Advertisement

ಕೊರೊನಾ ಬೂಸ್ಟರ್‌ ಡೋಸ್‌ ಕುರಿತು ಜನಜಾಗೃತಿ ಮೂಡಿಸಿ

10:19 PM Aug 29, 2022 | Team Udayavani |

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಎಲ್ಲಾ ವಯಸ್ಕರು ಕೊರೊನಾ ಬೂಸ್ಟರ್‌ ಡೋಸ್‌ನ ಉಚಿತ ಲಸಿಕೆ ಪಡೆಯುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವಂತೆ ಎಲ್ಲಾ ಖಾಸಗಿ ಎಫ್ಎಂ ರೇಡಿಯೊ ಕೇಂದ್ರಗಳಿಗೆ ಸರ್ಕಾರ ಸೂಚಿಸಿದೆ.

Advertisement

ಅಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜುಲೈ 15ರಿಂದ ಸೆಪ್ಟೆಂಬರ್‌ 30ರವರೆಗೆ 75 ದಿನಗಳ ವಿಶೇಷ ಅಭಿಯಾನವನ್ನು ಕೇಂದ್ರ ಹಮ್ಮಿಕೊಂಡಿದ್ದು, ಈ ವೇಳೆ ಸರ್ಕಾರಿ ಕಚೇರಿಗಳಲ್ಲಿ ಅರ್ಹರಿಗೆ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದೆ. ಕೋವಿಡ್‌ ಲಸಿಕೆ ಪಡೆಯುವ ಅಗತ್ಯತೆ ಕುರಿತು ಅರಿವು ಮೂಡಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎಫ್ಎಂ ರೇಡಿಯೊ ಕೇಂದ್ರಗಳಿಗೆ ತಿಳಿಸಿದೆ.

ಕಳೆದ ವರ್ಷ ಜನವರಿಯಲ್ಲಿ ಆರಂಭವಾದ ಕೊರೊನಾ ಲಸಿಕೆ ವಿತರಣೆ ಅಭಿಯಾನದಲ್ಲಿ ಇದುವೆರೆಗೆ 211 ಕೋಟಿಗೂ ಅಧಿಕ ಡೋಸ್‌ ಲಸಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next