ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರುದಿನೇ ದಿನೆ ಹೆಚ್ಚುತ್ತಿದ್ದು, ಈ ಕೋವಿಡ್ ನಿಯಂತ್ರಣಕ್ಕೆ ಟಾಸ್ಕ್ ಕಮಿಟಿ ಮಾಡಬೇಕು. ಗ್ರಾಮೀಣ ಭಾಗದಲ್ಲಿಪಂಚಾಯಿತಿ ಪಿಡಿಒ ಮತ್ತು ಆರೋಗ್ಯ ಇಲಾಖೆಯಸಿಬ್ಬಂದಿಗೆ ಮೊದಲು ಧೈರ್ಯ ತುಂಬಿ ನಾಗರಿಕರಿಗೆಜಾಗೃತಿ ಮೂಡಿಸುವಂತೆ ಸೂಚಿಸಬೇಕು ಎಂದುಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮುರಳೀಧರ ಹಾಲಪ್ಪ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಸೋಂಕಿತರಿಗೆ ಆಕ್ಸಿಜನ್ ಬೆಡ್ ಮತ್ತು ವೆಂಟಿಲೇಟರ್‌ಕೊರತೆ ಬಾರದಂತೆ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ, ಮಂಗಳವಾರಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಪ್ರತಿ ಗ್ರಾಮದಲ್ಲೂ ಕೊರೊನಾ ಸೋಂಕಿತರಸಂಖ್ಯೆ ಹೆಚ್ಚುತ್ತಿರುವುದರಿಂದ ಗ್ರಾಪಂನಲ್ಲಿ ಕೋವಿಡ್‌ಕೇರ್ ಕೇಂದ್ರವನ್ನು ತೆರೆಯಬೇಕು.
ಜಿಲ್ಲೆಯಲ್ಲಿರೆಮ್‌ಡೆಸಿವಿಯರ್, ಬ್ಲಿಡ್ ಥಿನ್ನರ್, ಸ್ಟಿರಾಯ್ಡಗಳನ್ನು ಸಂಗ್ರಹ ಮಾಡಿಟ್ಟು ಕೊಳ್ಳಬೇಕು, ರೆಮ್‌ಡೆಸಿವಿಯರ್ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿಮಾರಾಟ ಮಾಡುತ್ತಿರುವುದರ ಬಗ್ಗೆ ಅಗತ್ಯಕ್ರಮಕೈಗೊಳ್ಳಬೇಕು ಎಂದರು. ಕೋವಿಡ್ ಟೆಸ್ಟ್ ಮಾಡಿಸಿದ ಮೂರ್‍ನಾಲ್ಕು ದಿನಗಳನಂತರ ವರದಿ ಬರುತ್ತಿದ್ದು, ಇದು ತಡವಾಗುತ್ತಿರುವಹಿನ್ನೆಲೆ ಸರಿಯಾದ ಸಮಯದಲ್ಲಿ ಸೋಂಕಿತರಿಗೆ ಚಿಕಿತ್ಸೆಲಭ್ಯವಾಗದೆ ಸಾವನ್ನಪ್ಪುತ್ತಿದ್ದು, ಕೋವಿಡ್ ವರದಿ 24ಗಂಟೆಗಳೊಳಗೆ ಬರುವಂತೆ ಕ್ರಮ ತೆಗೆದುಕೊಳ್ಳಬೇಕು.ಆರೋಗ್ಯ ಸಹಾಯವಾಣಿ ಕೇಂದ್ರದ ಮೂಲಕ ಬೆಡ್‌ಗಳು ಲಭ್ಯವಿರುವ ಆಸ್ಪತ್ರೆಗಳ ಬಗ್ಗೆ ಸೂಕ್ತಮಾಹಿತಿಯನ್ನು ಒದಗಿಸಬೇಕು ಎಂದರು.
ಉಚಿತ ಲಸಿಕೆ ನೀಡಿ: ಜಿಲ್ಲೆಯಲ್ಲಿ ಕೆಲವು ಆ್ಯಂಬು ಲೆನ್ Õಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚುಆ್ಯಂಬುಲೆನ್ಸ್‌ಗಳನ್ನು ಒದಗಿಸಬೇಕು. ಕೋವಿಡ್‌ಖಚಿತತೆಗೆ ವೈದ್ಯರು ಸಿಟಿ ಸ್ಕ್ಯಾನಿಂಗ್‌ನ್ನುಸೂಚಿಸುತ್ತಿದ್ದು, ಸಿಟಿ ಸ್ಕಾ Âನಿಂಗ್ ದರವು ಬಡವರಿಗೆಕಷ್ಟ ಕರವಾಗಿ ರುವುದರಿಂದ ಸ್ಕ್ಯಾನಿಂಗ್ ದರವನ್ನು ಕಡಿಮೆಮಾಡಬೇಕು. ಕೋವಿಡ್‌ಲಸಿಕೆಯನ್ನು ಜನರಿಗೆ ಉಚಿತವಾಗಿ ನೀಡಬೇಕುಎಂದು ಹೇಳಿದರು.
ಕೋವಿಡ್ ಸೆಂಟರ್‌ಗೆ ಅನುಮತಿ ಕೊಡಿ: ನಗರದಲ್ಲಿ50 ಬೆಡ್‌ಗಳುಳ್ಳ ಮತ್ತು ಚಿಕ್ಕನಾಯಕನಹಳ್ಳಿತಾಲೂಕಿನಲ್ಲಿ 25 ಬೆಡ್‌ಗಳುಳ್ಳ ಕೋವಿಡ್ ಕೇರ್‌ಸೆಂಟರ್‌ನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದಆರಂಭಿಸಲು ಸಿದ್ಧವಾಗಿದ್ದು, ಜಿಲ್ಲಾಡಳಿತ ಕೇವಲಆಕ್ಸಿಜನ್ ಪೂರೈಕೆಗೆ ಕ್ರಮವಹಿಸಿದರೆ ವೈದ್ಯರು,ಸಿಬ್ಬಂದಿ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳುಳ್ಳಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಆರಂಭಿಸಲುಸಿದ್ಧರಿದ್ದು, ಇದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾತನಾಡಿ, ಸ್ಥಳಾವಕಾಶ ಮತ್ತು ಮೂಲ ಸೌಕರ್ಯಗಳೊಂದಿಗೆ ಕೋವಿಡ್ ಕೇರ್ ಸೆಂಟರ್ ಆರಂಭಿಸುವುದಾದರೆಸ್ವಾಗತ, ಆಕ್ಸಿಜನ್‌ಗೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು. ಪ್ರತಿಯೊಂದುತಾಲೂಕು ಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ 35ರಿಂದ 50 ಆಕ್ಸಿಜನ್ ಇರುವಂತಹ ಬೆಡ್‌ಗಳ ವ್ಯವಸ್ಥೆ ಇದೆ. ಆದರೂ ತಾಲೂಕುಗಳಲ್ಲಿ ಸೋಂಕಿತರು ಹೆಚ್ಚುತ್ತಲೇ ಇದ್ದಾರೆ. ಪ್ರಸ್ತುತ 16 ಸಾವಿರ ಸಕ್ರಿಯಪ್ರಕರಣ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆತುಮಕೂರು ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲಎಂದು ಸ್ಪಷ್ಟಪಡಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಕಾಂಗ್ರೆಸ್ ಹಿರಿಯ ಮುಖಂಡ ರೇವಣಸಿದ್ಧಪ್ಪ,ಇಕ್ಬಾಲ್ ಅಹಮ್ಮದ್, ಸುಜಾತ, ನಟರಾಜು ಹಾಗೂಮುಂತಾದವರು ಇದ್ದರು.