Advertisement

ಸಿಪಿಎಲ್‌: ಎಲ್ಲ ಲೀಗ್‌ ಪಂದ್ಯ ಗೆದ್ದ ಟ್ರಿನ್‌ಬಾಗೊ

06:58 PM Sep 07, 2020 | mahesh |

ಪೋರ್ಟ್‌ ಆಫ್ ಸ್ಪೇನ್‌: ಟ್ರಿನ್‌ಬಾಗೊ ನೈಟ್‌ರೈಡರ್ (ಟಿಕೆಆರ್‌) “ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌’ನಲ್ಲಿ ಅಜೇಯ ಓಟ ಮುಂದುವರಿಸಿದೆ. ಲೀಗ್‌ ಹಂತದ ಎಲ್ಲ 10 ಪಂದ್ಯಗಳನ್ನು ಗೆದ್ದು ಮೆರೆದಿದೆ.

Advertisement

ರವಿವಾರ ರಾತ್ರಿ ನಡೆದ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಟಿಕೆಆರ್‌ 9 ವಿಕೆಟ್‌ಗಳಿಂದ ಸೇಂಟ್‌ ಕಿಟ್ಸ್‌ ಆ್ಯಂಡ್‌ ನೆವಿಸ್‌ ಪ್ಯಾಟ್ರಿಯಾಟ್ಸ್‌ ತಂಡವನ್ನು ಮಣಿಸಿತು. ಫ‌ವಾದ್‌ ಆಲಂ (21ಕ್ಕೆ 4) ದಾಳಿಗೆ ಸಿಲುಕಿದ ಸೇಂಟ್‌ ಕಿಟ್ಸ್‌ 77 ರನ್ನಿಗೆ ಕುಸಿದರೆ, ಟಿಕೆಆರ್‌ 11.3 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 78 ರನ್‌ ಮಾಡಿತು.

ಇದರೊಂದಿಗೆ ಲೀಗ್‌ ಹಣಾಹಣಿ ಮುಗಿದಿದ್ದು, ಮಂಗಳವಾರ ರಾತ್ರಿ ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ. ಕೈರನ್‌ ಪೊಲಾರ್ಡ್‌ ನಾಯಕತ್ವದ ಟಿಕೆಆರ್‌ 4ನೇ ಸ್ಥಾನದಲ್ಲಿರುವ ಜಮೈಕಾ ತಲ್ಲವಾಸ್‌ (7 ಅಂಕ) ತಂಡವನ್ನು ಎದುರಿಸಲಿದೆ. ಇನ್ನೊಂದು ಉಪಾಂತ್ಯದಲ್ಲಿ ಗಯಾನಾ ಅಮೆಜಾನ್‌ ವಾರಿಯರ್ (12 ಅಂಕ) ಮತ್ತು ಸೇಂಟ್‌ ಲೂಸಿಯಾ ಜೂಕ್ಸ್‌ (12 ಅಂಕ) ತಂಡಗಳು ಮುಖಾಮುಖಿಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next