Advertisement

ಕೆಂಪೇಗೌಡರ ಶಾಶ್ವತ ಸ್ಮರಣೆಗೆ ಕ್ರಿಯಾಯೋಜನೆ

01:37 PM Jul 12, 2021 | Team Udayavani |

ಬಿ.ವಿ.ಸೂರ್ಯ ಪ್ರಕಾಶ್‌

Advertisement

ರಾಮನಗರ: ಬೆಂಗಳೂರು ನಗರ ನಿರ್ಮಾತೃ ನಾಡ ಪ್ರಭು ಕೆಂಪೇಗೌಡರು ಐಕ್ಯವಾದ ಸ್ಥಳದ ಅಭಿವೃದ್ಧಿ ಜೊತೆಗೆ ಕೆಂಪೇಗೌಡರ ಸರ್ಕ್ನೂಟ್‌ನಲ್ಲಿ ಮಾಗಡಿ ತಾಲೂಕಿನ 10 ಪಾರಂಪರಿಕ ಸ್ಥಳಗಳನ್ನು 132 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಸರ್ಕಾರ ನಿರ್ಧರಿಸಿದೆ.

ಕಳೆದ ಜೂನ್‌ 27ರಂದು ನಡೆದ ಕೆಂಪೇಗೌಡರ 512ನೇ ಜಯಂತಿ ವೇಳೆ ಡಿಸಿಎಂ ಡಾ.ಸಿ.ಎನ್‌.ಅಶ್ವಥ ನಾರಾಯಣ, ಕೆಂಪೇಗೌಡರ ಆಳ್ವಿಕೆಯಲ್ಲಿದ್ದ ಪಾರಂಪ ರಿಕ ಸ್ಥಳಗಳು, ಕೆರೆ, ಕಟ್ಟೆಗಳು, ಕೋಟೆಗಳು ಇತ್ಯಾದಿ ಯನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದರು.

ಇತ್ತೀಚೆಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷ ತೆಯಲ್ಲಿ ಬೆಂಗಳೂರಿನಲ್ಲಿ ನಡೆದ ನಾಡಪ್ರಭು ಕೆಂಪೇ ಗೌಡಪಾರಂಪರಿಕಅಭಿವೃದ್ಧಿಪ್ರಾಧಿಕಾರದ ಸಭೆಯಲ್ಲಿ ಕೆಂಪೇಗೌಡರ ಆಳ್ವಿಕೆಯಲ್ಲಿ ಬೆಂಗಳೂರು ನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕ ಬಳ್ಳಾಪುರ ಜಿಲ್ಲೆಗಳಲ್ಲಿರುವ ಪಾರಂಪರಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಚರ್ಚೆಯಾಗಿದೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿ: ಮಾಗಡಿ ತಾಲೂಕಿನ ಕೆಂಪಾಪುರದಲ್ಲಿರುವ ಹಿರಿಯ ಕೆಂಪೇಗೌಡರು ಐಕ್ಯ ರಾದ ಸ್ಥಳವನ್ನು ರಕ್ಷಿಸಿ, ಪ್ರವಾಸಿ ತಾಣವಾಗಿ ಅಭಿ ವೃದ್ಧಿಪಡಿಸುವುದರ ಜೊತೆಗೆ ಸರ್ಕಾರ ಕೆಂಪೇಗೌಡರ ಆಳ್ವಿಕೆಯಲ್ಲಿದ್ದ ಪಾರಂಪರಿಕ ಸ್ಥಳಗಳನ್ನು ಅಭಿವೃದ್ಧಿಪಡಿ ಸಲು ನಿರ್ಧರಿಸಿದೆ. ನಾಡಪ್ರಭು ಕೆಂಪೇಗೌಡ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಈ ಯೋಜನೆ ಕೈಗೊಳ್ಳಲು ಸರ್ಕಾರ ನಿರ್ಧರಿಸಿದ್ದು, ರೂಪು ರೇಷೆ ಸಿದ್ಧಪಡಿಸಿಕೊಂಡಿದೆ. ಮಾಗಡಿ ಸರ್ಕ್ನೂಟ್‌, ಬೆಂಗಳೂರು ನಗರ ಸರ್ಕ್ನೂಟ್‌ ಮತ್ತು ನಂದಿ ಸರ್ಕ್ನೂಟ್‌ ಎಂದು ಮೂರು ಸರ್ಕ್ನೂಟ್‌ ಗಳನ್ನು ಗುರುತಿಸಿರುವ ಸರ್ಕಾರ, ಈ ಸರ್ಕ್ನೂಟ್‌ಗಳ ವ್ಯಾಪ್ತಿಗೆ ಬರುವ ಪಾರಂಪರಿಕ ಸ್ಥಳಗಳನ್ನು ಅಭಿವೃದ್ಧಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

Advertisement

132 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ: ಜಿಲ್ಲೆಯ ಮಾಗಡಿ ಸರ್ಕ್ನೂಟ್‌ನಲ್ಲಿ ಕೆಂಪಾಪುರದಲ್ಲಿರುವ ಹಿರಿಯ ಕೆಂಪೇಗೌಡರ ವೀರ ಸಮಾಧಿ ಸ್ಥಳದ ಅಭಿ ವೃದ್ಧಿ ಜೊತೆಗೆ ದೊಡ್ಡಮುದಗೆರೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಕೆಂಪಸಾಗರ ಕೆರೆ, ಮಾಗಡಿ ಕೋಟೆ, ತಿರುಮಲೆ ರಂಗನಾಥಸ್ವಾಮಿ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ಮತ್ತು ಕಲ್ಯಾಣಿ, ಸಾವನ ದುರ್ಗ ಕೋಟಿ ಮತ್ತು ಶಿವ ದೇವಾಲಯ, ಮಾಗಡಿ ಮತ್ತು ಕುಣಿಗಲ್‌ ತಾಲೂಕುಗಳ ಗಡಿಯಲ್ಲಿರುವ ಕುಣಿಗಲ್‌ ದೊಡ್ಡ ಕೆರೆ, ಶಿವ ಬಸವ ದೇವಸ್ಥಾನ, ಹುತ್ತಿ ದುರ್ಗ ಕೋಟಿ ಮತ್ತು ದೇವಸ್ಥಾನಗಳನ್ನು ಸುಮಾರು 132 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿ ವೃದ್ಧಿಪಡಿಸಿಲು ಸರ್ಕಾರ ಉದ್ದೇಶಿಸಿದೆ. ಹಿರಿಯ ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿಗೆ ಬಿಬಿಎಂಪಿ 11ಕೋಟಿ ರೂ. ಮೀಸಲಿಟ್ಟಿದೆ. ಕೆಂಪಾಪುರ ಗ್ರಾಮ ಸ್ಥಳಾಂತರ: 2015ರಲ್ಲಿ ಹಿರಿಯ ಕೆಂಪೇಗೌಡರ ಸಮಾಧಿ ಸ್ಥಳವನ್ನು ಕೆಂಪಾಪುರದಲ್ಲಿ ಪತ್ತೆಯಾದ ನಂತರ ಸರ್ಕಾರ ಸದರಿ ಸ್ಥಳವನ್ನು ಅಭಿ ವೃದ್ಧಿಗೆ ನಿರ್ಧರಿಸಿತ್ತು. ಸಮಾಧಿ ಸ್ಥಳವನ್ನು ಪಾರಂಪ ರಿಕ ಸ್ಥಳವನ್ನಾಗಿ ಮತ್ತು ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶ ಸರ್ಕಾರ ಹೊಂದಿದ್ದು, ಕೆಂಪಾ ಪುರ ಗ್ರಾಮವನ್ನೇ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಸಿ ಸಿದೆ. 5 ಕಿ.ಮಿ. ದೂರದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಕೆಂಪಾಪುರ ಗ್ರಾಮಸ್ಥರಿಗೆ ಮನೆ ಕಟ್ಟಿಕೊ ಳ್ಳಲು ನಿವೇಶನಗಳನ್ನು ಕೊಡಲಾಗುವುದು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ನಂದಿ, ಬೆಂಗಳೂರು ನಗರ ಸರ್ಕ್ನೂಟ್‌ನ ಸ್ಥಳಗಳು: ನಂದಿ ಸರ್ಕ್ನೂಟ್‌ನಲ್ಲಿ ಕೆಂದಾವರ ಕೆರೆ, ನಂದಿ ಬೆಟ್ಟ, ನಂದಿ ಬೆಟ್ಟದ ಗೋಪುರ, ದೇವನಹಳ್ಳಿ ಫಾರೆಸ್ಟ್‌, ದೇವ ನಹಳ್ಳಿ ಕೋಟೆ, ಶ್ರೀಚನ್ನಕೇಶವ ದೇವಸ್ಥಾನವನ್ನು (ಅವತಿ) ಅಭಿವೃದ್ಧಿಗೆ ಸರ್ಕಾರ ತೀರ್ಮಾನಿಸಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತ ರದ ಕೆಂಪೇಗೌಡರ ಪ್ರತಿಮೆ ಮತ್ತು ವಿಮಾನ ನಿಲ್ದಾ ಣಕ್ಕೆ ಸೇರಿದ23 ಎಕರೆ ಪ್ರದೇಶದಲ್ಲಿ ಸೆಂಟ್ರಲ್‌ ಥೀಮ್‌ ಪಾರ್ಕನ್ನು ನಿರ್ಮಿಸಲು ಸರ್ಕಾರ ಅಂದಾಜು 64 ಕೋಟಿ ರೂ. ವೆಚ್ಚ ಮಾಡಲಿದೆ. ಬೆಂಗಳೂರು ನಗರ ಸರ್ಕ್ನೂಟ್‌ನಲ್ಲಿಕೆಂಪೇಗೌಡರ ವೀಕ್ಷಣಾ ಗೋಪುರ (ಮೇಖೀ ವೃತ್ತ), ಅಣ್ಣಮ್ಮ ದೇವ ಸ್ಥಾನ, ಸೋಮೇಶ್ವರ ದೇವಾಸ್ಥಾನ, ಹಲಸೂರು ಗೋಪುರ, ಬೆಂಗಳೂರು ಕೋಟೆ, ಕೋಟೆ ವೆಂಕಟರ ಮಣ ದೇವಸ್ಥಾನ, ಶ್ರೀ ಧರ್ಮರಾಯ ಸ್ವಾಮಿ ದೇವ ಸ್ಥಾನ, ಕೆಂಪೇಗೌಡರ ಪ್ರತಿಮೆ ವೃತ್ತ, ಕೆಂಪಾಂಬುದಿ ಕೆರೆ, ಶ್ರೀಗವಿ ಗಂಗಾಧರೇಶ್ವರ ದೇವಸ್ಥಾನ, ಶ್ರೀಬಂಡಿ ಮಹಾ ಕಾಳಿ ದೇವಸ್ಥಾನ ‌ ವೀರಭದ್ರಸ್ವಾಮಿ ದೇವಸ್ಥಾನ.

Advertisement

Udayavani is now on Telegram. Click here to join our channel and stay updated with the latest news.

Next