Advertisement

ಸಮ್ಮಿಶ್ರ ಸರ್ಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷಿ

09:41 AM Feb 15, 2019 | |

ತೀರ್ಥಹಳ್ಳಿ: ವಿಧಾನಸಭಾ ಕಲಾಪದಲ್ಲಿ ಪಾಲ್ಗೊಂಡಿದ್ದ ವೇಳೆಯಲ್ಲಿ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್‌ ಗೌಡ ಅವರ ಸ್ವಗೃಹದ ಮೇಲೆ ಜೆಡಿಎಸ್‌ ಕಾರ್ಯಕರ್ತರು ದಾಂಧಲೆ ಮಾಡಿ ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ ನಗರದಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸದಸ್ಯ ಕೆ. ಶ್ರೀನಿವಾಸ್‌, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅರಾಜಕತೆ ಸೃಷ್ಟಿಸುತ್ತಿದೆ. ಶಾಸಕರ ಮನೆ ಮೇಲೆ ದೌರ್ಜನ್ಯ ನಡೆಸುವ ಜೆಡಿಎಸ್‌ ಕಾರ್ಯಕರ್ತರ ಗೂಂಡಾಗಿರಿಯನ್ನು ಬಿಜೆಪಿ ಖಂಡಿಸುತ್ತದೆ. ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗಳು ಹಾಗೂ ಮಾಜಿ ಪ್ರಧಾನಿ ದೇವೇಗೌಡರು ದಾಂಧಲೆಗೆ ಕುಮ್ಮಕ್ಕು ನೀಡಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಾವನ್ನು ಹರಣಗೊಳಿಸುತ್ತಿರುವುದಕ್ಕೆ ಈ ಘಟನೆ
ಸಾಕ್ಷಿಯಾಗಿದೆ ಎಂದರು. 

ಪಪಂ ಸದಸ್ಯ ಸಂದೇಶ್‌ ಜವಳಿ ಮಾತನಾಡಿ, ರಾಜ್ಯದಲ್ಲಿನ ಜೆಡಿಎಸ್‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಆಡಳಿತವನ್ನೇ ಮರೆತು ವಾಮ ಮಾರ್ಗದಲ್ಲಿ ರಾಜಕಾರಣ ನಡೆಸುತ್ತಿದೆ.   ರಾಜ್ಯದ ಜನಸಾಮಾನ್ಯರ ಸಮಸ್ಯೆಯನ್ನು ಸರ್ಕಾರ ಮರೆತಂತಿದೆ ಎಂದರು. ಉಪತಹಶೀಲ್ದಾರ್‌ ರಾಕೇಶ್‌
ಮೂಲಕ ಪ್ರತಿಭಟನಾಕಾರರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ತಾಪಂ ಸದಸ್ಯ ಸಾಲೇಕೊಪ್ಪ ರಾಮಚಂದ್ರ, ಸೋಮಶೇಖರ್‌, ಟಿ. ಮಂಜುನಾಥ್‌, ಮುಖಂಡರಾದ ವೆಂಕಟೇಶ್‌ ಪಟವರ್ಧನ್‌, ಸಂದೀಪ್‌, ರಕ್ಷಿತ್‌ ಮೇಗರವಳ್ಳಿ, ಸಂತೋಶ್‌ ಕುಮಾರ್‌ ಶೆಟ್ಟಿ ಇತರರು ಪ್ರತಿಭಟನೆಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next