Advertisement

ಕ್ರೇಜಿ ಜೊತೆ ಅಪೂರ್ವ

02:28 PM Jan 18, 2023 | Team Udayavani |

ರವಿಚಂದ್ರನ್‌ ನಟನೆ, ನಿರ್ದೇಶನದ “ಅಪೂರ್ವ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಅಪೂರ್ವ ಈಗ ಮತ್ತೂಮ್ಮೆ ರವಿಚಂದ್ರನ್‌ ಅವರ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಅದು “ಗೌರಿ’ ಸಿನಿಮಾ ಮೂಲಕ.

Advertisement

ಹೌದು, ರವಿಚಂದ್ರನ್‌ “ಗೌರಿ’ ಎಂಬ ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೆ ಅಪೂರ್ವ ನಾಯಕಿಯಾಗಿದ್ದಾರೆ. ಆರಂಭದಲ್ಲಿ ಚಿತ್ರದಲ್ಲಿ ಬರ್ಕಾ ಸಿಂಗ್‌ ನಾಯಕಿಯಾಗಿದ್ದರು. ಆದರೆ, ಈಗ ಅವರ ಜಾಗಕ್ಕೆ ಅಪೂರ್ವ ಬಂದಿದ್ದಾರೆ. ಈ ಚಿತ್ರಕ್ಕೆ ಶಂಕರ್‌ ಬಿ/ಎಚ್‌ ಎಂಬ ಟ್ಯಾಗ್‌ಲೈನ್‌ ಇದೆ. ಈ ಚಿತ್ರವನ್ನು ಅನೀಸ್‌ ನಿರ್ದೇಶನ ಮಾಡುತ್ತಿದ್ದು, ಎನ್‌.ಎಸ್‌.ರಾಜ್‌ಕುಮಾರ್‌ ಹಾಗೂ ವಿ.ಎಸ್‌.ರಾಜ್‌ಕುಮಾರ್‌ ಸೇರಿ ನಿರ್ಮಿಸುತ್ತಿದ್ದಾರೆ. ಇಡೀ ಸಿನಿಮಾವನ್ನು ಮೂರು ಪಾತ್ರಗಳನ್ನಿಟ್ಟುಕೊಂಡು ಮಾಡುತ್ತಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ದಾಂಡೇಲಿ ಕಾಡಿನಲ್ಲಿ ನಡೆಯಲಿದೆಯಂತೆ. ಚಿತ್ರೀಕರಣಕ್ಕೆ ಹುಲಿಯನ್ನು ಬಳಸಿಕೊಳ್ಳುವ ಯೋಚನೆ ಕೂಡಾ ಚಿತ್ರತಂಡಕ್ಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next