Advertisement

ಮನೆಯಲ್ಲೇ ಕ್ರೀಮ್‌ ಮಾಡಿ

06:59 PM Oct 22, 2019 | Lakshmi GovindaRaju |

ಮೇಕಪ್‌ ಮಾಡಿಕೊಳ್ಳುವುದು ಎಷ್ಟು ಕಷ್ಟವೋ, ಅದನ್ನು ತೆಗೆಯುವುದು ಕೂಡಾ ಅಷ್ಟೇ ಕಷ್ಟ ಮತ್ತು ಅಷ್ಟೇ ಮುಖ್ಯ. ಸಂಜೆ ಮನೆಗೆ ಬಂದ ಮೇಲೆ ಮೇಕಪ್‌ ಅನ್ನು ತೊಳೆದು ತೆಗೆಯದಿದ್ದರೆ, ಸೌಂದರ್ಯವರ್ಧಕಗಳಲ್ಲಿರುವ ರಾಸಾಯನಿಕವು ಚರ್ಮಕ್ಕೆ ಹಾನಿ ಮಾಡುತ್ತದೆ. ಅದಕ್ಕಾಗಿಯೇ, ಥರಹೇವಾರಿ ಮೇಕಪ್‌ ರಿಮೂವರ್‌ಗಳು ಮಾರುಕಟ್ಟೆಗೆ ಬಂದಿವೆ.

Advertisement

ಆವಸ್ತುಗಳೂ ಕೂಡಾ ರಾಸಾಯನಿಕವೇ ತಾನೇ? ಹಾಗಾಗಿ, ಮನೆಯಲ್ಲಿಯೇ ಮೇಕಪ್‌ ರಿಮೂವರ್‌ಗಳನ್ನು ತಯಾರಿಸುವುದು ಜಾಣ ಉಪಾಯ. ರಾಸಾಯನಿಕ ಮುಕ್ತವಾದ ಮೇಕಪ್‌ ರಿಮೂವರ್‌ ತಯಾರಿಸುವುದು ಹೇಗೆಂಬ ವಿವರಣೆ ಇಲ್ಲಿದೆ.

ಶೀ ಬಟರ್‌ ಕ್ರೀಂ
ಬೇಕಾಗುವ ಸಾಮಗ್ರಿ: ಆರ್ಗಾನಿಕ್‌ ಶೀ ಬಟರ್‌ (ಅಂಗಡಿ/ಆನ್‌ಲೈನ್‌ನಲ್ಲಿ ಲಭ್ಯ)- ಅರ್ಧ ಕಪ್‌, ಕೊಬ್ಬರಿ ಎಣ್ಣೆ- 2 ಚಮಚ, ವೆನಿಲ್ಲಾದಿಂದ ಮಾಡಿದ ಎಣ್ಣೆ- ಹತ್ತು ಹನಿ (ಬೇಕಿದ್ದರೆ ಮಾತ್ರ)

ಮಾಡುವ ವಿಧಾನ: ಶೀ ಬಟರ್‌ ಮತ್ತು ಕೊಬ್ಬರಿ ಎಣ್ಣೆಯನ್ನು ಒಟ್ಟಿಗೆ ಸೇರಿಸಿ, ಸಣ್ಣ ಉರಿಯಲ್ಲಿ ಕರಗಿಸಿ. ಮಿಶ್ರಣವು ಕರಗಿದಾಗ ವೆನಿಲಾ ಎಣ್ಣೆ ಬೆರೆಸಿ, ಅದನ್ನು ಗಾಜಿನ ಬಾಟಲಿಯಲ್ಲಿ ಹಾಕಿ, ಗಟ್ಟಿಯಾಗುವವರೆಗೆ ಫ್ರಿಡ್ಜ್ನಲ್ಲಿ ಇಡಿ.

ಬಳಸುವ ವಿಧಾನ: ಈ ಕ್ರೀಮ್‌ ಅನ್ನು ಮುಖಕ್ಕೆ ಹಚ್ಚಿ, ವರ್ತುಲಾಕಾರದಲ್ಲಿ ಮಸಾಜ್‌ ಮಾಡಿ. ನಂತರ, ಟಿಶ್ಯೂ ಪೇಪರ್‌/ ಹತ್ತಿಯಿಂದ ಮುಖವನ್ನು ಒರೆಸಿದರೆ, ಮುಖದ ಮೇಕಪ್‌ ಸ್ವತ್ಛವಾಗುತ್ತದೆ. ನಂತರ ತಣ್ಣೀರಿನಿಂದ ಮುಖ ತೊಳೆದು, ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ.

Advertisement

ಅಲೋವೆರಾ ಕ್ರೀಂ
ಬೇಕಾಗುವ ಸಾಮಗ್ರಿ: ಲೋಳೆಸರ (ಅಲೋವೆರ) ಜೆಲ್‌- 3 ಚಮಚ, ಜೇನುತುಪ್ಪ- 3 ಚಮಚ (ಎರಡನ್ನೂ ಸಮ ಪ್ರಮಾಣದಲ್ಲಿ ಬೆರೆಸಿ) ಕೊಬ್ಬರಿ ಎಣ್ಣೆ/ ಬಾದಾಮಿ ಎಣ್ಣೆ- 2 ಚಮಚ.

ಮಾಡುವ ವಿಧಾನ: ಅಲೋವೆರ ಜೆಲ್‌, ಜೇನುತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಬೆರೆಸಿ. ಆಗ ಸಿಗುವ ಕ್ರೀಂ ಅನ್ನು, ಗಾಳಿಯಾಡದ ಸಣ್ಣ ಗಾಜಿನ ಬಾಟಲಿಯಲ್ಲಿ ಹಾಕಿ. ಒಂದುವೇಳೆ, ಅಲೋವೆರ ಜೆಲ್‌ನ ಬದಲು, ತಾಜಾ ಅಲೋವೆರವನ್ನು ಬಳಸಿದ್ದರೆ ಈ ಕ್ರೀಂ ಅನ್ನು ಫ್ರಿಡ್ಜ್ನಲ್ಲಿಟ್ಟು ಬಳಸಬೇಕು.

ಬಳಸುವ ವಿಧಾನ: ಅರ್ಧ ಚಮಚದಷ್ಟು ಕ್ರೀಂ ತೆಗೆದುಕೊಂಡು ಮುಖಕ್ಕೆ ಮಸಾಜ್‌ ಮಾಡಿ, ಹತ್ತಿ ಬಟ್ಟೆಯಿಂದ ಮುಖ ಒರೆಸಿ. ನಂತರ, ತಣ್ಣೀರಿನಲ್ಲಿ ತೊಳೆದುಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next