Advertisement

ಸಗಣಿ ಚಿಪ್‌ನಿಂದ ತಗ್ಗುತ್ತದೆ ಮೊಬೈಲ್‌ ರೇಡಿಯೇಷನ್‌

01:26 AM Oct 14, 2020 | mahesh |

ಹೊಸದಿಲ್ಲಿ: ಸಗಣಿಯಿಂದ ಸಿದ್ಧಪಡಿಸಿದ ಚಿಪ್‌ ಮೊಬೈಲ್‌ ರೇಡಿಯೇಷನ್‌ ತಡೆಯುತ್ತದೆ. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ ಎಂದು ರಾಷ್ಟ್ರೀಯ ಗೋ ಆಯೋಗದ ಅಧ್ಯಕ್ಷ ವಲ್ಲಭಭಾಯ್‌ ಕಥಿರಿಯಾ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, ಸಗಣಿಗೆ ರೇಡಿಯೇಷನ್‌ ಅನ್ನು ತಡೆಯಲು ಮತ್ತು ಪ್ರಭಾವ ತಗ್ಗಿಸುವ ಸಾಮರ್ಥ್ಯವಿದೆ ಎಂದರು. ಜತೆಗೆ ಸುದ್ದಿಗೊಷ್ಠಿಯಲ್ಲಿ ನೂತನವಾಗಿ ತಯಾರಿಸ ಲಾದ ಚಿಪ್‌ ಅನ್ನು ಪ್ರದರ್ಶಿಸಿದರು. ಮೊಬೈಲ್‌ಗ‌ಳಲ್ಲಿ ಈ ಚಿಪ್‌ ಅಳವಡಿಸಿದರೆ, ರೇಡಿಯೇಷನ್‌ ಪ್ರಮಾಣ ತಗ್ಗಿಸುತ್ತದೆ ಮತ್ತು ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ ಎಂದು ಹೇಳಿದ್ದಾರೆ.

Advertisement

ಇತ್ತೀಚೆಗೆ ಬಾಲಿವುಡ್‌ ನಟ ಅಕ್ಷಯ ಕುಮಾರ್‌ ಆರೋಗ್ಯ ಕಾರಣಕ್ಕೆ ಗೋ ಮೂತ್ರ ಸೇವಿಸುವುದಾಗಿ ಹೇಳಿದ್ದರು. ಅದರಿಂದ ಅವರಿಗೆ ಧನಾತ್ಮಕ ಪರಿಣಾಮಗಳು ಉಂಟಾದ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

33 ಕೋಟಿ ದೀಪಗಳು: ಗೋ ಮೂತ್ರದಿಂದ ಸ್ಯಾನಿಟೈಸರ್‌ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿರುವ ಆಯೋಗ ಸಗಣಿಯಿಂದ ಸಿದ್ಧಪಡಿಸುವ 33 ಕೋಟಿ ದೀಪಗಳ ಬಳಕೆಗೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಈ ಮೂಲಕ ದೀಪಾವಳಿ ಅವಧಿಯಲ್ಲಿ ಚೀನ ನಿರ್ಮಿತ ಹಣತೆ ಬಳಕೆ ತಗ್ಗಿಸಲು ಪ್ರಯತ್ನ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next