ಸುತ್ತಿದೆ. ಇದು ನಗರ ಸಂಪರ್ಕಕ್ಕಿರುವ ಏಕೈಕ ರಸ್ತೆಯಾಗಿದ್ದು ಸಂಪರ್ಕ ತಪ್ಪುವ ಭೀತಿಯೂ ಎದುರಾಗಿದೆ.
ಏರ್‌ಪೋರ್ಟ್ ರಸ್ತೆಗೆ ಹೊಂದಿಕೊಂಡಂತೆ ಇಳಿಜಾರಿನಲ್ಲಿ ಬಾಗಿಕೊಂಡಿದ್ದ ಮರ ಶುಕ್ರವಾರ ಮಧ್ಯಾಹ್ನ
ಸುಮಾರು 12.30ಕ್ಕೆ ಬುಡಮೇಲಾಗಿದೆ. ಪರಿಣಾಮ ರಸ್ತೆಯ ಒಂದು ಬದಿ 30 ಮೀ. ಬಿರುಕುಬಿಟ್ಟಿದೆ. ಮತ್ತೂಂದೆಡೆ ಮರದ ಗೆಲ್ಲುಗಳು ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬ ಸನಿಹದ ಟ್ರಾನ್ಸ್‌ಫಾರ್ಮರ್‌ಗೆ ತಾಗಿಕೊಂಡು ನಿಂತಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು ¸ಚ್ಯಾರಿಕೇಡ್ ಇರಿಸಿ ಬಿರುಕು ಬಿಟ್ಟಲ್ಲಿ ವಾಹನಗಳು ಸಂಚರಿಸದಂತೆ ಮುನ್ನೆಚ್ಚರಿಕೆ ವಹಿಸಿಕೊಂಡಿದ್ದಾರೆ. ಈ ಸಂದರ್ಭ ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿದೆ.
Advertisement
ವಾಹನ ದಟ್ಟಣೆ ರಸ್ತೆ ಮರ ಉರುಳಿ ಬಿರುಕು ಬಿಟ್ಟ ಸ್ಥಳವಿಮಾನ ನಿಲ್ದಾಣಕ್ಕೆ ಕೇವಲ 1 ಕಿ.ಮೀ. ದೂರದಲ್ಲಿದೆ. ನಗರದಿಂದ ಮರಕಡ
ವರೆಗೆ ದ್ವಿಪಥ ರಸ್ತೆಯಿದ್ದು, ಬಳಿಕ ಏಕಪಥ ರಸ್ತೆಯಿದೆ. ಅದೇ ಕಿರಿದಾದ ರಸ್ತೆ ಬಿರುಕು ಕಾಣಿಸಿಕೊಂಡಿದ್ದರಿಂದ ವಾಹನ ಸಂಚಾರ ನಿಧಾನವಾಗಿದೆ. ಸದ್ಯ ರಸ್ತೆ ಬದಿ ಇಳಿಜಾರು, ಮಳೆ ಇರುವುದರಿಂದ ರಸ್ತೆ ರಿಪೇರಿ ದುಸ್ತರವಾಗಿದೆ. ವಾಹನ ಒತ್ತಡ ಹೆಚ್ಚಾಗಿ ರಸ್ತೆಗೆ ಅಪಾಯವಾಗುವ ಸಾಧ್ಯತೆ ಇದೆ.
ಈ ಮರದ ಸನಿಹದಲ್ಲೇ ವಿದ್ಯುತ್ ತಂತಿಯೂ ಹಾದು ಹೋಗುತ್ತಿದೆ. ಕೆಲ ದಿನಗಳಿಂದ ಮರ ಬಾಗಿದಂತೆ ಕಂಡು
ಬಂದಿದ್ದು ಮೆಸ್ಕಾಂಗೆ ದೂರು ನೀಡಲಾಗಿತ್ತು. ಆಗಲೇ ಕೊಂಬೆ ಕಡಿಯುತ್ತಿದ್ದರೆ ರಸ್ತೆಗೆ ಹಾನಿಯಾಗುತ್ತಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.