Advertisement

ಸರ್ಕಾರಿ ನೌಕರರಲ್ಲಿ ರಚನಾತ್ಮಕತೆ ಅವಶ್ಯ

11:21 AM Feb 11, 2022 | Team Udayavani |

ಆಳಂದ: ಸರ್ಕಾರಿ ಸೇವೆ ಅತ್ಯಂತ ಶ್ರೇಷ್ಠ ಕೆಲಸವಾಗಿದ್ದು, ನೌಕರರು ವೃತ್ತಿ ಘನತೆ ಕಾಪಾಡಲು ಪ್ರಾಮಾಣಿಕವಾಗಿ, ರಚನಾತ್ಮಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ವಿ.ಎಸ್‌. ಷಡಕ್ಷರಿ ಹೇಳಿದರು.

Advertisement

ಪಟ್ಟಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನವೀಕರಣ ಭವನದ ಉದ್ಘಾಟನೆ, ನೌಕರರ ಸಂವಾದ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ತಿಂಗಳ ವೇತನ ಪಡೆದಂತೆ ಸರ್ಕಾರಿ ನೌಕರರು ಸರ್ಕಾರಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎಂದರು.

ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪರೀಕ್ಷೆ ಇಲ್ಲದೇ ಮುಂಬಡ್ತಿ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಏಳನೇ ವೇತನ ಆಯೋಗ ಜಾರಿಗೊಳಿಸಬೇಕು. ತುಟ್ಟಿ ಭತ್ಯೆ ಹೆಚ್ಚಿಸಬೇಕು ಎಂದು ಸಂಘವು ಸರ್ಕಾರದೊಂದಿಗೆ ಸಂಧಾನದ ಮೂಲಕ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ನೌಕರ ಸಂಘದ ತಾಲೂಕು ಅಧ್ಯಕ್ಷ ಸಿದ್ಧರಾಮ ಪಾಟೀಲ ಮಾತನಾಡಿ, ಅದ್ಧೂರಿಯಾಗಿ ಸಮಾರಂಭ ಕೈಗೊಂಡಿದ್ದು ಶ್ಲಾಘನೀಯವಾಗಿದೆ ಎಂದರು.

ರಾಜ್ಯ ಸರ್ಕಾರಿ ನೌಕರರಿಗೆ ಬಿಜೆಪಿ ಸರ್ಕಾರದ ಹಿಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅನೇಕ ಬೇಡಿಕೆಗಳನ್ನು ಈಡೇರಿಸಲಾಗಿದೆ. ತಾಲೂಕು ಸಂಘಕ್ಕೆ ಬೇಕಾದ ಸೌಲಭ್ಯ ಒದಗಿಸಲು ಬದ್ಧವಾಗಿದ್ದು, ಎರಡು ಎಕರೆ ನಿವೇಶನ ನೀಡಿ ಮತ್ತೂಂದು ಭವನ ನಿರ್ಮಾಣಕ್ಕೆ ಸಹಕರಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ರಾಜ್ಯಮಟ್ಟದ ಇನ್ನುಳಿದ ನೌಕರರ ಬೇಡಿಕೆಗೆ ಸಂಘದ ರಾಜ್ಯಾಧ್ಯಕ್ಷರೊಂದಿಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದರು.

ಮಾದನಹಿಪ್ಪರಗಾ ಮಠದ ಶ್ರೀ ಅಭಿನವ ಶಿವಲಿಂಗ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್‌. ಖಜೂರಿ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ತಾಪಂ ಇಒ ಡಾ| ಸಂಜಯ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸಂತಾಬಾಯಿ ಅಕ್ಕಿ, ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಅಬ್ದುಲ್‌ ಅಜೀಜ್‌ ಹಾಗೂ ಸಂಘದ ಜಿಲ್ಲೆ, ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸಂಘದ ತಾಲೂಕು ಅಧ್ಯಕ್ಷ ಸಿದ್ಧರಾಮ ವಿ. ಪಾಟೀಲ ಸ್ವಾಗತಿಸಿದರು, ಮುಖ್ಯ ಶಿಕ್ಷಕ ಡಿ.ಎನ್‌. ಪಾಟೀಲ ನಿರೂಪಿಸಿದರು, ಜಾಫರ್‌ ಅನ್ಸಾರಿ ವಂದಿಸಿದರು.

ಸಂಘದ ಉಪಾಧ್ಯಕ್ಷ ಬನಸಿದ್ಧ ಬಿರಾದಾರ, ಕೋಶಾಧ್ಯಕ್ಷ ಲೋಕೇಶ ಜಾಧವ, ಉಮೇಶ ಮಡಿವಾಳ, ಸಂತೋಷ, ಶ್ರೀನಿವಾಸ ಕುಲಕರ್ಣಿ, ಭೋಗಲಿಂಗಪ್ಪ, ಅಂಕುಶ ಚಳಕಾಪುರ, ವಿಶ್ವನಾಥ ಘೋಡಕೆ, ಶಿವಣ್ಣಾ ಬಿರಾದಾರ, ಶ್ರೀಶೈಲ ಕುಡಕಿ, ಮಲ್ಲಮ್ಮಾ, ಅವಿನಾಶ ಸಂಗೋಳಗಿ, ಸಿದ್ಧಲಿಂಗ ಅವುಟೆ, ಶ್ರೀಕಾಂತ ಭೂಸನೂರ, ಮಲ್ಲಿಕಾರ್ಜುನ ಕಾಟಕರ್‌, ಶರಣಬಸಪ್ಪ, ಮಹಾದೇವ ಗುಣಕಿ, ಪ್ರಕಾಶ ಖಾನಾಪುರೆ ಮತ್ತಿತರರು ಇದ್ದರು. ದೂರದರ್ಶನ ಕಲಾವಿದ ಶಂಕರ ಹೂಗಾರ, ಶಿವಶರಣಪ್ಪ ಪೂಜಾರಿ, ತಬಲಾ ಸಾಥಿ ಅಶೋಕ ಆಳಂದ ಸಂಗೀತ ಸೇವೆ ನೀಡಿದರು. ವಿವಿಧ ಇಲಾಖೆಯ 60 ನೌಕರರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next