Advertisement

ದೇಶಾದ್ಯಂತ ಗೋ ಹತ್ಯೆ ನಿಷೇಧ ಕಾಯ್ದೆಗೆ ಒತ್ತಾಯ

01:00 PM Feb 27, 2017 | |

ದಾವಣಗೆರೆ: ದೇಶದಲ್ಲಿ ಗೋ-ಹತ್ಯೆ ನಿಷೇಧಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್‌, ಹಿಂದೂ ಜಾಗರಣ ವೇದಿಕೆ, ಭಜರಂಗದಳ, ಗೋ ಪರಿಹಾರ, ಜಿಲ್ಲಾ ಗೋ ಆಂದೋಲನಾ ಸಮಿತಿಯ ಕಾರ್ಯಕರ್ತರು ಭಾನುವಾರ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸಿದರು. 

Advertisement

ಬೆಳಗ್ಗೆ 10 ಗಂಟೆಗೆ ಸತ್ಯಾಗ್ರಹ ಆರಂಭಿಸಿದ ಕಾರ್ಯಕರ್ತರು ಸಂಜೆ 4 ಗಂಟೆಯವರೆಗೆ ಮುಂದುವರೆಸಿದರು. ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಗೋ ಪೂಜೆ ಮಾಡುವುದರೊಂದಿಗೆ ಸತ್ಯಾಗ್ರಹಕ್ಕೆ ಚಾಲನೆನೀಡಿದರು. ನಂತರ ಮಾತನಾಡಿದ ಅವರು, ಗೋವು ಸನಾತನ ಧರ್ಮದ ಕುರುಹು.

ಅದಕ್ಕಾಗಿ ನಾವು ಪೂಜ್ಯನೀಯ ಸ್ಥಾನಮಾನ ನೀಡಿದ್ದೇವೆ. ನಮ್ಮ ದೇಶದ ಇಡೀ ಜೀವನ ಪದ್ಧತಿ ಗೋವು ಅವಲಂಬಿತ ಆಗಿದೆ. ಕೃಷಿ ಗೋವಿನ ಆಧಾರಿತ ಆಗಿದೆ. ಇದನ್ನು ನಮ್ಮ ಪೂರ್ವಜರು ರುಜುವಾತು ಮಾಡಿದ್ದಾರೆ. ನಾವೀಗ ಯಾಂತ್ರಿಕ ಕೃಷಿಯತ್ತ ಸಾಗಿ, ಒಂದು ಕಡೆ ಗೋವು ನಾಶಕ್ಕೆ ಕಾರಣವಾದರೆ ಇನ್ನೊಂದು ಕಡೆ ಪ್ರಕೃತಿಯ ಮುನಿಸಿಗೆ ಕಾರಣರಾಗುತ್ತಿದ್ದೇವೆ ಎಂದರು. 

ದೇಶಾದ್ಯಂತ ಗೋ ಹತ್ಯೆ ನಿಷೇಧಿಸಬೇಕು. ಗೋ ಹಂತಕರಿಗೆ 7 ವರ್ಷ ಶಿಕ್ಷೆ, 1 ಲಕ್ಷ ರು. ದಂಡ ವಿಧಿ ಸಬೇಕು, ದೇಶಾದ್ಯಂತ ಗೋ ಸಾಗಾಟದಲ್ಲಿ ಗೋ ಹಿಂಸೆ ಮಾಡಿದವರಿಗೆ 5 ವರ್ಷ ಶಿಕ್ಷೆ, ಸಾಗಟದ ವಾಹನ ಮುಟ್ಟುಗೋಲು ಹಾಕಿಕೊಳ್ಳುವಂತ ಕಾನೂನು ಜಾರಿಮಾಡಬೇಕು. ಕೇಂದ್ರ ಸರ್ಕಾರ ಯಾವುದೇ ಕಾರಕ್ಕೂ ಗೋ ಹತ್ಯೆ ಕಾಯ್ದೆ ಜಾರಿಯಲ್ಲಿ ನಿರ್ಲಕ್ಷé ತೋರಬಾರದು ಎಂದು ತಿಳಿಸಿದರು. 

ಅಷ್ಟೇ ಅಲ್ಲದೇ ರಾಜ್ಯದಲ್ಲಿ ಗೋಮಾಳ ಭೂಮಿ ಸರ್ವೇ ಗುರುತಿಸಿ ಗಡಿಕಲ್ಲು ಹಾಕಿ ಬೇಲಿಹಾಕಬೇಕು ಹಾಗೂ ಅದರಲ್ಲಿ ಹಸಿ ಹುಲ್ಲು ಬೆಳೆಸಿ ಸ್ಥಳೀಯ ಗೋವುಗಳಿಗೆ ಕಡಿಮೆ ದರದಲ್ಲಿ ವಿತರಿಸಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ವಿನೋಬನಗರದ ಜಡೇಸಿದ್ದೇಶ್ವರ ಶಿವಯೋಗೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಕೂಡ್ಲಿಗಿ ತಾಲೂಕು ಆಲೂರು ಹಿರೇಮಠದ ಶ್ರೀ ನಿರಂಜನ ಶಿವಾಚಾರ್ಯ ಸ್ವಾಮೀಜಿ,

Advertisement

ದಾವಣಗೆರೆ ಆಲೂರು ಹಿರೇಮಠದ ಶ್ರೀ ಸಿದ್ದಲಿಂಗಸ್ವಾಮಿ, ಕೆ.ಬಿ. ಶಂಕರ್‌ನಾರಾಯಣ, ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಕಾರ್ಯದರ್ಶಿ ಎಸ್‌.ಟಿ.ವೀರೇಶ್‌, ರಾಜನಹಳ್ಳಿ ಶಿವಕುಮಾರ್‌, ಸತೀಶ್‌ ಪೂಜಾರಿ, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಮ್ಮ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ್‌, ಶಂಕರ್‌ಗೌಡ ಬಿರದಾರ್‌, ಗೌತಮ್‌ ಜೈನ್‌, ವಿಕ್ರಂ ಜೈನ್‌ ಮತ್ತಿತರರು ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next