Advertisement

ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ

11:57 AM Sep 11, 2019 | Team Udayavani |

ಕೋಲಾರ: ತಾಲೂಕಿನ ಹೋಳೂರು ಹೋಬಳಿಯ ಗಂಗರಸನಹಳ್ಳಿ ಗ್ರಾಮದಲ್ಲಿ ಸರ್ಕಾರದಿಂದ ಮಂಜೂರಾಗಿರುವ ಜಮೀನನ್ನು ಆಂಧ್ರ ಮೂಲದ ಹರಿರೆಡ್ಡಿ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮಕೈಗೊಂಡು ಜಮೀನನ್ನು ಬಿಡಿಸಿಕೊಡಬೇಕೆಂದು ರೈತ ಸೇನೆ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿತು.

Advertisement

ಗ್ರಾಮದ ವೆಂಕಟಸ್ವಾಮಿ ಬೋವಿ ಮರಣ ಹೊಂದಿದ ನಂತರ ಅವರ ಆಸ್ತಿಪಾಸ್ತಿಗಳ ಜವಾಬ್ದಾರಿ ಅಳಿಯನಿಗೆ ಸೇರುತ್ತದೆ. ವೆಂಕಟಸ್ವಾಮಿ ಬೋವಿ ಅವರ ಮೂರನೇ ಪುತ್ರಿ ಗಾಯತ್ರಿ ಹೆಸರಿಗೆ ಖಾತೆ ಬದಲಾವಣೆ 81/5 ಪೈಕಿ ಹೊಸ ನಂ. 102 ಆಗಿರುತ್ತದೆ. ಕಾಲದ ನಂತರ ಗ್ರಾಮದಲ್ಲಿ ಸಾಲ ಹೆಚ್ಚಾಗಿ ತಮ್ಮ ಜೀವನ ಸಾಗಿಸಲು 1991-92ರಲ್ಲಿ ಬೇರೆಡೆಗೆ ವಲಸೆ ಹೋಗಿರುತ್ತಾರೆ. 2009ರಲ್ಲಿ ಗ್ರಾಮದ ಕಡೆ ಬಂದು ತಮ್ಮ ಆಸ್ತಿಪಾಸ್ತಿ ನೋಡಿದರೆ ಬೇರೊಬ್ಬರು ತಮ್ಮ ಜಮೀನು ಕಬಳಿಸಿರುವುದಾಗಿ ತಿಳಿದು ಬಂದಿತು. ನಂತರ ನಮ್ಮಲ್ಲಿದ್ದ ದಾಖಲೆಗಳನ್ನು ತೆಗೆದುಕೊಂಡು ಸಹಾಯಕ ಕಮೀಷನರ್‌ ನ್ಯಾಯಾಲಯದಲ್ಲಿ ಕಾನೂನು ರೀತಿಯಲ್ಲಿ ನಮಗೆ ನ್ಯಾಯ ಸಿಕ್ಕಿದೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿದ್ದರೂ, ನಮಗೆ ಜಮೀನು ಬಿಡಲು ಹರಿರೆಡ್ಡಿ ಮುಂದಾ ಗುತ್ತಿಲ್ಲ. ಹರಿರೆಡ್ಡಿ ರವರು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಲಿಷ್ಠವಾಗಿದ್ದು, ನಮಗೆ ನ್ಯಾಯ ಒದಗಿಸಿಕೊಡಬೇಕು. ಹರಿರೆಡ್ಡಿ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಹರಿರೆಡ್ಡಿ ರವರಿಗೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಲು ಖಾತೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜನಾಂಗಕ್ಕೆ ಸೇರಿರುವುದರಿಂದ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ಇರುವುದರಿಂದ ಕಾನೂನು ರೀತಿಯಲ್ಲಿ ಗಾಯತ್ರಿ ಮತ್ತು ವೆಂಕಟೇಶ್‌ ಬೋವಿ ಅವರ ಜಮೀನನ್ನು ಬಿಡುಗಡೆಗೊಳಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ರೈತ ಸೇನೆಯ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ, ಪ್ರಧಾನಕಾರ್ಯದರ್ಶಿ ಮುಜೀಬ್‌ ಪಾಷ, ಸಂಘಟನಾ ಕಾರ್ಯದರ್ಶಿ ಶ್ರೀಧರ್‌, ಕಾರ್ಯಾಧ್ಯಕ್ಷ ಟಿ.ಎ ನಾಗರಾಜ್‌, ಉಪಾಧ್ಯಕ್ಷ ಆನಂದಗೌಡ, ಕೋಲಾರ ತಾಲೂಕು ಅಧ್ಯಕ್ಷ ದೊಡ್ನಹಳ್ಳಿ ಕೃಷ್ಣಪ್ಪ, ನಾರಾಯಣಸ್ವಾಮಿ, ವೆಂಕಟೇಶಪ್ಪ, ಮಾರ್ಕೆಟ್ ಕೆಂಪಣ್ಣರವರು ಒತ್ತಾಯಿಸಿದ್ದಾರೆ.

ಸಬ್‌ರಿಜಿಸ್ಟ್ರಾರ್‌ ಅಧಿಕಾರಿ ಹರಿರೆಡ್ಡಿ ಅವರಿಗೆ ಅಕ್ರಮ ದಾಖಲೆ ಮಾಡಿದ್ದು, ಇದರಲ್ಲಿ ಭಾಗಿಯಾಗಿರುವ ಎಲ್ಲಾ ಸಂಬಂಧಪಟ್ಟವರ ವಿರುದ್ಧ ವಾರದೊಳಗೆ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಸಬ್‌ ರಿಜಿಸ್ಟ್ರಾರ್‌ ಕಚೇರಿ ಮುಂದೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next