Advertisement

ಕುಮಾರಸ್ವಾಮಿ ಒಬ್ಬ ಅವಕಾಶವಾದಿ ರಾಜಕಾರಣಿ : ಸಚಿವ ಸಿ.ಪಿ.ಯೋಗೇಶ್ವರ್ ಟೀಕೆ

09:35 PM Jul 23, 2021 | Team Udayavani |

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಬಂದು ಕಾವೇರಿ- ಕೃಷ್ಣದಲ್ಲಿ ಅನೇಕ ಅಭಿವೃಧ್ಧಿ ಕೆಲಸಗಳನ್ನು ಮಾಡಿಕೊಂಡು ಇದೀಗ ಸಿಎಂ ಮತ್ತು ಬಿಜೆಪಿ ಪಕ್ಷದ ವಿರುದ್ಧ ಅಸಂಬಂಧದ ಹೇಳಿಕೆಗಳನ್ನು ನೀಡಿ ದ್ವಂದ್ವ ನಿಲುವು ಹೊಂದಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒಬ್ಬ ಅವಕಾಶವಾದಿ ರಾಜಕಾರಣಿಯೆಂದು ಸಚಿವ ಸಿ.ಪಿ.ಯೋಗೇಶ್ವರ್ ಟೀಕಿಸಿದ್ದಾರೆ.

Advertisement

ಜಿಲ್ಲೆಯ ನಂದಿಗಿರಿಧಾಮಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದ ಡಿ.ಕೆ.ಸುರೇಶ್ ನಮ್ಮ ರಾಜಕೀಯ ವಿರೋಧಿಗಳು ಅವರೊಂದಿಗೆ ಅಂತರ ಕಾಯ್ದುಕೊಳ್ಳಬೇಕೆಂದು ನಾನು ಮುಖ್ಯಮಂತ್ರಿಗಳಿಗೆ ಮೊದಲೇ ಮನವಿ ಮಾಡಿದ್ದೆ ಆದರೇ ನಮ್ಮ ಸಿಎಂ ಬಳಿ ಕೃಷ್ಣ- ಕಾವೇರಿ ಕಚೇರಿಗೆ ತೆರಳಿ ಬೇಕಾದ ಕೆಲಸಗಳನ್ನು ಮಾಡಿಕೊಂಡು ಇದೀಗ ಅವರ ಮತ್ತು ಪಕ್ಷದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಅವಕಾಶವಾದಿ ರಾಜಕಾರಣ ಮಾಡುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಬಣ್ಣ ಬಯಲಾಗಿದೆಯೆಂದು ಲೇವಡಿ ಮಾಡಿದರು.

ಕೆ.ಡಿ.ಸುರೇಶ್ ಎಂದರೆ? ರಾಜ್ಯದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದ ಡಿ.ಕೆ.ಸುರೇಶ್ ನಮ್ಮ ರಾಜಕೀಯ ವಿರೋಧಿಗಳು ನಾವೇನು ಮಾಡಿದರು ಸಹ ಅದಕ್ಕೆ ತದ್ವಿರುದ್ದವಾಗಿ ಅವರು ಕೆಲಸ ಮಾಡಿ ನಮಗೆ ಕೆಟ್ಟ ಹೆಸರು ತರುವ ಕೆಲಸ ಮಾಡುವುದೇ ಅವರ ಮುಖ್ಯ ಗುರಿ ನಾನು ನನ್ನ ಬಗ್ಗೆ ಟೀಕೆ ಮಾಡಿಲ್ಲವೆಂದರೇ ಅವರಿಗೆ ಸಮಾಧಾನವಾಗಲ್ಲ ನಾನು ಸಂಸದ ಡಿಕೆ ಸುರೇಶ್ ಅವರನ್ನು ಕೇಡಿ ಸುರೇಶ್ ಎಂದರೆ? ನಾನು ಹಾಗೆ ಹೇಳುವುದಿಲ್ಲ ಎಂದು ವ್ಯಂಗ್ಯವಾಡಿದ ಸಚಿವರು. .

ಇದನ್ನೂ ಓದಿ :ನಾಳೆ ಶೃಂಗೇರಿ ಶಾರದಾಂಬೆ ದರ್ಶನಕ್ಕೆ ಸಚಿವ ಸುಧಾಕರ್ ಆಗಮನ

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಅವಕಾಶವಾದಿ ರಾಜಕಾರಣ ಮತ್ತು ನಿಲುವು ಬಯಲಾಗಿದೆ ಮುಂದಿನ ದಿನಗಳಲ್ಲಿ ನಡೆಯುವ ಬೆಳವಣಿಗೆಗಳಿಂದ ವಿರೋಧಿಗಳು ಭಯಭೀತರಾಗಿದ್ದಾರೆ ಎಂದು ಲೇವಡಿ ಮಾಡಿದರು.

Advertisement

ಮುಖ್ಯಮಂತ್ರಿಗಳ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಸಂಬಂಧ ನಾನು ಏನು ಹೇಳುವುದಿಲ್ಲ ಈಗಾಗಲೇ ಸಿಎಂ ಅವರು ಹೇಳಿದ್ದಾರೆ ಎಂದರಲ್ಲದೆ ರಾಜ್ಯದಲ್ಲಿ ಬಿಜೆಪಿ ರೀ ಅಲಾಟ್ಮೆಂಟ್ ಆದರೇ ಬಿಜೆಪಿ ಸ್ಟ್ರಾಂಗ್ ಆಗುತ್ತದೆಯೆಂದು ರಾಜಕೀಯ ವಿರೋಧಿಗಳು ಭ್ರಮನಿರಸನಗೊಂಡಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಬದಲಾವಣೆಯ ಸುಳಿವು ನೀಡಿದರು.

ಡ್ರಸ್ ರೆಡಿ ಮಾಡಿಕೊಂಡಿರುವವರಿಗೆ ಫಲ ಸಿಗುವುದಿಲ್ಲ: ರಾಜ್ಯದಲ್ಲಿ ಸಿಎಂ ಬದಲಾವಣೆಯ ನೆಪದಲ್ಲಿ ಗಡಿಬಿಡಿಯಿಂದ ಸಹಿ ಮಾಡುತ್ತಿದ್ದಾರೆಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರತಿಕ್ರಿಯೆಗೆ ಖಾರವಾಗಿ ಉತ್ತರಿಸಿದ ಸಚಿವ ಯೋಗೇಶ್ವರ್ ಕಾಲಕ್ಕೆ ತಕ್ಕಂತೆ ಮಾತನಾಡುತ್ತಾರೆ ಸಿಎಂ ಬಳಿ ಕೆಲಸ ಮಾಡಿಸಿಕೊಂಡು ಹೋಗುತ್ತಾರೆ ಈಗ ಸಿಎಂ ಅವರನ್ನೆ ದೂಷಣೆ ಮಾಡ್ತಾಇದ್ದಾರೆ ಇನ್ನೂ ಕೆಲವರು ಸರ್ಕಾರ ನಮ್ಮದೇ ಬರುತ್ತೆಯೆಂದು ಡ್ರೆಸ್ ರೆಡಿ ಮಾಡಿಕೊಂಡಿದ್ದವರಿಗೆ ಭ್ರಮನಿರಸನವಾಗಿದೆಯೆಂದು ಛೇಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next