ಚಿಕ್ಕಬಳ್ಳಾಪುರ: ಸರ್ಕಾರ ಜಾರಿಗೆ ತಂದಿರುವ ವೈದ್ಯರನ್ನು ನೇರವಾಗಿ ಸಂಪರ್ಕಿಸಬಹುದಾದ ಇ ಸಂಜೀವಿನಿ ಒಪಿಡಿ ಆರೋಗ್ಯಆ್ಯಪ್ ಬಳಕೆಹಾಗೂ ಅದರಿಂದಾಗುವ ಉಪಯೋಗದ ಬಗ್ಗೆ ನಾಗರಿಕರಲ್ಲಿ ಹೆಚ್ಚಿನಅರಿವು ಮೂಡಿಸಿ, ಮನೆ ಮನೆಗಳಿಗೆ ಭೇಟಿ ನೀಡಿ ಈ ಆ್ಯಪ್ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಲು ಜಾಗƒತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಆರ್.ಲತಾ, ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿಹಮ್ಮಿಕೊಳ್ಳಲಾಗಿದ್ದಆರೋಗ್ಯ ಇಲಾಖೆಯ ಮಾಸಿಕ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಆರೋಗ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೋವಿಡ್-19 ನಿಯಂತ್ರಣಕ್ಕೆ ತಮ್ಮದೇ ಆದ ಸಹಕಾರವನ್ನುಜಿಲ್ಲಾಡಳಿತಕ್ಕೆನೀಡುವ ಮೂಲಕ ಸತತವಾಗಿ ಕೋವಿಡ್ -19 ನಿಯಂತ್ರಣ ಕಾರ್ಯದಲ್ಲಿ ನಿರತರಾಗಿದ್ದೀರಿ.
ನಿರ್ಲಕ್ಷಿಸಬೇಡಿ: ಚಿಕ್ಕಬಳ್ಳಾಪುರದಲ್ಲಿ ಕೋವಿಡ್-19 ಪ್ರಕರಣಗಳು ಕ್ಷೀಣಿಸುತ್ತಿರುವುದರಲ್ಲಿ ನಿಮ್ಮೆಲ್ಲರ ಪಾತ್ರ ಅಪಾರ.ಇದೇ ಮಾದರಿಯಲ್ಲಿ ಎಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೋವಿಡ್ -19ನ ಜೊತೆಗೆ ಇತರೆ ರೋಗಗಳಿಗೂ ಆದ್ಯತೆ ಮೇರೆಗೆ ಚಿಕಿತ್ಸೆ ನೀಡಬೇಕು. ಯಾವುದೇ ರೋಗಿಯನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು.
ಜಾಗೃತಿ ಮೂಡಿಸಿ: ಸಾಮಾನ್ಯ ರೋಗಗಳಾದ ನೆಗಡಿ, ಕೆಮ್ಮು, ಜ್ವರ ಮತ್ತಿತರ ರೋಗ ಲಕ್ಷಣಗಳಿದ್ದು, ಆಸ್ಪತ್ರೆಗೆ ತೆರಳಲು ಸಾಧ್ಯವಾಗದಿದ ªರೆ,ಇ ಸಂಜೀವಿನಿ ಒಪಿಡಿ ಆರೋಗ್ಯ ಆ್ಯಪ್ ಮುಖಾಂತರ ವೈದ್ಯರ ಸಲಹೆ ಪಡೆಯಬಹುದಾಗಿದ್ದು, ಹೆಚ್ಚು ಅರಿವು ಮೂಡಿಸಬೇಕಿದೆ. ಇನ್ನುಅನೇಕ ನಾಗರಿಕರಿಗೆ ಈ ಸೌಲಭ್ಯದ ಬಗ್ಗೆ ಮಾಹಿತಿ ಇರುವುದಿಲ್ಲ. ಹಳ್ಳಿ ಹಳ್ಳಿಗೆ ತೆರಳಿಪ್ರತಿಯೊಂದು ಮನೆಯಲ್ಲಿರುವ ಸದಸ್ಯರುಇ ಸಂಜೀವಿನಿ ಒಪಿಡಿ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಸದುಪಯೊಗ ಪಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು. ಆರೋಗ್ಯ ಕಾರ್ಡ್ ವಿತರಿಸಿ: ಹೆರಿಗೆ ಸಂದರ್ಭದಲ್ಲಿ ತಾಯಿ ಶಿಶು ಮರಣ ಸಂಭವಿಸದಂತೆ ಹೆಚ್ಚು ಕಾಳಜಿ ವಹಿಸಿ. ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ರಕ್ಷಣೆ ಮಾಡುವುದು ವೈದ್ಯರ ಕರ್ತವ್ಯ. ಆರೋಗ್ಯ ಇಲಾಖೆಗೆ ಸರ್ಕಾರ ನೀಡಿರುವಂತಹ ಎಲ್ಲಾ ಗುರಿಗಳನ್ನು ಪೂರ್ಣಗೊಳಿಸಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಕಾರ್ಡ್ ವಿತರಿಸಿ ಎಂದು ತಿಳಿಸಿದರು.
10ರಿಂದ 5 ಗಂಟೆ ವರೆಗೆ ಸೇವೆ: ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಪ್ಲೇ-ಸ್ಟೋರ್‌ನಿಂದ ಇ ಸಂಜೀವಿನಿ ಆ್ಯಪ್ ಡೌನ್‌ಲೋಡ್ ಮಾಡಿ ಕೊಳ್ಳಬೇಕು. ಇಲ್ಲದಿದ್ದರೆ ಗೂಗಲ್‌ನಲ್ಲಿ ಇ-ಸಂಜೀವಿನಿ ಒಪಿಡಿ ಎಂದು ಟೈಪ್ ಮಾಡಿದರೆ ತೆಗೆದುಕೊಳ್ಳುವ ಪುಟದಲ್ಲಿ ನೋಂದಾಯಿಸಬೇಕು. ವೆಬ್‌ವಿಡಿಯೋ ಮೂಲಕ ವೈದ್ಯರು ಸಂಪರ್ಕಕ್ಕೆಬರಲಿದ್ದು,ಅವರಿಂದಚಿಕಿತ್ಸೆ ಪಡೆಯಬಹುದು.ಈಸೇವೆಯೂ ಬೆಳಗ್ಗೆ 10 ರಿಂದ ಸಾಯಂಕಾಲ 5 ಗಂಟೆ ವರೆಗೆ ಸೇವೆ ಲಭ್ಯವಿರುತ್ತದೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ರಮೇಶ್, ಆರ್‌ಎಂಒ ಯಲ್ಲಾ ರಮೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ರೋಗಿಗಳಿಗೆ ಯೋಗಭ್ಯಾಸ : ಜಿಲ್ಲಾ ಆರೋಗ್ಯಾಧಿಕಾರಿಗಳಾದ ಇಂದಿರಾ ಕಬಾಡೆ ಮಾತನಾಡಿ, ಈಗಾಗಲೇ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ ಉತ್ತಮ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಲಾಗಿದೆ. ಎಲ್ಲಾ ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ ಯೋಗ ಶಿಬಿರ ನಡೆಸಲು ಆರೋಗ್ಯಇಲಾಖೆ ಮುಂದಾಗಿದೆ. ಆಶಾಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಕೆಲ ರೋಗಿಗಳಿಗೆ ಯೋಗಭ್ಯಾಸ ಮಾಡಿಸಲಾಗುವುದು. ಈಗಾಗಲೇ ಸರ್ಕಾರ ಜಾರಿಗೆ ತಂದಿರುವ ವಿವಿಧ ಆರೋಗ್ಯಕಾರ್ಯಕ್ರಮಗಳಾದ ಗರ್ಭಿಣಿಯರ ನೋಂದಣಿ, ಮಕಳಿಗೆ R ಚುಚ್ಚುಮದ್ದುಕಾರ್ಯಕ್ರಮ, ಮಲೇರಿಯಾ, ಲೆಪ್ರಿಸಿ, ಟಿಬಿ,ಕೋವಿಡ್-19, ಆರೋಗ್ಯಕಾರ್ಡ್ ವಿತರಣಾಕಾರ್ಯಕ್ರಮದಲ್ಲಿ ಪ್ರಗತಿ ಸಾಧಿಸಲುಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.