Advertisement

ಉಡುಪಿ: ಮಣ್ಣಪಳ್ಳದಲ್ಲಿ ಕ್ರಾಫ್ಟ್ ವಿಲೇಜ್‌: ಜಿಲ್ಲಾಧಿಕಾರಿ

11:21 AM Sep 05, 2022 | Team Udayavani |

ಉಡುಪಿ: ಮಣಿಪಾಲದ ಮಣ್ಣಪಳ್ಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಾಫ್ಟ್ ವಿಲೇಜ್‌ ಮಾಡುವ ಬಗ್ಗೆ ಅಗತ್ಯ ರೂಪುರೇಖೆ ಗಳನ್ನು ಸಿದ್ಧಪಡಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮಣ್ಣಪಳ್ಳದಲ್ಲಿ ವಾರದ ಮಾರುಕಟ್ಟೆ, ಆಹಾರ ಮೇಳ, ಕರಕುಶಲ ವಸ್ತು ಪ್ರದರ್ಶನ ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ದಿಲ್ಲಿ ಹಾತ್‌ ಮಾದರಿಯಲ್ಲಿ ಕಾಫ್ಟ್ ವಿಲೇಜ್‌ ಮಾಡಲು ಸಾಧ್ಯ. ಆ ಮೂಲಕ ಪ್ರವಾಸೋದ್ಯಮ ಚಟುವಟಿಕೆ ಕೈಗೊಂಡು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು. ಅಧಿಕಾರಿಗಳು ಪರಿಶೀಲನೆ ನಡೆಸಿ, ಅಗತ್ಯ ರೂಪುರೇಖೆ ಸಿದ್ಧಪಡಿಸುವಂತೆ ತಿಳಿಸಿದರು.

ಇಕೋ ಟೂರಿಸಂ

ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಇಕೋ ಟೂರಿಸಂ ಬಗ್ಗೆ ತರಬೇತಿ ಕಾರ್ಯಾಗಾರ ಏರ್ಪಡಿಸಬೇಕು. ಜಿಲ್ಲೆಯ ಅರಣ್ಯಗಳಲ್ಲಿ ಟ್ರಕ್ಕಿಂಗ್‌ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಪರಿಶೀಲಿಸಿ, ಪ್ರವಾಸಿಗರಿಗೆ ಅನುಕೂಲವಾಗುವ ಟ್ರಕ್ಕಿಂಗ್‌ ದಾರಿಗಳನ್ನು ಆಯ್ಕೆ ಮಾಡುವಂತೆ ನಿರ್ದೇಶಿಸಿದರು.

ವಿವಿಧೆಡೆ ಅಭಿವೃದ್ಧಿ ಕಾಮಗಾರಿ

Advertisement

ಸೈಂಟ್‌ ಮೇರೀಸ್‌ ದ್ವೀಪದ ಬಳಿ 4.20 ಕೋ.ರೂ. ವೆಚ್ಚದಲ್ಲಿ ಫೆರ್ರೀ ಜೆಟ್ಟಿ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಕುರಿತಂತೆ ಸರ್ವೇ ಕಾರ್ಯ ಮುಕ್ತಾಯಗೊಂಡಿದ್ದು, ಸಿಆರ್‌ ಝಡ್‌ ವತಿಯಿಂದ ನಿರಾಪೇಕ್ಷಣ ಪತ್ರ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ.

ತ್ರಾಸಿ-ಮರವಂತೆ ಕಡಲ ತೀರದಲ್ಲಿ 10 ಕೋ.ರೂ. ವೆಚ್ಚದಲ್ಲಿ ಮೂಲಸೌಕರ್ಯ ಕಾಮಗಾರಿ ಕೈಗೊಳ್ಳಲು 2.50 ಕೋ. ರೂ. ಬಿಡುಗಡೆಯಾಗಿದೆ. 15 ಕೋ. ರೂ. ವೆಚ್ಚದಲ್ಲಿ ಪಡುವರಿ ಸೋಮೇಶ್ವರ ಬೀಚ್‌ ಅಭಿವೃದ್ಧಿ ಕಾಮಗಾರಿಗೆ 3 ಕೋ. ರೂ. ಬಿಡುಗಡೆಯಾಗಿದೆ. ಈ ಎಲ್ಲ ಕಾಮಗಾರಿಗಳಿಗೆ ಡಿಪಿಆರ್‌ ತಯಾರಿಸಲಾಗಿದೆ. ಕಾರ್ಕಳದ ಉಮಿಕಲ್‌ ಕುಂಜಬೆಟ್ಟದಲ್ಲಿ 2 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪರಶುರಾಮ ಥೀಂ ಪಾರ್ಕ್‌ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್‌ ಲೋಬೋ ತಿಳಿಸಿದರು.

ಜಿ.ಪಂ. ಸಿಇಒ ಪ್ರಸನ್ನ ಎಚ್‌. ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು, ಪ್ರವಾಸೋದ್ಯಮ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಸೈಕಲ್‌ ಟ್ರ್ಯಾಕ್‌

ಪಡುಬಿದ್ರೆ ಕಡಲ ತೀರದಲ್ಲಿ ಸೈಕಲ್‌ ಸಕ್ರೂéರ್ಟ್‌, ಕುಂದಾಪುರದ ಕೋಡಿ ಬೀಚ್‌ ನಿಂದ ಕೋಡಿತಲೆ ಡೆಲ್ಟಾ ಪಾಯಿಂಟ್‌ವರೆಗೆ ಸೈಕಲ್‌ ಟ್ರ್ಯಾಕ್‌ ನಿರ್ಮಿಸಲು, ಕುಂದಾಪುರ ಕೋಡಿ ಸೀ ವಾಕ್‌ ಬಳಿ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿ, ಕುಂದಾಪುರ ಸೀ ವಾಕ್‌ ನಿಂದ ಗಂಗೊಳ್ಳಿ ಸೀ ವಾಕ್‌ ಗೆ ಸಂಪರ್ಕ ಕಲ್ಪಿಸುವ ಕುರಿತು, ಪ್ರಸ್ತುತ ಜಿಲ್ಲೆಯಲ್ಲಿ ಹೋಂ ಸ್ಟೇ ಪರವಾನಿಗೆಗೆ ನಿರಾಪೇಕ್ಷಣ ಪತ್ರವನ್ನು ಪೊಲೀಸ್‌ ಅಧೀಕ್ಷಕರಿಂದ ಪಡೆಯಲಾಗುತ್ತಿದೆ. ಈ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಇನ್ನು ಮುಂದೆ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್‌ ವೃತ್ತ ನಿರೀಕ್ಷಕರಿಂದ ನಿರಾಪೇಕ್ಷಣ ಪತ್ರ ಒದಗಿಸುವ ಬಗ್ಗೆ ಪಡೆಯುವ ಬಗ್ಗೆ ಚರ್ಚೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next