Advertisement

ವಿಶ್ವಕರ್ಮ ಸಮಾಜಕ್ಕೆ ಒಳ ಮೀಸಲಾತಿ ಕಲ್ಪಿಸಿ: ಶ್ರೀ ಶಿವ ಸುಜ್ಞಾನ ತೀರ್ಥ ಸ್ವಾಮೀಜಿ

08:43 PM Feb 25, 2023 | Team Udayavani |

ಪಿರಿಯಾಪಟ್ಟಣ : ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ವರ್ಗೀಕೃತ ಒಳ ಮೀಸಲಾತಿಯನ್ನು ಕಲ್ಪಿಸಿದಾಗ ಮಾತ್ರ ಅವುಗಳು ಮುಖ್ಯವಾಹಿನಿಗೆ ಬರುಲು ಸಾಧ್ಯ ಎಂದು ಅರೆಮಾದಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಜಗದ್ಗುರು ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿ ತಿಳಿಸಿದರು.

Advertisement

ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಶನಿವಾರ ನಡೆದ ವಿಶ್ವಕರ್ಮ ಸೇವಾ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿ,ರಾಜ್ಯದಲ್ಲಿ ವಿಶ್ವಕರ್ಮ ಸೇರಿದಂತೆ ಅನೇಕ ಸಣ್ಣಪುಟ್ಟು ಸಮುದಾಯಗಳು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಕಾರಣ ಅವುಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ, ಬಲಾಢ್ಯ ಮೇಲ್ವರ್ಗದ ಸಮಾಜಗಳು ಯಾವುದೇ ಹೋರಾಟ ಮಾಡದೇ ತಮ್ಮ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿವೆ ಆದರೆ ಹಿಂದುಳಿದ ಸಮುದಾಯಗಳು ತಮ್ಮ ಹಕ್ಕುಗಳನ್ನು ಪಡೆಯಲು ಸಂವಿಧಾನ ಬದ್ದವಾಗಿ ಎಷ್ಟೇ ಪ್ರಬಲವಾಗಿ ಹೋರಾಟ ನಡೆದಿದರು ಆಳುವ ಸರ್ಕಾರಗಳು ವ್ಯವಸ್ಥಿತವಾಗಿ ಅವುಗಳ ಹೋರಾಟವನ್ನು ವ್ಯವಸ್ಥಿತವಾಗಿ ಹತ್ತಿಕ್ಕುತ್ತಾ ಬಂದಿವೆ, ಆದ್ದರಿಂದ ಸಣ್ಣಪುಟ್ಟ ಸಮುದಾಯಗಳು ಜಾಗೃತವಾಗುವ ಅವಶ್ಯಕತೆ ಇದೆ ಎಂದರು.

ಒಳ ಮೀಸಲಾತಿಯ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಈ ವಿಚಾರವನ್ನು ಹಿಂದೆಯೇ ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದರು ಆದರೂ ಕಾರ್ಯರೂಪಕ್ಕೆ ಬರೆದಿರುವುದು ಬೇಸರದ ಸಂಗತಿಯಾಗಿದೆ. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ್ದು ಎಲ್ಲಾ ಸಮುದಾಯವು ಸಾಮರಸ್ಯದಿಂದ ಜೀವನವನ್ನು ನಡೆಸಬೇಕು. ವಿಶ್ವಕರ್ಮ ಸಮುದಾಯವು ತಮ್ಮ ಶಿಲ್ಪಕಲಾ ವೃತ್ತಿಪರತೆಯಿಂದ ಕಾಶ್ಮೀರ ದಿಂದು ಕನ್ಯಾಕುಮಾರಿವರೆಗೂ ತಮ್ಮ ಚಾಪನ್ನು ಮೂಡಿಸಿ ಎಲ್ಲಾ ಧರ್ಮ-ಜಾತಿಗಳ ನಡುವೆ ಸಹಬಾಳ್ವೆ ನಡೆಸಿಕೊಂಡು ಬರುತ್ತಿದ್ದಾರೆ. ಸಮಾಜದವರು ಮಕ್ಕಳಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಮೂಡಿಸಲು ಅವರನ್ನು ಮಠಕ್ಕೆ ಕರೆತರಬೇಕು ಆಗ ಮಾತ್ರ ಅವರು ಸುಸಂಸ್ಕೃತ ವ್ಯಕ್ತಿಗಳಾಗಲು ಸಾಧ್ಯ ಎಂದರು.

ಶಾಸಕ ಕೆ.ಮಹದೇವ ಮಾತನಾಡಿ ಹಿಂದಿಗಿಂತಲೂ ಈಗ ಪಿಡುಗುಗಳು ಹೆಚ್ಚಾಗಿದೆ. ಇದರಿಂದಾಗಿ ಸಣ್ಣ ಪುಟ್ಟ ಸಮುದಾಯಗಳು ಶೋಷಣೆಗೆ ಗುರಿಯಾಗುತ್ತಿವೆ. ಈ ಸಮುದಾಯವು ಅಸಂಘಟಿತ ಸಮುದಾಯವಾಗಿದ್ದು ಸಂಘಟಿತ ಸಮುದಾಯವಾಗಿ ತಮಗೆ ದೊರಕಬೇಕಾದ ಹಕ್ಕು ಮತ್ತು ಸವಲತ್ತುಗಳನ್ನು ಪಡೆಯಬೇಕು. ಇತ್ತೀಚಿನ ದಿನಗಳಲ್ಲಿ ಮೂಲ ವೃತ್ತಿ ನಡೆಸಲು ಕಷ್ಟವಾಗುತ್ತಿದ್ದು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಸುಶಿಕ್ಷಿತ ಸಮಾಜವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ಮಹೇಶ್ ಆಚಾರ್ಯ, ಉಪಾಧ್ಯಕ್ಷ ತಿರು ನೀಲಕಂಠ, ಕಾರ್ಯದರ್ಶಿ ಈರಣ್ಣಯ್ಯ ಈ ಸಂದರ್ಭದಲ್ಲಿ ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷ ರವಿಕುಮಾರ್, ಮಾಜಿ ಅಧ್ಯಕ್ಷ ಅಬ್ಬೂರು ಚಂದ್ರು, ಗೌರವಾಧ್ಯಕ್ಷ ಕಾಳಪ್ಪಚಾರ, ಪ್ರಧಾನ ಕಾರ್ಯದರ್ಶಿ ರಮೇಶ್, ಸಂಘದ ಪದಾಧಿಕಾರಿಗಳಾದ ಜಗದೀಶ್, ಸುಬ್ರಮಣ್ಯ, ರವಿ, ಶಂಕರ್, ಚಂದ್ರಚಾರ್, ಶಶಿಧರ್, ಗುರುರಾಜ್, ಸುರೇಶ್, ಧನಂಜಯ್, ಗಣೇಶ್, ತೇಜಶ್, ಚೇತನ್, ಯೋಗೀಶ್, ರವಿಕುಮಾರ್, ಮೋಹನ್, ನವೀನ್, ಯಜಮಾನರಾದ ತಮ್ಮಣ್ಣೇಗೌಡ, ಬಸವರಾಜು, ಮುಖಂಡರಾದ ಹೆಮ್ಮಿಗೆ ಮಹದೇವ, ಅಣ್ಣಯ್ಯ ಶೆಟ್ಟಿ, ರಘುನಾಥ್ ಸೇರಿದಂತೆ ಮತಿತ್ತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next