Advertisement

ಜಾಗೃತಿಗಾಗಿಕವನ ರಚಿಸಿದಕಾನ್‌ಸ್ಟೆಬಲ್‌

11:28 AM Sep 06, 2018 | Team Udayavani |

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆ ಹಾಗೂ ರಸ್ತೆ ಅಪಘಾತಗಳ ಕುರಿತು ಸಂಚಾರ ಪೊಲೀಸರು ಹಮ್ಮಿಕೊಳ್ಳುತ್ತಿರುವ ನಾನಾ ರೀತಿಯ ಜಾಗೃತಿ ಕಾರ್ಯಕ್ರಮಗಳಿಗೆ ಪೊಲೀಸ್‌ ಕಾನ್‌ಸ್ಟೇಬಲ್‌ ಒಬ್ಬರು “ಜಾಗೃತಿ ಕವನ’ ರಚಿಸುವ ಮೂಲಕ ಸಾಥ್‌ ನೀಡಿದ್ದಾರೆ.

Advertisement

“ಚಲಿಸುತ್ತಿವೆ ವಾಹನಗಳು ಶರವೇಗದಲ್ಲಿ ನಗರದ ರಸ್ತೆಯೊಂದರ ಜಂಕ್ಷನ್‌ನಲ್ಲಿ…’ ಎಂದು ಆರಂಭವಾಗುವ ಈ ಕವನ, ವೇಗದ ಸಂಚಾರ, ಆತುರದ ವಾಹನ ಚಾಲನೆ, ಗಾಯಾಳುಗೆ ಸಹಾಯ ಮಾಡದಿರುವುದು, ಮೊಬೈಲ್‌ನಲ್ಲಿ
ವಿಡಿಯೋ ಮಾಡಿಕೊಳ್ಳುವುದು ಸೇರಿ ಮತ್ತಿತರ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ಹೈಗ್ರೌಂಡ್ಸ್‌ ಸಂಚಾರ ಠಾಣೆ ಕಾನ್‌ ಸ್ಟೆಬಲ್‌ ಜಗದೀಶ್‌ ಮಾದರಹಳ್ಳಿ ಈ ಕವನ ರಚಿಸಿದ್ದು, ಇದೀಗ ಹಿರಿಯ
ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 2009ನೇ ಬ್ಯಾಚ್‌ನ ಜಗದೀಶ್‌ ಮಾದರಹಳ್ಳಿ ನಗರದ ವಿವಿಧ ಸಂಚಾರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಬಿಡುವಿನ ಸಮಯದಲ್ಲಿ ಕವನ ಬರೆಯುವ ಹವ್ಯಾಸ ಹೊಂದಿದ್ದಾರೆ. ಈ ಹಿಂದೆ ತಾಯಿ, ತಂದೆ, ಪರಿಸರ, ರಾಜಕೀಯ ಸ್ಥಿತಿಗತಿಗಳ ಬಗ್ಗೆ ಕವನ ರಚಿಸಿರುವ ಜಗದೀಶ್‌, ನಗರದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಅಪಘಾತಗಳು ಮತ್ತು ಸಂಚಾರ ನಿಯಮಗಳ ಉಲ್ಲಂಘನೆ ಬಗ್ಗೆ ಕವನ ರಚಿಸಿ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next