Advertisement
ಹೌದು, ಶಿಡ್ಲಘಟ್ಟ ತಾಲೂಕು ಕೇಂದ್ರದಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿರುವ ಬೆಳ್ಳೂಟಿ ಗ್ರಾಮದಲ್ಲಿ ಸುಮಾರು ವರ್ಷಗಳ ಹಿಂದೆ ನಿರ್ಮಿ ಸಿರುವ ಶಾಲೆಯಲ್ಲಿ 18 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮೂರು ಮಂದಿ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ.
Related Articles
Advertisement
ನೀರು ಹೊರ ಹಾಕುವ ಕಾಯಕ: ಶಾಲೆಯ ಎರಡು ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತವೆ. ಮಕ್ಕಳಿಗೆ ಬೋಧನೆ ಮಾಡಲು ತಯಾರು ಮಾಡಿರುವ ಕಲಿಕಾ ಸಾಮಗ್ರಿಗಳು ಮಳೆಗೆ ನೆನೆದು ಹಾಳಾಗುತ್ತಿದೆ. ಜೋರಾಗಿ ಮಳೆಯಾದರೆ ಸ್ವತಃ ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲಿ ಸಂಗ್ರಹ ವಾಗುವ ನೀರು ಹೊರಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಯ ಅಸ್ತಿತ್ವಕ್ಕೆ ಧಕ್ಕೆ: ಒಂದು ಕಾಲದಲ್ಲಿ ಮಾದರಿಯಾಗಿದ್ದ ಶಾಲೆಯಲ್ಲಿ ನೂರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಆದರೆ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟದ ಕೊರತೆಯೋ? ಅಥವಾ ಕೊಠಡಿಗಳ ದುಸ್ಥಿತಿಯನ್ನು ನೋಡಿ ಪೋಷಕರು ಮಕ್ಕಳನ್ನು ಶಿಡ್ಲಘಟ್ಟ ನಗರ ಮತ್ತು ಭಕ್ತರಹಳ್ಳಿಯ ಖಾಸಗಿ ಶಾಲೆಗೆ ಕಳುಹಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಇದರಿಂದ ಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು ಶಾಲೆಯ ಅಸ್ತಿತ್ವಕ್ಕೆ ಧಕ್ಕೆ ಬರುವ ಅಪಾಯ ತಲೆದೂರಿದೆ. ಘೋಷಣೆಗೆ ಸೀಮಿತ: ಖಾಸಗಿ ಶಾಲೆಯ ಮಾದರಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸು ವುದಾಗಿ ಸರ್ಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಘೋಷಣೆ ಕೇವಲ ದಾಖ ಲೆಗೆ ಸೀಮಿತವಾಗಿದ್ದು, ಅನುಷ್ಠಾನದಲ್ಲಿ ಮರಿಚೀಕೆಯಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರೊಬ್ಬರು ಕಳವಳ ವ್ಯಕ್ತ ಪಡಿಸಿದರು.
● ಎಂ.ಎ.ತಮೀಮ್ ಪಾಷ