ಕಮತಗಿ: ಪಟ್ಟಣದ ಮುಖ್ಯರಸ್ತೆಗಳಲ್ಲಿ ಹಾಗೂ ಕಾಯಿಪಲ್ಲೆ ಮಾರಾಟ ಮಾಡುವ ಸ್ಥಳದಲ್ಲಿ ಬೀದಿ ದನಗಳ ಹಾವಳಿ ಹೆಚ್ಚಾಗಿದ್ದು, ವ್ಯಾಪಾರಸ್ಥರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.
ಪಟ್ಟಣದ ಗಾಂಧೀಚೌಕ್, ಹಳೆಕೆನರಾ ಬ್ಯಾಂಕ್ ರಸ್ತೆ, ಕಾಯಿಪಲ್ಲೆ ಮಾರುಕಟ್ಟೆ ಪ್ರದೇಶದಲ್ಲಿ ಬೀದಿದನಗಳ ಹಾವಳಿ ಹೆಚ್ಚಾಗಿದೆ. ರಸ್ತೆಯ ಪಕ್ಕಯ ಮಧ್ಯದಲ್ಲಿಯೇ ನಿಲ್ಲುವುದು, ಮಲಗುವುದರಿಂದ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ತೀವ್ರ ತೊಂದರೆಯಾಗಿದೆ. ಇದಲ್ಲದೇ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರ ಕಾಯಿಪಲ್ಲೆ ಚೀಲಗಳಿಗೆ ಬಾಯಿಹಾಕಿ ಹಾನಿ ಮಾಡುತ್ತಿರುವ ಘಟನೆ ನಿರಂತರವಾಗಿ ನಡೆದಿದೆ ಇದರಿಂದಾಗಿ ಗ್ರಾಹಕರಿಗೆ ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗಿದೆ ಎಂದು ವ್ಯಾಪಾರಸ್ಥರಾದ ಗಂಗಾಧರ ಕೊಪ್ಪಿ, ಹನಮಂತಪ್ಪ ಮಂಗಳಗುಡ್ಡ, ಮಲ್ಲವ್ವ ಮಡಿಕೇರ, ಶಿವಬಾಯವ್ವ ತೆಗ್ಗಿ, ಸುನೀಲ ತೆಗ್ಗಿ ದೂರಿದ್ದಾರೆ.
ಇದನ್ನೂ ಓದಿ:ಬಿಹಾರ ಚುನಾವಣೆ 2020: ಎಲ್ ಜೆಪಿ ಸೇರ್ಪಡೆ, 6 ವರ್ಷಗಳ ಕಾಲ 9 ಬಿಜೆಪಿ ಮುಖಂಡರ ಉಚ್ಛಾಟನೆ
ಬೀದಿದನಗಳ ಕ್ರಮಕ್ಕೆ ಆಗ್ರಹ: ಕಮತಗಿ ಪಟ್ಟಣದ ಮುಖ್ಯರಸ್ತೆಗಳಲ್ಲಿ ಹಾಗೂ ವ್ಯಾಪಾರ ಮಾಡುವ ಸ್ಥಳದ ಎಲ್ಲೆಂದರಲ್ಲಿ ಬೀದಿದನಗಳ ಹಾವಳಿ ಹೆಚ್ಚಾಗಿದ್ದು, ವ್ಯಾಪಾರ ವಹಿವಾಟು ನಡೆಸುವುದಕ್ಕೆ ತೀವ್ರ ತೊಂದರೆಯಾಗಿದ್ದು, ಸೂಕ್ತ ಕ್ರಮವನ್ನು ಜರುಗಿಸಬೇಕು ಎಂದು ಕಮತಗಿ ಪಟ್ಟಣದ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹುಚ್ಚೇಶ ಜಯ್ನಾ, ಉಪಾಧ್ಯಕ್ಷ ಖಾಜೇಸಾಬ ಕಲಬುರ್ಗಿ ಸ್ಥಳೀಯ ಪಟ್ಟಣ ಪಂಚಾಯತ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಪ್ರತಿ ಶುಕ್ರವಾರ ನಡೆಯುವ ವಾರದ ಸಂತೆಯಲ್ಲಿ ಹಾಗೂ ಪ್ರತಿದಿನ ನಡೆಯುವ ಕಾಯಿಪಲ್ಲೆ ವ್ಯಾಪಾರ ಸ್ಥಳದಲ್ಲಿ, ಮುಖ್ಯ ರಸ್ತೆಯಲ್ಲಿ ಬೀದಿದನಗಳ ಹಾವಳಿಯಿಂದ ವ್ಯಾಪಾರಕ್ಕೆ ತೀವ್ರ ತೊಂದರೆಯಾಗಿದೆ.
ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯತ ಸಿಬ್ಬಂದಿಗಳ ಗಮನಕ್ಕೆ ತಂದಾಗ ಈ ಹಿಂದೆ ಬಜಾರದಲ್ಲಿ ಜಮಾವಣೆಗೊಂಡಿದ್ದ 20ಕ್ಕೂ ಹೆಚ್ಚು ಬೀದಿ ದನಗಳನ್ನು ತಮ್ಮ ವಶಕ್ಕೆ ತಗೆದುಕೊಂಡು ಮಾಲೀಕರಿಗೆ ದಂಡವನ್ನು ಹಾಕುವ ಪ್ರಯತ್ನವನ್ನು ಮಾಡಿದ್ದಾರೆ. ಸಧ್ಯಕ್ಕೆ ಬೀದಿದನಗಳ ಹಾವಳಿ ಹೆಚ್ಚಾಗಿದ್ದು, ಪಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲ ದನಗಳನ್ನು ತಮ್ಮ ವಶಕ್ಕೆ ತಗೆದುಕೊಂಡು ನಿತ್ಯವಾಗುತ್ತಿರುವ ತೊಂದರೆ ಪರಿಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.