Advertisement

ಸಿಪಿಎಂ ಕೊಲೆ, ಕಾಂಗ್ರೆಸ್‌ ಕಪಟ ರಾಜಕಾರಣ: ಬಿಜೆಪಿ

01:00 AM Feb 25, 2019 | Harsha Rao |

ಕುಂಬಳೆ: ಸಂಘ ಪರಿವಾರ ರಾಜ್ಯಾದ್ಯಂತ ಆಯೋಜಿಸಿದ ಶಬರಿಮಲೆ ಸಂರಕ್ಷಣಾ ಹೋರಾಟ ಅತ್ಯಂತ ಯಶಸ್ಸು ಕಂಡಿದೆ. ಸಮಾನಮನಸ್ಕ ಸಮುದಾಯ ಹಾಗೂ ಯುವಕರ ತಂಡವು ಶಬರಿಮಲೆ ಆಚಾರ ವಿಚಾರಗಳ ರಕ್ಷಣೆಗೆ ಕಟಿಬದ್ಧವಾಗಿದ್ದು ಧರ್ಮ ರಕ್ಷಣೆಯ ಕಾರ್ಯದಲ್ಲಿ ಕಾರ್ಯ ತತ್ಪರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವ ಕೆ. ಶ್ರೀಕಾಂತ್‌ ಹೇಳಿದರು. 

Advertisement

ಸಜಂಕಿಲದ ಆವಳಮಠ ಶ್ರೀ ದುರ್ಗಾಸದನದಲ್ಲಿ ನಡೆದ ಪೈವಳಿಕೆ ಪಂಚಾಯತ್‌ ಬಿಜೆಪಿ ಕುಟುಂಬ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪುಲ್ವಾಮಾ ದಾಳಿಯಲ್ಲಿ ಮಡಿದ ಸೆ„ನಿಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ದೇಶದ ಗಡಿ ರಕ್ಷಣೆಯ ಹೊಣೆಯನ್ನು ಧೀಮಂತ ಸೆ„ನಿಕರು ಹೊತ್ತರೆ, ಧರ್ಮ ಮತ್ತು ಸಮಾಜದ ರಕ್ಷಣೆಯ ಜವಾಬ್ದಾರಿಯನ್ನು ಸಂಘಪರಿವಾರದ ಯುವಕರು ಹೊತ್ತಿದ್ದಾರೆ. ದೇಶ ಮತ್ತು ಧರ್ಮದ ವಿರುದ್ಧವಾಗಿ ನಡೆಯುವವರಿಗೆ ತಕ್ಕ ಶಾಸ್ತಿಯಾಗಬೇಕಿದೆ ಎಂದರು. ಶಬರಿಮಲೆ ಕ್ಷೇತ್ರದ ಆಚರಣೆಯನ್ನು ಉಳಿಸುವ ನಿಟ್ಟಿನಲ್ಲಿ ಜರಗಿದ ನಾಮಜಪ ಯಜ್ಞಗಳು ರಾಜ್ಯ, ದೇಶದ ಗಡಿ ದಾಟಿ ವಿಶ್ವಾದ್ಯಂತ ಹಬ್ಬಿವೆ. ಏಕತೆಯ ಮಂತ್ರ ತಣ್ತೀಮಸಿಯನ್ನು ಬೋಧಿಸುವ ಅಯ್ಯಪ್ಪನ ಸಂದೇಶವು ಎಲ್ಲಡೆ ಪಸರಿದೆ ಎಂದರು. 

ಸಿಪಿಎಂ ಕೇವಲ ಕೊಲೆ ರಾಜಕಾರಣ ದಲ್ಲಿ ತೊಡಗಿದೆ. ಪುಲ್ಲೂರು ಪೆರಿಯಾದಲ್ಲಿ ನಡೆದ ಅವಳಿ ಯುವಕರ ಬರ್ಬರ ಕೊಲೆ ಕೃತ್ಯವೇ ಇದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್‌ ನಾಯಕರು ತಮ್ಮ ಕಾರ್ಯಕರ್ತರ ಹತ್ಯೆಗೆ ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ವಿಪಕ್ಷ ಸಿಪಿಎಂ ಜತೆ ಜಿಲ್ಲೆಯ ಕೆಲ ಗ್ರಾ.ಪಂ. ಗಳಲ್ಲಿ ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್‌ ಕಪಟ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದರು. ಪೈವಳಿಕೆ,ಕಾರಡ್ಕ, ಎಣ್ಮಕಜೆ ಗ್ರಾ.ಪಂಗಳಲ್ಲಿ ಕೋಲಿಬಿ ಸಖ್ಯದಲ್ಲಿದೆ ಎಂದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ ಮಾತನಾಡಿ ಕೇಂದ್ರದಲ್ಲಿ ಮತ್ತೂಮ್ಮೆ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೇರಿ ನರೇಂದ್ರ ಮೋದಿ ದೇಶದ ಪ್ರಧಾನಿ ಯಾಗಲಿರುವರು. ಇದನ್ನು ನನಸಾ ಗಿಸಲು ಎಲ್ಲ ಕಾರ್ಯಕರ್ತರು ಜತೆಗೂಡಿ ಶ್ರಮಿಸಬೇಕೆಂದರು. ಮೋದಿ ಸರಕಾರದ ವಿಶೇಷ ಸಾಧನೆಗಳನ್ನು ಜನರ ಬಳಿ ತಲುಪಿಸುವ ಜವಾಬ್ದಾರಿಯು ಪ್ರತಿಯೊಬ್ಬ ಕಾರ್ಯಕರ್ತನ ಹೆಗಲ ಮೇಲಿದೆ ಎಂದರು. 

ಚುನಾವಣೆಯಲ್ಲಿ ತಕ್ಕ ಶಾಸ್ತಿ 
ಸ್ತ್ರೀ ಸ್ವಾತಂತ್ರ್ಯದ ನೆಪದಲ್ಲಿ ಅನ್ಯಮತೀಯ ಯುವತಿಯರನ್ನು ಶಬರಿಮಲೆಗೆ ಒತ್ತಾಯಪೂರ್ವಕವಾಗಿ ಕಳುಹಿಸಿದ ಎಡರಂಗ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿಯಾಗಲಿದೆ ಎಂದರು. ರಾಜ್ಯದ ವಿವಿಧೆೆಡೆಗಳಲ್ಲಿ ನಾಮಜಪ ಯಜ್ಞದಲ್ಲಿ ತೊಡಗಿದ್ದ ಸುಮಾರು 6 ಸಾವಿರ ಮಂದಿ ಮಹಿಳೆಯರು ಮತ್ತು 4 ಸಾವಿರ ಮಂದಿ ಯುವಕರ ವಿರುದ್ಧ ವಿನಾಕಾರಣ ಕೇಸುಗಳನ್ನು ದಾಖಲಿಸಿದ ರಾಜ್ಯ ಸರಕಾರದ ಕ್ರಮ ತರವಲ್ಲವೆಂದರು. ಶಬರಿಮಲೆ ಹೋರಾಟವು ಧರ್ಮ ರಕ್ಷಣೆಯ ಭಾಗವಾಗಿ ಯಶಸ್ಸು ಕಂಡಿದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ ಎಂದರು.
-ಕೆ. ಶ್ರೀಕಾಂತ್‌ ಬಿಜೆಪಿ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next