Advertisement

CPM ಶಾಸಕ ಮೊಯ್ದಿನ್‌ ನಿವಾಸಕ್ಕೆ ಇ.ಡಿ. ದಾಳಿ

08:56 PM Aug 22, 2023 | Team Udayavani |

ತಿರುವನಂತಪುರ: ಸಿಪಿಎಂ ನಿಯಂತ್ರಣದಲ್ಲಿರುವ ತ್ರಿಶ್ಶೂರ್‌ನ ಕರುವನ್ನೂರ್‌ ಸಹಕಾರ ಬ್ಯಾಂಕಿನ 100 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಸಿಪಿಎಂ ಶಾಸಕ ಎ.ಸಿ.ಮೊಯಿದ್ದೀನ್‌ ಮತ್ತು ಅವರ ಆಪ್ತರಿಗೆ ಸೇರಿದ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ದಾಳಿ ನಡೆಸಿದೆ.

Advertisement

ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ತ್ರಿಶ್ಶೂರ್‌ನ ವಡಕ್ಕಂಚೇರಿಯಲ್ಲಿರುವ ಮೊಯಿದ್ದೀನ್‌ ಅವರ ನಿವಾಸ ಹಾಗೂ ಅವರ ಆಪ್ತರಿಗೆ ಸೇರಿದ ಆರಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಬೇನಾಮಿ ಆಸ್ತಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಮೊಯಿದ್ದೀನ್‌ ಕುನ್ನಂಕುಲಂ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಹಿಂದೆ ಕೇರಳ ಸರ್ಕಾರದಲ್ಲಿ ಇವರು ಕೈಗಾರಿಕೆ ಮತ್ತು ಸಹಕಾರ ಸಚಿವರಾಗಿದ್ದರು. 2010ರಲ್ಲಿ ಕರುವನ್ನೂರ್‌ ಸಹಕಾರ ಬ್ಯಾಂಕಿನ ಹಗರಣ ಬಯಲಿಗೆ ಬಂದಿತ್ತು. ಸಿಪಿಎಂ ನಾಯಕರು ಮತ್ತು ಬ್ಯಾಂಕಿನ ಸಮಿತಿ ಸದಸ್ಯರ ಸೂಚನೆ ಮೇರೆಗೆ, ಬಡವರ ಆಸ್ತಿಗಳನ್ನು ಅವರಿಗೆ ಅರಿವಿಲ್ಲದಂತೆ ಅಡವಿಟ್ಟುಕೊಂಡು, ಬೇನಾಮಿಗಳಿಗೆ ನಗದು ರೂಪದಲ್ಲಿ ಸಾಲ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next