Advertisement

ಕ್ರೇಜಿ ಕಸಿನ್ಸ್‌

06:00 AM Nov 30, 2018 | Team Udayavani |

ಕ್ರೇಜಿ ಕಸಿನ್ಸ್‌ ಆರ್‌ ದಿ ಬೆಸ್ಟ್‌ ಪಾರ್ಟ್‌ ಆಫ್ ಲೈಫ್ ಅಂತ ಎಲ್ಲೋ ಓದಿದ್ದೆ. ನನ್ನ ಜೀವನದಲ್ಲಿ ಕ್ರೇಜಿ ಕಸಿನ್ಸ್‌ ಇದ್ರು. ಬೆಸ್ಟ್‌ ಪಾರ್ಟ್‌ ಆಗಿರಲಿಲ್ಲ. ಯಾಕೆಂದರೆ, ನಾನು ಅವರ ಜೊತೆ ಜಾಸ್ತಿ ಬೆರೆಯುತ್ತಿರಲಿಲ್ಲ. ಕಾರಣ, ನನಗೆ ಮಾತನಾಡೋಕೆ ಆಗುತ್ತಾ ಇರಲಿಲ್ಲ. ಮಾತು ಅನ್ನೋದು ನನಗೆ ಕಬ್ಬಿಣದ ಕಡಲೆಯಾಗಿತ್ತು. ಈ ಮಾತಿನ ತೊಂದರೆಯಿಂದಾಗಿ ಎಷ್ಟೋ ಬಾರಿ ಕಸಿವಿಸಿಗೊಳಗಾಗಿದ್ದೂ ಇದೆ. ನನ್ನ ಜೊತೆ ಯಾರೇ ಬಂದರೂ ನಾನು ಅವರನ್ನ ಅವೈಡ್‌ ಮಾಡೋಕೆ ನೋಡ್ತಿದ್ದೆ. ನಾನು ಒಬ್ಬನೆ ಅವರನ್ನ ಸಂಭಾಳಿಸೋಕೆ ಆಗ್ತಾ ಇರಲಿಲ್ಲ. ಹುಡುಗಿಯರು ಸಿಕ್ಕರಂತೂ ಅಕ್ಷರಶಃ ಮೂಗನಾಗ್ತಿದ್ದೆ. ಇದರಿಂದಾಗಿ ನಾನು ತುಂಬಾ ವಿಷಯಗಳನ್ನು , ಅವಕಾಶಗಳನ್ನು (ಲವ್‌, ಜಾಬ್‌ ಇತ್ಯಾದಿ) ಮಿಸ್‌ ಮಾಡ್ಕೊಂಡೆ. ಒಂಟಿಯಾಗಿರೋಕೆ ಶುರುಮಾಡಿ ಸಂಬಂಧಿಕರ ಮನೆಗೆ ಹೋಗುವುದನ್ನು ನಿಲ್ಲಿಸಿದೆ. ಇದಕ್ಕೆ ಕಾರಣ ನಮ್ಮ ಮನೆ. ಮನೆಯಲ್ಲಿ ಎಲ್ಲರೂ ಮಾತಾಡೋದು ಕಡಿಮೆಯೇ. ಮನೆ ಪರಿಸರ ಮಾತಿಗೆ ಪೂರಕವಾಗಿರಲಿಲ್ಲ. ಹಾಗೆ ನೋಡಿದರೆ, ಮನೇಲಿ ತುಂಬ ಮಾತಾಡುತ್ತಿದ್ದುದು ನಾನೇ. ಅಣ್ಣ, ಅಕ್ಕ ಸುಮ್ಮನಿರುತ್ತಿದ್ದರು. ನಾನೇ ಅದು ಇದು ಹಾಗೆ ಹೀಗೆ ಅಂತ ವಟಗುಟ್ಟುತ್ತಿದ್ದೆ.

Advertisement

ಫ್ಯಾಮಿಲಿ ಫ‌ಂಕ್ಷನ್‌ನಲ್ಲಿ ಕಸಿನ್ಸ್‌ ಸಿಕ್ಕರೆ, “ಹಾಯಿ, ಹಲೋ, ಹವ್‌ ಆರ್‌ ಯೂ’ ನಲ್ಲಿ ನನ್ನ ಮಾತು ಮುಗಿದುಹೋಗುತ್ತಿತ್ತು. ಮುಂದೆ ಏನು ಮಾತಾಡೋದು ಅಂತ ಗೊತ್ತಾಗದೆ ಪೇಚಾಡಿ ಸುಮ್ಮನಾಗುತ್ತಿದ್ದೆ. ಹಾಗಾಗಿ ಅವರು ನನ್ನಲ್ಲಿ ಹೆಚ್ಚು ಮಾತನಾಡುತ್ತಿರಲಿಲ್ಲ. ಅವರೆಲ್ಲ ಒಂದು ಗುಂಪಲ್ಲಿ ಮಾತನಾಡುತ್ತಿದ್ದರೆ ನಾನು ಎಲ್ಲೋ ಒಂಟಿಯಾಗಿ ಸುಮ್ಮನೆ ಮೊಬೈಲ್‌ ನೋಡ್ತಾ ಕೂತಿರುತ್ತಿದ್ದೆ. (ನಿಜವಾಗಿ ಮೊಬೈಲ್‌ನಲ್ಲಿ ಏನೂ ಕೆಲ್ಸ ಇರುತ್ತಿರಲಿಲ್ಲ) ಅವ್ರನ್ನು ನೋಡ್ತಿದ್ರೆ ಯಾಕೆ ಅವ್ರು ನನ್ನ ಜೊತೆ ಕ್ಲೋಸ್‌ ಆಗಿಲ್ಲ? ನನ್ನ ಜತೆ ಯಾಕೆ ಮಾತನಾಡುತ್ತಿಲ್ಲ? ಅಂತೆಲ್ಲ ಅನ್ನಿಸುತ್ತಿತ್ತು.

ಇದೆಲ್ಲ ಕಾರಣದಿಂದ ನನಗೆ ದೊಡ್ಡಸ್ತಿಕೆ, ಅಹಂಕಾರಿ ಅನ್ನೋ ತಪ್ಪು ಭಾವನೆ ಅವರಲ್ಲಿ ಮೂಡಿರಬಹುದೆಂಬ ಯೋಚನೆ ಕಾಡಿತ್ತು. ನಾನು ಹಾಗಿಲ್ಲ, ನನಗೂ ಎಲ್ಲರ ಜತೆ ಮಾತನಾಡಬೇಕು, ಕ್ಲೋಸ್‌ ಆಗಿರಬೇಕು, ನನಗೂ ಎಲ್ಲರೂ ಬೇಕು ಅಂತ ಇಡಿ ಪ್ರಪಂಚಕ್ಕೆ ಕೇಳ್ಳೋ ಹಾಗೆ ಕೂಗಿ ಹೇಳ್ಬೇಕು ಅಂದುಕೊಳ್ಳುತ್ತೇನೆ. ಆದರೆ, ನನ್ನ ಸ್ಥಿತಿ ಕರೆನ್ಸಿ ಇದ್ರೂ ನೆಟ್‌ವರ್ಕ್‌ ಇಲ್ದಿರೊ ಮೊಬೈಲ್‌ ಥರಾಗ್ತಿತ್ತು. ಅವ್ರ ಜೊತೆ ತುಂಬಾ ಮಾತಾಡಬೇಕು, ಮಿಂಗಲ್‌ ಆಗಬೇಕು, ನಾನು ಬೋರಿಂಗ್‌ ಪರ್ಸನ್‌ ಅನ್ನಿಸ್ಕೋಬಾರದು ಅಂತ ಮಾತಾಡೋಕೆ ಪ್ರಯತ್ನಿಸಿದೆ. ಆದರೆ ಮತ್ತೆ ನನ್ನ ನಾಲಿಗೆ ತಡವರಿಸಿತ್ತು.

ಆದರೆ, ಇನ್ನು ಹಾಗಾಗಲ್ಲ. ಇತ್ತೀಚೆಗೆ ನಾನು ಕಸಿನ್‌ ಸಿಸ್ಟರ್‌ ಜೊತೆ ಎಲ್ಲಾ ವಿಷಯ ಕನ್‌ಫೆಸ್‌ ಮಾಡಿಕೊಂಡೆ. ಇದರಿಂದ ನನ್ನ ವಿಚಾರ ಅವರಿಗೆ ತಿಳಿಯಿತು. ಮತ್ತು ನನ್ನ ಬಗೆಗಿನ ಅವರ ಅಭಿಪ್ರಾಯ ಬದಲಾಗಿರಬಹುದು. ಈಗ ಅವರ ಜೊತೆ ಫೋನ್‌ನಲ್ಲಿ ಮಾತನಾಡುವವರೆಗೆ ಬದಲಾಗಿದೆ. ಇನ್ನು ನನ್ನ ಕಸಿನ್ಸ್‌ನೊಂದಿಗೆ ಹ್ಯಾಪಿ, ಫ‌ನ್ನಿಯಾಗಿರಬಹುದು. ಆ ಪರಮಾತ್ಮ ಇದಕ್ಕೆಲ್ಲ ಕಾರಣ ಇಲ್ಲದಿದ್ದರೆ ಅವಳಲ್ಲಿ ಇಷ್ಟೆಲ್ಲ ಹೇಳ್ಳೋಕೆ ಸಾಧ್ಯವಾಗುತ್ತಿರಲಿಲ್ಲ. ನನ್ನ ಫ್ರೆಂಡ್‌ ಹೇಳ್ತಿದ್ದ “ಮಚ್ಚಾ ,ಬಾಯಿ ಇದ್ರೆ ಬದ್ಕೊಬಹುದು’ ಎಂದು. ಅದು ನಿಜ. ರೀಯಲಿ ಕ್ರೇಜಿ ಕಸಿನ್ಸ್‌ ಆರ್‌ ದಿ ಬೆಸ್ಟ್‌ ಪಾರ್ಟ್‌ ಆಫ್ ಲೈಫ್. ನವ್‌ ಐ ಯ್ನಾಮ್‌ ರಿಯಲೈಜಿಂಗ್‌ ಇಟ್‌.

ರಿತೇಶ್‌
ಎಸ್‌ಎಂಐಟಿ ಇಂಜಿನಿಯರಿಂಗ್‌ ಕಾಲೇಜು, ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next