Advertisement

ಗೋ ಕಳ್ಳತನ: ಕಠಿನ ಕ್ರಮಕ್ಕೆ ನಳಿನ್‌ ಆಗ್ರಹ

01:42 AM Jun 27, 2019 | Team Udayavani |

ಮಂಗಳೂರು: ಗೋವುಗಳ ಕಳ್ಳತನ ಹಾಗೂ ಅಕ್ರಮ ಸಾಗಾಟ ನಡೆಸುವ ಮೂಲಕ ಮತಾಂಧ ಶಕ್ತಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಷಡ್ಯಂತ್ರ ನಡೆಸಿವೆ. ಪೊಲೀಸ್‌ ಇಲಾಖೆ ದುಷ್ಕರ್ಮಿಗಳನ್ನು ತತ್‌ಕ್ಷಣ ಬಂಧಿಸಿ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಸದ ನಳಿನ್‌ ಕುಮಾರ್‌ ಕಟೀಲು ಆಗ್ರಹಿಸಿದ್ದಾರೆ.

Advertisement

ಮಾರಕಾಯುಧ ಬಳಸಿ ಹಟ್ಟಿಯಿಂದ ಗೋವುಗಳನ್ನು ಕಳ್ಳತನ ಮಾಡುವ ಪ್ರಕರಣ ಪ್ರತಿದಿನ ನಡೆಯುತ್ತಿದೆ. ಇದರಿಂದ ಹೈನುಗಾರರು, ರೈತರು ಆತಂಕದಿಂದ ಬದುಕು ಸ್ಥಿತಿ ನಿರ್ಮಾಣವಾಗಿದೆ. ಹಟ್ಟಿಯಿಂದ, ಗೋ ಶಾಲೆಗಳಿಂದ ಗೋವುಗಳನ್ನು ಕದಿಯುತ್ತಿದ್ದರೂ ಸರಕಾರ ಮೌನ ವಹಿಸಿದೆ. ಗೋವುಗಳನ್ನು ಕದ್ದು ಹತ್ಯೆ ಮಾಡುತ್ತಿರುವುದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಸದರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪೊಲೀಸರೇ ಹೊಣೆ: ಮಠಂದೂರು
ಮಂಗಳೂರು: ಹಿಂದೂಗಳ ಪೂಜನೀಯ ಗೋಮಾತೆಯ ರಕ್ಷಣೆಗೆ ನಾನು ಬದ್ಧ. ಇಂತಹ ಅಕ್ರಮಗಳನ್ನು ಹದ್ದುಬಸ್ತಿನಲ್ಲಿಡಲು ಪೊಲೀಸರಿಗೆ ಸಾಧ್ಯವಾಗ ದಿದ್ದರೆ ಅಹಿತಕರ ಘಟನೆಗಳಿಗೂ ಅವರೇ ನೇರ ಹೊಣೆಯಾಗುತ್ತಾರೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಟ್ಲ, ಉಪ್ಪಿನಂಗಡಿ, ಪುತ್ತೂರು ನಗರ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಅಕ್ರಮ ಗೋ ಸಾಗಾಟ ಪ್ರಕರಣ ಗಮನಕ್ಕೆ ಬಂದಿದೆ. ಇದನ್ನು ನಿಯಂತ್ರಿಸಬೇಕಾದ ಮತ್ತು ಕಾನೂನಿನ ಮೂಲಕ ಹದ್ದುಬಸ್ತಿನಲ್ಲಿ ಇಡಬೇಕಾದ ಪೊಲೀಸರು ಯಾವುದೇ ಕಠಿನ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದ್ದೇನೆ; ಇದು ಸರಿಯಲ್ಲ ಎಂದರು.

ಕೇಸು ಹಿಂಪಡೆಯಲು ಆಗ್ರಹಿಸಿ ವಿಹಿಂಪ ಮನವಿ
ಬದಿಯಡ್ಕ: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿರುವ ಘಟನೆಯನ್ನು ತಡೆದ ಬಜರಂಗ ದಳದ ಕಾರ್ಯಕರ್ತರ ವಿರುದ್ಧ ಬದಿಯಡ್ಕ ಪೊಲೀಸರು ದಾಖಲಿಸಿರುವ ಸುಳ್ಳು ಕೇಸುಗಳನ್ನು ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ವಿಶ್ವಹಿಂದೂ ಪರಿಷತ್‌ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್ ತಿಳಿಸಿದರು.

Advertisement

ಬುಧವಾರ ಬದಿಯಡ್ಕ ಪೊಲೀಸ್‌ ಠಾಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟÃಗೆ ಮನವಿ ನೀಡಿ ಮಾಧ್ಯಮದವರೊಡನೆ ಅವರು ಮಾತನಾಡಿದರು. ಅಕ್ರಮವಾಗಿ ಗೋಸಾಗಾಟ ಮಾಡುವಾಗ ಅದನ್ನು ತಡೆದ ಪ್ರಕರಣವನ್ನು ಬದಿಯಡ್ಕ ಪೊಲೀಸರು ಬಜರಂಗ ದಳದ ಕಾರ್ಯಕರ್ತರಾದ ವಿಟ್ಲ ಪ್ರಖಂಡ ಸಂಚಾಲಕ ಅಕ್ಷಯ್‌ ರಜಪೂತ್‌ ಮತ್ತು ಇತರರ ಮೇಲೆ ದರೋಡೆ ಪ್ರಕರಣ ಎಂದು ಮೊಕದ್ದಮೆಯನ್ನು ದಾಖಲಿಸಿರುವುದು ಖಂಡನೀಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next