Advertisement

ನಕಲಿ ದಾಖಲೆ ಸೃಷ್ಟಿಸಿ 105 ಎಕರೆ ಸರ್ಕಾರಿ ಜಾಗ ಕಬಳಿಕೆ

01:09 PM Sep 01, 2019 | Suhan S |

ಮುಳಬಾಗಿಲು: ನ‌ಕಲಿ ದಾಖಲೆ ಸೃಷ್ಟಿಸಿ 105 ಎಕರೆ ಸರ್ಕಾರಿ ಜಮೀನು ಕಬಳಿಕೆ ಮಾಡಿರುವ ಆರೋಪ ಮೇಲೆ ಇಬ್ಬರು ಸರ್ಕಾರಿ ಅಧಿಕಾರಿಗಳ ಸೇರಿ 31 ಮಂದಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ತಹಶೀಲ್ದಾರ್‌ ಪ್ರವೀಣ್‌ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಮಂಜೂರಾದ ಜಮೀನು ದಾಖಲೆ ಗಳನ್ನು ಕಾನೂನು ಬಾಹಿರವಾಗಿ ತಿದ್ದಿ, ನಕಲಿ ದಾಖಲೆ ಸೃಷ್ಟಿಸಿ, ಅವುಗಳನ್ನು ಕಚೇರಿಯ ರೆಕಾರ್ಡ್‌ ರೂಂ ನಲ್ಲಿ ಸೇರಿಸಲಾಗಿದೆ. ಅಲ್ಲದೇ, ದರಖಾಸ್ತು ವಹಿಯನ್ನು ತಿದ್ದಿರುವುದು ಕಂಡು ಬಂದಿದೆ.

ತಾಲೂಕು ಕಚೇರಿಯ ರೆಕಾರ್ಡ್‌ ರೂಂ ನಲ್ಲಿ 2014ರ ನವಂಬರ್‌ 23 ರಂದು ಕ್ಯಾಟಲಾಗಿಂಗ್‌ ಮತ್ತು ಇಂಡೆಕ್ಸಿಂಗ್‌ ಮಾಡಿದ ನಂತರ ಪ್ರಥಮ ದರ್ಜೆ ಸಹಾಯಕ ಜಯರಾಮ್‌ ಮತ್ತು ವಿಷಯ ನಿರ್ವಾಹಕರಾಗಿದ್ದ ದ್ವಿತೀಯ ದರ್ಜೆ ಸಹಾಯಕ ವೆಂಕಟೇಶಮೂರ್ತಿ , ಕೆಲವು ಸರ್ಕಾರಿ ಜಮೀನಿಗೆ ಮೂಲ ಮಂಜೂರಾತಿ ಕಡತಗಳು ಮತ್ತು ಮಂಜೂರಿ ವಿತರಣಾ ವಹಿಗಳ ದಾಖಲೆಗಳನ್ನು ತಿದ್ದಿ ನಕಲಿ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿದೆ. ಅದರಿಂದ ಕಚೇರಿಯ ದೈನಂದಿನ ಕಾರ್ಯ ಕಲಾಪಗಳಿಗೆ ಅಡಚಣೆಯಾಗಿದೆ.

ಅಲ್ಲದೇ, 105 ಎಕರೆ ಸರ್ಕಾರಿ ಜಮೀನು ಕಬಳಿಕೆಗೆ ಸಹಕಾರ ನೀಡಿರುವ ವೆಂಕಟೇಶಮೂರ್ತಿ ಅಭಿಲೇಖಾಲಯದ ಸಂರಕ್ಷಣಾ ಕಾರ್ಯನಿರ್ವಹಿಸದೇ ಸರ್ಕಾರಕ್ಕೆ ವಂಚನೆ ಮಾಡಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಎಫ್ಡಿಎ ಮುಳಬಾಗಿಲು ಜಯರಾಮ್‌, ಎಸ್‌ಡಿಎ ಚಿಂತಾಮಣಿ ವೆಂಕಟೇಶಮೂರ್ತಿ ಅವರ ವಿರುದ್ಧ ಕ್ರಮಕ್ಕೆ ತಹಶೀಲ್ದಾರ್‌ ಆಗ್ರಹಿಸಿದ್ದಾರೆ.

ಇದೇವೇಳೆ ಕಮದಟ್ಟಿ ಕಾಮನೂರು ಗ್ರಾಮದ ಜಮೀನಿಗೆ ಸಂಬಂಧಿಸಿದಂತೆ ಮುಳಬಾಗಿಲು ಶ್ರೀರಾಮನಗರದ ಸಾಮಕ್ಕ ಮತ್ತು ವೈ.ಚಿನ್ನನಾಗಿರೆಡ್ಡಿ, ಚಿನ್ನಕ್ಕ, ವೈ.ಸುಬ್ಬಮ್ಮ, ಪುಟ್ಟೇನಹಳ್ಳಿ ರಾಮಕೃಷ್ಣಪ್ಪ,

Advertisement

ಟಿ.ನಡಂಪಲ್ಲಿ ಜಮೀನಿಗೆ ಸಂಬಂಧಿಸಿದಂತೆ ಮುಳಬಾಗಿಲು ಶ್ರೀರಾಮನಗರದ ರಾಜಮ್ಮ, ಸಾಮಕ್ಕ, ಎಚ್.ಸುಬ್ರಮಣಿ, ವೆಂಕಟರತ್ನಮ್ಮ, ಗೊಟ್ಟಿಕುಂಟೆ ಜಿ.ವೆಂಕಟೇಶಪ್ಪ, ಅಮರಮ್ಮ, ರತ್ನಮ್ಮ, ಸೀಗೇನಹಳ್ಳಿ ಚಿನ್ನಕ್ಕ, ನಾರಾಯಣಪ್ಪ.

ಬಾಳಸಂದ್ರ ಜಮೀನಿಗೆ ಸಂಬಂಧಿಸಿದಂತೆ ಮುಳಬಾಗಿಲು ಶ್ರೀರಾಮನಗರದ ಹನುಮಂತಪ್ಪ ಬಿನ್‌ ಮುನಿಯಪ್ಪ, ತಿಮ್ಮರಾಯಪ್ಪ, ಚಿನ್ನಕ್ಕ, ರತ್ನಮ್ಮ, ಮಾಲೂರು ತಾಲೂಕು ಮೇಡಿಹಟ್ಟಿ ಗ್ರಾಮದ ರಾಜಮ್ಮ ಮತ್ತು ವೆಂಕಟಲಕ್ಷ್ಮಮ್ಮ, ಬೈರಕೂರು ಗ್ರಾಮದ ವೆಂಕಟಮ್ಮ, ಕೋರ್ಲಕುಂಟೆ ಗ್ರಾಮದ ಶ್ಯಾಮಲಮ್ಮ ಮತ್ತು ನಾರಾಯಣಪ್ಪ, ಮುಳಬಾಗಿಲು ಶ್ರೀರಾಮನಗರದ ಹನುಮಂತಪ್ಪ ಬಿನ್‌ ಮುನೆಪ್ಪ.

ಹೊಸಹಳ್ಳಿ ಗ್ರಾಮದ ಜಮೀನಿಗೆ ಸಂಬಂಧಿಸಿದಂತೆ ಶ್ರೀರಾಮನಗರದ ಸಾಮಕ್ಕ, ತಿಮ್ಮರಾಯಪ್ಪ, ಎಚ್.ಗೊಲ್ಲಹಳ್ಳಿ ಗ್ರಾಮದ ಜಮೀನಿಗೆ ಸಂಬಂಧಿಸಿದಂತೆ ಎಚ್.ಗೊಲ್ಲಹಳ್ಳಿ ಮುನಿವೆಂಕಟಮ್ಮ ಒಳಗೊಂಡಂತೆ 29 ಜನರು 105 ಎಕರೆ ಸರ್ಕಾರಿ ಜಮೀನು ಕಬಳಿಸಿದ್ದಾರೆ. ಅವರಿಗೆ ಸಹಕಾರ ನೀಡಿದ ಇಬ್ಬರು ಸರ್ಕಾರಿ ನೌಕರರು ಸೇರಿ 31 ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅದರಂತೆ ಮುಳಬಾಗಿಲು ನಗರ ಠಾಣೆಯ ಪಿಎಸ್‌ಐ ಶ್ರೀನಿವಾಸ್‌ 26 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next