Advertisement

ರಾಮ, ಲಕ್ಷ್ಮಣ, ಸೀತೆಯರಿಗೆ ಜನ್ಮ ನೀಡಿದ ಹಸು

09:47 AM Oct 18, 2019 | keerthan |

ಚಿಕ್ಕಮಗಳೂರು: ಸಾಮಾನ್ಯವಾಗಿ ಹಸುವೊಂದು ಒಮ್ಮೆಗೆ ಒಂದು ಕರುವಿಗೆ ಜನ್ಮ ನೀಡುತ್ತದೆ. ಅಪರೂಪವೆಂಬಂತೆ ಅವಳಿ ಕರುಗಳು ಹುಟ್ಟುವುದೂ ಇದೆ. ಆದರೆ ಇಲ್ಲೊಂದು ಹಸು ಏಕಕಾಲದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ್ದು ವಿಶೇಷವಾಗಿದೆ.

Advertisement

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನಂದಿಪುರ ಗ್ರಾಮದ ರಂಗಪ್ಪ ಎಂಬುವರಿಗೆ ಸೇರಿದ ಲಕ್ಷ್ಮಿ ಎಂಬ ಹೆಸರಿನ ದೇಸಿ ತಳಿಯ ಹಸು ಮೂರು ಕರುಗಳನ್ನು ಹಾಕಿದೆ.

ಮೂರು ಕರು ಹಾಕಿದ ಹಿನ್ನೆಲೆ ಮನೆಗೆ ಲಕ್ಷ್ಮಿ ಬಂದಂತೆ ಎಂದು ಸಂತೋಷಗೊಂಡಿರುವ ರಂಗಪ್ಪ ಅವರು ಮೂರು ಕರುಗಳಿಗೆ ಪೂಜೆ ಮಾಡಿದ್ದು, ನಾಮಕರಣವನ್ನೂ ನೆರವೇರಿಸಿದ್ದಾರೆ. ಈ ಕರುಗಳಲ್ಲಿ ಎರಡು ಗಂಡು ಮತ್ತು ಒಂದು ಹೆಣ್ಣು ಕರುವಾಗಿದ್ದು, ರಾಮ, ಲಕ್ಷ್ಮಣ, ಸೀತೆ ಎಂದು ಹೆಸರಿಟ್ಟಿದ್ದಾರೆ.

ಹಸುವೊಂದು ಮೂರು ಕರು ಹಾಕಿದೆ ಎಂಬ ವಿಷಯ ಅಕ್ಕಪಕ್ಕದ ಊರಿನಲ್ಲಿ ಹರಡುತ್ತಿದ್ದು, ಕರುಗಳನ್ನ ನೋಡಲು ಜನರು ಧಾವಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next