ್ಕ್‌ ಆಯ್ಕೆ ಮಾಡಿ : ಗ್ರಾಹಕರಿಗೇನು ಲಾಭ?

12:48 AM Mar 08, 2024 | Team Udayavani |

ಹೊಸದಿಲ್ಲಿ: ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಶೀಘ್ರ ತಮ್ಮಿಷ್ಟದ ನೆಟ್‌ವರ್ಕ್‌ ಆಯ್ಕೆ ಅವಕಾಶ ದೊರೆ­ಯ­ಲಿದೆ. ಈ ಕುರಿತಾಗಿ ಕ್ರೆಡಿಟ್‌ ಕಾರ್ಡ್‌ ನೆಟ್‌ವರ್ಕ್‌ಗಳು, ಕಾರ್ಡ್‌ ನೀಡುವ ಬ್ಯಾಂಕ್‌ಗಳು, ಬ್ಯಾಂಕೇತರ ವಿತ್ತೀಯ ಸಂಸ್ಥೆಗಳಿಗೆ (ಎನ್‌ಬಿಎಫ್ಸಿ) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Advertisement

ಇನ್ನು ಮುಂದೆ ಕ್ರೆಡಿಟ್‌ ಕಾರ್ಡ್‌ ವಿತರಣೆ ಮಾಡುವ ಮೊದಲು ಗ್ರಾಹಕರಿಗೆ ಒಂದಕ್ಕಿಂತ ಹೆಚ್ಚು ಹೆಚ್ಚು ನೆಟ್‌ವರ್ಕ್‌ಗಳನ್ನು ಆಯ್ಕೆ ಮಾಡಿ­ಕೊಳ್ಳುವ ಅವಕಾಶವನ್ನು ಬ್ಯಾಂಕ್‌ ಹಾಗೂ ಬ್ಯಾಂಕೇತರ ಸಂಸ್ಥೆಗಳು ನೀಡ ಬೇಕಾಗುತ್ತದೆ. ಈಗಾಗಲೇ ಬಳಕೆ ಮಾಡುತ್ತಿರುವ ಗ್ರಾಹಕರೂ ಕಾರ್ಡ್‌ ನವೀಕರಣದ ಸಂದರ್ಭದಲ್ಲಿ ತಮ್ಮಿ ಷ್ಟದ ನೆಟ್‌ವರ್ಕ್‌ಗೆ ಬದಲಾಯಿ­ಸುವ ಅವಕಾಶವನ್ನು ಇದು ಒದಗಿಸಲಿದೆ.
ವೀಸಾ, ಮಾಸ್ಟರ್‌ಕಾರ್ಡ್‌, ಅಮೆ­ರಿಕನ್‌ ಎಕ್ಸ್‌ಪ್ರೆಸ್‌, ಡೈನರ್ಸ್‌ ಕ್ಲಬ್‌ ಮತ್ತು ರುಪೆ ಸದ್ಯ ದೇಶದಲ್ಲಿರುವ 5 ಕಾರ್ಡ್‌ ನೆಟ್‌ವರ್ಕ್‌ ವ್ಯವಸ್ಥೆಗಳು. ಅವು ಬ್ಯಾಂಕ್‌ ಹಾಗೂ ಗ್ರಾಹಕರ ನಡು ವಿನ ಕೊಂಡಿಯಾಗಿ ಕೆಲಸಮಾಡುತ್ತವೆ.

ಗ್ರಾಹಕರಿಗೇನು ಲಾಭ?
ಸೇವಾಶುಲ್ಕ ಆಧರಿಸಿ ಗ್ರಾಹಕರು ಇಷ್ಟದ ನೆಟ್‌ವರ್ಕ್‌ ಆಯ್ದುಕೊಳ್ಳಬಹುದು
ಬ್ಯಾಂಕ್‌ಗಳು ಒಪ್ಪಂದ ಮಾಡಿಕೊಂಡಿರುವ ನೆಟ್‌ವರ್ಕ್‌ಗೆ ಹೆಚ್ಚಿನ ಶುಲ್ಕ ಪಾವತಿಯಿಂದ ಮುಕ್ತಿ

Advertisement

Udayavani is now on Telegram. Click here to join our channel and stay updated with the latest news.

Next